AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WI vs IND, 1st ODI: ಟೀಮ್ ಇಂಡಿಯಾ ಸ್ಪಿನ್ ಮೋಡಿ: ಅತ್ಯಲ್ಪ ಮೊತ್ತಕ್ಕೆ ವೆಸ್ಟ್ ಇಂಡೀಸ್ ಆಲೌಟ್

India vs West Indies 1st Odi: ಭಾರತ-ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಬಾರ್ಬಡೋಸ್​ನಲ್ಲಿ ನಡೆಯುತ್ತಿದೆ.

WI vs IND, 1st ODI: ಟೀಮ್ ಇಂಡಿಯಾ ಸ್ಪಿನ್ ಮೋಡಿ: ಅತ್ಯಲ್ಪ ಮೊತ್ತಕ್ಕೆ ವೆಸ್ಟ್ ಇಂಡೀಸ್ ಆಲೌಟ್
Team India
TV9 Web
| Edited By: |

Updated on:Jul 27, 2023 | 9:20 PM

Share

West Indies vs India, 1st ODI: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಭಾರತ ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್​ಗಳು ವಿಂಡೀಸ್​ಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು.

ಮೂರನೇ ಓವರ್​ನಲ್ಲಿ ಕೈಲ್ ಮೇಯರ್ಸ್​ (2) ವಿಕೆಟ್ ಪಡೆದು ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಮುಖೇಶ್ ಕುಮಾರ್ ಅಲಿಕ್ ಅಥನಾಝ್​ (22) ರನ್ನು ಪೆವಿಲಿಯನ್​ಗೆ ಕಳುಹಿಸಿದರು. ಇನ್ನು ಬ್ರಾಂಡನ್ ಕಿಂಗ್ (2) ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಯಾದ ಶಾಯ್ ಹೋಪ್ ಹಾಗೂ ಶಿಮ್ರಾನ್ ಹೆಟ್ಮೆಯರ್ 43 ರನ್​ಗಳ ಜೊತೆಯಾಟವಾಡುವ ಮೂಲಕ ದಿಢೀರ್ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದೇ ವೇಳೆ ದಾಳಿಗಿಳಿದ ರವೀಂದ್ರ ಜಡೇಜಾ ಹೆಟ್ಮೆಯರ್​ (11) ರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಆ ಬಳಿಕ ಬಂದ ರೋವ್​ಮನ್ ಪೊವೆಲ್ (4) ಜಡೇಜಾ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಶುಭ್​ಮನ್ ಗಿಲ್​​ಗೆ ಕ್ಯಾಚಿತ್ತರು. ಇದರ ಬೆನ್ನಲ್ಲೇ ರೊಮಾರಿಯೊ ಶೆಫರ್ಡ್ (0) ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಇನ್ನು ಡೊಮಿನಿಕ್ ಡ್ರೇಕ್ಸ್ (3) ಹಾಗೂ ಯಾನಿಕ್ ಕ್ಯಾರಿಯಾ (3) ಎಲ್​ಬಿ ಬಲೆಗೆ ಬೀಳಿಸಿದ ಕುಲ್ದೀಪ್ ಯಾದವ್ ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಪರಿಣಾಮ 22 ಓವರ್​ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು 114 ರನ್​ಗಳಿಸಿದರೂ, ಅದಾಗಲೇ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇದಾಗ್ಯೂ 43 ರನ್​ ಬಾರಿಸುವ ಮೂಲಕ ನಾಯಕ ಶಾಯ್ ಹೋಪ್ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಆದರೆ ಕುಲ್ದೀಪ್ ಯಾದವ್ ಎಸೆದ 23ನೇ ಓವರ್​ನ 3ನೇ ಎಸೆತವನ್ನು ಗುರುತಿಸುವಲ್ಲಿ ಎಡವಿದ ಶಾಯ್ ಹೋಪ್ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಇನ್ನು ಅಂತಿಮವಾಗಿ ಜೇಡನ್ ಸೀಲ್ಸ್ (0) ವಿಕೆಟ್ ಕಬಳಿಸುವ ಮೂಲಕ 23 ಓವರ್​ಗಳಲ್ಲಿ ವೆಸ್ಟ್ ಇಂಡೀಸ್​ ತಂಡವನ್ನು 114 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾದರು.

ಭಾರತದ ಪರ ಕುಲ್ದೀಪ್ ಯಾದವ್ 3 ಓವರ್​ಗಳಲ್ಲಿ ಕೇವಲ 6 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಶಾಯ್ ಹೋಪ್ (ನಾಯಕ) , ಕೈಲ್ ಮೇಯರ್ಸ್ , ಬ್ರಾಂಡನ್ ಕಿಂಗ್ , ಅಲಿಕ್ ಅಥಾನಾಝ್ , ಶಿಮ್ರಾನ್ ಹೆಟ್ಮೆಯರ್ , ರೋವ್​ಮನ್ ಪೊವೆಲ್ , ರೊಮಾರಿಯೋ ಶೆಫರ್ಡ್ , ಯಾನಿಕ್ ಕ್ಯಾರಿಯಾ , ಡೊಮಿನಿಕ್ ಡ್ರೇಕ್ಸ್ , ಜೇಡನ್ ಸೀಲ್ಸ್ , ಗುಡಕೇಶ್ ಮೋಟಿ.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ವಿರಾಟ್ ಕೊಹ್ಲಿ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್.

Published On - 9:11 pm, Thu, 27 July 23

Follow Us
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು