AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ

MS Dhoni's IPL 2026 Return: ಐಪಿಎಲ್ 2026ರಲ್ಲಿ ಸಿಎಸ್‌ಕೆ ಪ್ಲೇಆಫ್ ಭವಿಷ್ಯ ಅನಿಶ್ಚಿತವಾಗಿದ್ದು, ಧೋನಿ ಗಾಯದಿಂದಾಗಿ ಇನ್ನೂ ಕಣಕ್ಕಿಳಿದಿಲ್ಲ. ಲಕ್ನೋ ವಿರುದ್ಧದ ಪಂದ್ಯಕ್ಕೆ ಧೋನಿ ತಂಡದೊಂದಿಗೆ ಪ್ರಯಾಣಿಸುತ್ತಿದ್ದರೂ, ಅವರ ಆಡುವಿಕೆ ಖಚಿತವಿಲ್ಲ. ತವರು ನೆಲದಲ್ಲಿ ಮೇ 18 ರಂದು ನಡೆಯುವ ಕೊನೆಯ ಲೀಗ್ ಪಂದ್ಯ ಧೋನಿಯ ಐಪಿಎಲ್ ವಿದಾಯ ಪಂದ್ಯವಾಗುವ ಸಾಧ್ಯತೆಯಿದೆ. ಅಭಿಮಾನಿಗಳಿಗೆ ಧೋನಿ ಆಟ ನೋಡಲು ಕಾತರ.

IPL 2026: ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ
Ms Dhoni
ಪೃಥ್ವಿಶಂಕರ
|

Updated on:May 13, 2026 | 3:50 PM

Share

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ 2026 (IPL 2026) ರಲ್ಲಿ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅಂದರೆ ಲೀಗ್ ಹಂತದಲ್ಲಿ ಎಲ್ಲೋ ಆರ್ಮಿಗೆ ಇನ್ನು ಉಳಿದಿರುವುದು ಕೇವಲ ಮೂರೇ ಮೂರು ಪಂದ್ಯಗಳು. ಈ ಮೂರು ಪಂದ್ಯಗಳನ್ನು ಗೆದ್ದರೂ ಸಿಎಸ್​ಕೆ ಪ್ಲೇಆಫ್​ಗೇರಬೇಕೆಂದರೆ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗಿದೆ. ಇದೆಲ್ಲದರ ನಡುವೆ ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಧೋನಿ (MS Dhoni) ಯಾವಾಗ ಆಡುತ್ತಾರೆ? ಎಂಬುದು. ಪ್ರಸ್ತುತ ಧೋನಿ, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಿರುವಾಗ ಸಿಎಸ್​ಕೆ ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಾದರೂ ಧೋನಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಧೋನಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಧೋನಿ ಆರಂಭಿಕ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂದು ಫ್ರಾಂಚೈಸಿ ಹೇಳಿತ್ತು. ಆದರೀಗ ಲೀಗ್ ಹಂತ ಮುಗಿಯುವುದಕ್ಕೆ ಬಂದರೂ ಧೋನಿ ಆಡುವುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಇದೀಗ ಧೋನಿ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ಸಿಕ್ಕಿದ್ದು, ಲಕ್ನೋ ವಿರುದ್ಧದ ಪಂದ್ಯಕ್ಕೆ ಧೋನಿ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ.

CSK CEO ಹೇಳಿದ್ದೇನು?

ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕ್‌ಬಜ್ ವರದಿ ಮಾಡಿದ್ದು, ಲಕ್ನೋಗೆ ಸಿಎಸ್​ಕೆ ತಂಡ ಪ್ರಯಾಣ ಮಾಡಲಿರುವ ಇಂಡಿಗೊ ವಿಮಾನದಲ್ಲಿ ಒಟ್ಟು 60 ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಈ 60 ಪ್ರಯಾಣಿಕರಲ್ಲಿ ಧೋನಿ ಕೂಡ ಸೇರಿದ್ದಾರೆ. ಅಂದರೆ ಧೋನಿ ತಂಡದೊಂದಿಗೆ ಲಕ್ನೋಗೆ ಪ್ರಯಾಣಿಸಲ್ಲಿದ್ದು, ಅಲ್ಲಿ ಅವರು ತಂಡದೊಂದಿಗೆ ಇರಲಿದ್ದಾರೆ. ಆದಾಗ್ಯೂ ಧೋನಿ ಈ ಪಂದ್ಯದಲ್ಲಿ ಆಡುತ್ತಾರಾ? ಅಥವಾ ಇಲ್ಲವಾ ಎಂಬುದು ಇನ್ನು ಖಚಿತವಾಗಿಲ್ಲ.

RCB vs MI: ಒಂದೇ ಪಂದ್ಯದಲ್ಲಿ ಒಟ್ಟಿಗೆ ಧೋನಿ ದಾಖಲೆ ಮುರಿದ ರೋಹಿತ್, ಕೊಹ್ಲಿ

ತವರಿನಲ್ಲಿ ಧೋನಿ ಕೊನೆ ಪಂದ್ಯ?

ಒಂದು ವೇಳೆ ಧೋನಿ ಲಕ್ನೋ ವಿರುದ್ಧವೂ ಕಣಕ್ಕಿಳಿಯದಿದ್ದರೆ, ಮೇ 18 ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆಗಳಿವೆ. ಏಕೆಂದರೆ ಸಿಎಸ್​ಕೆ ತನ್ನ ತವರು ನೆಲವಾದ ಎಂಎ ಚಿದಂಬರಂ ಮೈದಾನದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಬಳಿಕ ಸಿಎಸ್​ಕೆ ಈ ಆವೃತ್ತಿಯಲ್ಲಿ ಯಾವ ಪಂದ್ಯವನ್ನು ಇಲ್ಲಿ ಆಡುವುದಿಲ್ಲ. ಹೀಗಾಗಿ ನಿವೃತ್ತಿ ಅಂಚಿನಲ್ಲಿರುವ ಧೋನಿ, ಸಿಎಸ್​ಕೆಯ ತವರು ನೆಲದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿ ಐಪಿಎಲ್​ಗೆ ವಿದಾಯ ಹೇಳುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Wed, 13 May 26

Follow Us
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?