AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಅಭಿಮಾನಿಗಳೇ ಗಮನಿಸಿ: ಉದ್ಘಾಟನಾ ಪಂದ್ಯ ವೀಕ್ಷಿಸಲು ತೆರಳುವವರು ಈ ನಿಯಮ ಪಾಲಿಸಲೇ ಬೇಕು!

ಐಪಿಎಲ್ 2026ರ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಮಾರ್ಚ್ 28ರಂದು ನಡೆಯಲಿರುವ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಭದ್ರತಾ ಸಂಬಂಧಿತ ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ. ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಇಂದು ಎನ್‌ಎಸ್‌ಜಿ ಪಡೆ ಜೊತೆ ಮಾಕ್‌ಡ್ರಿಲ್ ನಡೆಯಲಿದೆ. ಪ್ರೇಕ್ಷಕರ ಸುರಕ್ಷತೆಗಾಗಿ ನಿರ್ಬಂಧಿತ ವಸ್ತುಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

RCB ಅಭಿಮಾನಿಗಳೇ ಗಮನಿಸಿ: ಉದ್ಘಾಟನಾ ಪಂದ್ಯ ವೀಕ್ಷಿಸಲು ತೆರಳುವವರು ಈ ನಿಯಮ ಪಾಲಿಸಲೇ ಬೇಕು!
ಚಿನ್ನಸ್ವಾಮಿ ಸ್ಟೇಡಿಯಂImage Credit source: AI Image
Shivaprasad B
| Edited By: |

Updated on:Mar 26, 2026 | 9:37 AM

Share

ಬೆಂಗಳೂರು, ಮಾರ್ಚ್​​ 26: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನೇನು ಎರಡು ದಿನವಷ್ಟೇ ಬಾಕಿ ಇರುವ ಕಾರಣ ಭರದ ಸಿದ್ಧತೆ ನಡೆದಿದೆ. ಕಳೆದ ಆವೃತ್ತಿಯ ವಿಜಯೋತ್ಸವದ ವೇಳೆ ಅವಘಡ ನಡೆದಿದ್ದ ಕಾರಣ ಈ ಬಾರಿ ಬೆಂಗಳೂರಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನಾಹುತಗಳು ನಡೆಯದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ.

ಇಂದು ಮಾಕ್ ಡ್ರಿಲ್

ಐಪಿಎಲ್ ಭದ್ರತೆಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಮಾಕ್​​ ಡ್ರಿಲ್​​ ನಡೆಯಲಿದೆ. ಬೆಂಗಳೂರು ಪೊಲೀಸರಿಂದ ಭದ್ರತೆ ಬಗ್ಗೆ ನಡೆಯಲಿರುವ ಅಣಕು ಪ್ರದರ್ಶನದಲ್ಲಿ NSG ಪಡೆ ಕೂಡ ಭಾಗಿಯಾಗಲಿದೆ. ಬೆಳಗ್ಗೆ 10 ಗಂಟೆಗೆ ಆರಂಭ ಆಗಲಿರುವ ಮಾಕ್ ಡ್ರಿಲ್​​ನಲ್ಲಿ, ಸ್ಟೇಡಿಯಂ ಗೇಟ್​​ಗಳಲ್ಲಿನ ಎಂಟ್ರಿ ಹಾಗೂ ಎಕ್ಸಿಟ್ ಬಳಿ ಭದ್ರತೆ ಹೇಗಿರಬೇಕು? ಸ್ಟೇಡಿಯಂ ಸುತ್ತಮುತ್ತ ಅಭಿಮಾನಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು? ತಪಾಸಣೆ, ಪರಿಶೀಲನೆ ಹೇಗಿರಬೇಕು ಎಂಬ ಬಗ್ಗೆ ತಾಲೀಮು ನಡೆಯಲಿದೆ. ಸುಮಾರು ಒಂದು ಸಾವಿರ ಪೊಲೀಸರು ಇದರಲ್ಲಿ ಭಾಗಿಯಾಗಲಿದ್ದು, ಸ್ಟೇಡಿಯಂ ಒಳಗಡೆ, ಹೊರಗಡೆ ಸಿಬ್ಬಂದಿ ನಿಯೋಜನೆ ಮಾಡಿ ಅಣುಕು ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಸಂಚಾರ ಪೊಲೀಸರಿಂದಲೂ ಸ್ಟೇಡಿಯಂ ಸುತ್ತಲೂ ಟ್ರಾಫಿಕ್​​ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಯಲಿದೆ.

ಇದನ್ನೂ ಓದಿ: ಆರ್​ಸಿಬಿ ತಂಡದಲ್ಲಿ ಯಶ್ ದಯಾಳ್​ನ ಬದಲಿಸುವವರ್ಯಾರು?

ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಕ್ರಮ

IPL ಪಂದ್ಯ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾಲ್ತುಳಿತ ದುರಂತ ನಂತರ ಫುಲ್ ಅಲರ್ಟ್ ಆಗಿರುವ ಕೆಎಸ್​ಸಿಎ, ಮ್ಯಾಚ್ ನೋಡಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದೆ. ಸ್ಟೇಡಿಯಂ ಪ್ರವೇಶ ಮಾಡುವವರಿಗೆ ಕೆಲವು ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧ ಮಾಡಲಾಗಿದ್ದು, ಯಾವ ವಸ್ತು ತರಬಾರದೆಂದು ಬೋರ್ಡ್ KSCA ಹಾಕಿದೆ. ಪಿಸ್ತೂಲ್, ಚಾಕು, ಕತ್ತರಿ, ಆಲ್ಕೋಹಾಲ್, ಬಾಟಲ್, ಪಟಾಕಿ, ಪೆಟ್ರೋಲ್, ಡೀಸೆಲ್, ಲೈಟರ್, ಫುಡ್ ಐಟಮ್ಸ್, ಸಿಗರೇಟ್​​, ಬ್ಯಾಗ್, ಹೆಲ್ಮೆಟ್​, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಮರಾ ಸೇರಿದಂತೆ ಅಪಾಯಕಾರಿ ವಸ್ತುಗಳು ಸೇರಿ ಹಲವು ಸಾಮಗ್ರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:14 am, Thu, 26 March 26

Follow Us
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಮಡಿಕೇರಿಯಲ್ಲಿ ಹುಲಿ ಕಾಟ: ಥರ್ಮಲ್ ಡ್ರೋನ್ ಕಣ್ಗಾವಲು
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಅಮೆರಿಕದ ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ವಿಡಿಯೋ ನೋಡಿ
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
7 ವರ್ಷಗಳ ಬಳಿಕ ಇರಾನ್​ನಿಂದ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹಡಗು!
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
‘ಗೂಗಲ್​ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ