AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs LSG: ಕೋಲ್ಕತ್ತಾದಲ್ಲಿ 3 ದಿನಗಳಿಂದ ಮಳೆ; ಕೆಕೆಆರ್​ನ 4ನೇ ಪಂದ್ಯಕ್ಕೂ ಮಳೆ ಅಡ್ಡಿ?

IPL 2026 KKR vs LSG Match 15: ಐಪಿಎಲ್ 2026 ರ 15ನೇ ಪಂದ್ಯದಲ್ಲಿ ಏಪ್ರಿಲ್ 9 ರಂದು ಕೆಕೆಆರ್ ಮತ್ತು ಎಲ್‌ಎಸ್‌ಜಿ ತಂಡಗಳು ಕೋಲ್ಕತ್ತಾದಲ್ಲಿ ಮುಖಾಮುಖಿಯಾಗಲಿವೆ. ಕೆಕೆಆರ್ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಎಲ್‌ಎಸ್‌ಜಿ ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದೆ. ಮಳೆಯ ಸಾಧ್ಯತೆಯಿದ್ದರೂ, ಸಂಜೆ ಹವಾಮಾನ ಸ್ಪಷ್ಟವಾಗಲಿದೆ. ಪಂದ್ಯದ ಸಂಭಾವ್ಯ ಆಡುವ XI, ಹವಾಮಾನ ಮತ್ತು ವೀಕ್ಷಣೆ ವಿವರಗಳನ್ನು ಇಲ್ಲಿ ತಿಳಿಯಿರಿ.

KKR vs LSG: ಕೋಲ್ಕತ್ತಾದಲ್ಲಿ 3 ದಿನಗಳಿಂದ ಮಳೆ; ಕೆಕೆಆರ್​ನ 4ನೇ ಪಂದ್ಯಕ್ಕೂ ಮಳೆ ಅಡ್ಡಿ?
Kkr Vs Lsg
ಪೃಥ್ವಿಶಂಕರ
|

Updated on: Apr 08, 2026 | 9:37 PM

Share

ಐಪಿಎಲ್ 2026 (IPL 2026) ರ 15 ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಕೆಕೆಆರ್ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಎರಡು ಪಂದ್ಯಗಳನ್ನು ಸೋತಿದ್ದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೆಕೆಆರ್ ತಂಡ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ಲಕ್ನೋ ತಂಡ ಎರಡು ಪಂದ್ಯಗಳನ್ನಾಡಿದ್ದು, ಒಂದು ಪಂದ್ಯದಲ್ಲಿ ಸೋತು, ಒಂದು ಪಂದ್ಯವನ್ನು ಗೆದ್ದಿದೆ.

ಹವಾಮಾನ ಹೇಗಿರಲಿದೆ?

ಕೋಲ್ಕತ್ತಾದ ಹವಾಮಾನದ ಬಗ್ಗೆ ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೂ ಮುನ್ನ, ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಎರಡು ತಂಡಗಳ ಅಭ್ಯಾಸವು ರದ್ದಾಗಿದೆ. ಇದೀಗ ಪಂದ್ಯದ ದಿನ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡುವುದಾದರೆ.. ಅಕ್ಯೂವೆದರ್ ಪ್ರಕಾರ, ಏಪ್ರಿಲ್ 9 ರಂದು ಬೆಳಿಗ್ಗೆ 11 ಗಂಟೆಗೆ ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ ಶೇ. 66 ರಷ್ಟು ಇರುತ್ತದೆ. ಆದಾಗ್ಯೂ, ಸಂಜೆ ಪಂದ್ಯ ಪ್ರಾರಂಭವಾದ ನಂತರ, ಹವಾಮಾನವು ಸ್ಪಷ್ಟವಾಗಿರಲಿದ್ದು, ಮಳೆಯಾಗುವ ಸಾಧ್ಯತೆ ಬಹುತೇಕ ಇಲ್ಲ.

ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯ ಏಪ್ರಿಲ್ 9, 2026 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಟಾಸ್ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ನಡೆಯಲಿದ್ದು, ಪಂದ್ಯವು ಸಂಜೆ 7:30 ಗಂಟೆಗೆ ಪ್ರಾರಂಭವಾಗುತ್ತದೆ.

ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಐಪಿಎಲ್ 2026 ರಲ್ಲಿ ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯವನ್ನು OTT ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸ್ಟಾರ್ ಸ್ಪೋರ್ಟ್ಸ್ ಮೂಲಕ ಟಿವಿಯಲ್ಲಿಯೂ ವೀಕ್ಷಿಸಬಹುದು.

DC vs GT Playing XI: ಟಾಸ್ ಗೆದ್ದ ಡೆಲ್ಲಿ; ಗುಜರಾತ್ ತಂಡದಲ್ಲಿ ಬದಲಾವಣೆ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI: ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್, ವೈಭವ್ ಅರೋರಾ, ಬ್ಲೆಸಿಂಗ್ ಮುಜರಬಾನಿ, ಕಾರ್ತಿಕ್ ತ್ಯಾಗಿ. ಇಂಪ್ಯಾಕ್ಟ್ ಪ್ಲೇಯರ್ – ವರುಣ್ ಚಕ್ರವರ್ತಿ

ಲಕ್ನೋ: ಸಂಭಾವ್ಯ ಪ್ಲೇಯಿಂಗ್ XI: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಮೊಹಮ್ಮದ್ ಶಮಿ. ಇಂಪ್ಯಾಕ್ಟ್ ಪ್ಲೇಯರ್: ಮೊಹ್ಸಿನ್ ಖಾನ್/ಮಣಿಮಾರನ್ ಸಿದ್ಧಾರ್ಥ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us