Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯ: ಸೋಲಿಗೆ ಕಾರಣ ರಿಷಭ್ ಪಂತ್..!

IPL 2025 CSK vs LSG: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 166 ರನ್​ ಕಲೆಹಾಕಿದರೆ, ಈ ಗುರಿಯನ್ನು ಸಿಎಸ್​ಕೆ ತಂಡವು 19.3 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

IPL 2025: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯ: ಸೋಲಿಗೆ ಕಾರಣ ರಿಷಭ್ ಪಂತ್..!
Dhoni - Pant
Follow us
ಝಾಹಿರ್ ಯೂಸುಫ್
|

Updated on: Apr 15, 2025 | 8:24 AM

IPL 2025: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದಾಘ್ಯೂ ರಿಷಭ್ ಪಂತ್ 49 ಎಸೆತಗಳಲ್ಲಿ 63 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್​ಗಳಲ್ಲಿ 166 ರನ್ ಕಲೆಹಾಕಿತು.

167 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 111 ರನ್​ಗಳು ಮಾತ್ರ. ಕೊನೆಯ 5 ಓವರ್​ಗಳಲ್ಲಿ ಸಿಎಸ್​ಕೆ ತಂಡವು 55 ರನ್​ಗಳ ಗುರಿ ಪಡೆದಿತ್ತು. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತೆಗೆದುಕೊಂಡ ಅಚ್ಚರಿಯ ನಿರ್ಧಾರಗಳೇ LSG ಪಾಲಿಗೆ ಮುಳುವಾಯಿತು.

ಪಂತ್ ಅಚ್ಚರಿಯ ನಡೆ:

15ನೇ ಓವರ್​ ಮುಕ್ತಾಯದ ವೇಳೆಗೆ ಮಹೇಂದ್ರ ಸಿಂಗ್ ಧೋನಿ ಕ್ರೀಸ್​ಗೆ ಆಗಮಿಸಿದ್ದರು. ಧೋನಿಗೆ ಸ್ಪಿನ್ ಬೌಲರ್‌ಗಳ ವಿರುದ್ಧ ಸಮಸ್ಯೆಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಪಿಚ್ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿದ್ದರೂ ರಿಷಭ್ ಪಂತ್ ರವಿ ಬಿಷ್ಣೋಯ್‌ಗೆ ಓವರ್ ನೀಡಲಿಲ್ಲ ಎಂಬುದೇ ಅಚ್ಚರಿ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಮೂರು ಓವರ್​ಗಳಲ್ಲಿ ಖೇವಲ 18 ರನ್ ನೀಡಿ 2 ವಿಕೆಟ್ ಪಡೆದಿದ್ದ ರವಿ ಬಿಷ್ಣೋಯ್ ಅವರಿಂದ ಕೊನೆಯ 5 ಓವರ್​ಗಳಲ್ಲಿ ಒಂದು ಓವರ್​ ಹಾಕಿಸದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಲೈವ್​ನಲ್ಲೇ ಕಾಮೆಂಟೇಟರ್​ಗಳು ಸಹ ಪ್ರಶ್ನೆಗಳೆನ್ನೆತ್ತಿದ್ದರು.

ಶಾರ್ದೂಲ್​ಗೆ ಪದೇ ಪದೇ ಓವರ್:

ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ದುಬಾರಿಯಾಗಿದ್ದು ಶಾರ್ದೂಲ್ ಠಾಕೂರ್. ಇದಾಗ್ಯೂ ರಿಷಭ್ ಪಂತ್ 17ನೇ ಮತ್ತು 19ನೇ ಓವರ್​ಗಳನ್ನು ಶಾರ್ದೂಲ್ ಠಾಕೂರ್​ಗೆ ನೀಡಿರುವುದು ಮತ್ತೊಂದು ಅಚ್ಚರಿ. ಲಯದಲ್ಲಿ ಇಲ್ಲದಿದ್ದರೂ ಶಾರ್ದೂಲ್ ಠಾಕೂರ್​ಗೆ ಸತತ ಬೌಲಿಂಗ್ ನೀಡುವ ಮೂಲಕ ಪಂತ್ ಪಂದ್ಯವನ್ನೇ ಕೈಚೆಲ್ಲಿಕೊಂಡರು.

ಚೆಂಡು ಬದಲಿಸಿದರೂ ಪ್ಲ್ಯಾನ್ ಬದಲಾಗಲಿಲ್ಲ:

ಈ ಪಂದ್ಯದ 16ನೇ ಓವರ್​ನ ನಂತರ ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದರು. ಉತ್ತಮ ಚೆಂಡಿನೊಂದಿಗೆ ಸ್ಪಿನ್ನರ್‌ಗೆ ಬೌಲಿಂಗ್ ಮಾಡುವುದು ಸುಲಭವಾಗುತ್ತಿತ್ತು. ಆದರೆ ರಿಷಭ್ ಪಂತ್ ರವಿ ಬಿಷ್ಣೋಯ್​ಗೆ ಓವರ್ ನೀಡದೇ, ಶಾರ್ದೂಲ್ ಠಾಕೂರ್​ಗೆ ಕೈಗೆ ಚೆಂಡು ನೀಡಿದರು.

ಅವೇಶ್ ಖಾನ್ ಯಶಸ್ವಿ:

ಈ ಪಂದ್ಯದ ಡೆತ್ ಓವರ್​ಗಳಲ್ಲಿ ಅವೇಶ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಇದರ ನಡುವೆ ಧೋನಿ ಬ್ಯಾಟ್​ನಿಂದ ಡೀಪ್ ಥರ್ಡ್​ಮ್ಯಾನ್​ನತ್ತ ಬೌಂಡರಿ ಹೋಯಿತು. ಇದಾಗ್ಯೂ ರಿಷಭ್ ಪಂತ್ ಅತ್ತ ಕಡೆ ಫೀಲ್ಡಿಂಗ್ ಸೆಟ್ ಮಾಡದಿರುವುದು ಕೂಡ ಅಚ್ಚರಿಗೆ ಕಾರಣವಾಗಿತ್ತು.

ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್

19ನೇ ಓವರ್​ ದುಬಾರಿ:

ಶಾರ್ದೂಲ್ ಠಾಕೂರ್ 3 ಓವರ್​ಗಳಲ್ಲಿ 37 ರನ್ ನೀಡಿದ್ದರು. ಇದಾಗ್ಯೂ ನಿರ್ಣಾಯಕ ಹಂತದಲ್ಲಿ ರಿಷಭ್ ಪಂತ್ 19ನೇ ಓವರ್​ ಅನ್ನು ಶಾರ್ದೂಲ್ ಠಾಕೂರ್ ಕೈಯಿಂದ ಹಾಕಿಸಿರುವುದೇ ಆಶ್ಚರ್ಯ. ಪರಿಣಾಮ ಈ ಓವರ್​ನಲ್ಲಿ ಫುಲ್ ಟಾಸ್ ನೋಬಾಲ್​ನೊಂದಿಗೆ ಶಾರ್ದೂಲ್ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಪರಿಣಾಮ ಗೆಲ್ಲಬಹುದಾಗಿದ್ದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಕೈಚೆಲ್ಲಿಕೊಂಡರು.