AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NZ vs SL: ರೋಹಿತ್ ಪಡೆಗೆ ಆಪದ್ಬಾಂಧವನಾದ ಮಿಚೆಲ್; ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ

NZ vs SL: ಆಸ್ಟ್ರೇಲಿಯಾ ವಿರುದ್ಧದ ಅಹಮದಾಬಾದ್ ಟೆಸ್ಟ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಿದರೂ ಕೂಡ ಶ್ರೀಲಂಕಾ ತಂಡದ ಸೋಲು ಭಾರತವನ್ನು ಫೈನಲ್​ಗೆ ಕರೆದೊಯ್ಯಲ್ಲಿದೆ.

NZ vs SL: ರೋಹಿತ್ ಪಡೆಗೆ ಆಪದ್ಬಾಂಧವನಾದ ಮಿಚೆಲ್; ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ
ಮಿಚೆಲ್, ರೋಹಿತ್
ಪೃಥ್ವಿಶಂಕರ
|

Updated on:Mar 11, 2023 | 1:43 PM

Share

ಒಂದೇ ದಿನದಲ್ಲಿ ಟೀಂ ಇಂಡಿಯಾಕ್ಕೆ (Team India) ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಮೊದಲನೆಯದಾಗಿ ಅಹಮದಾಬಾದ್​ನಲ್ಲಿ (India Vs Australia) ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ರೋಹಿತ್ (Rohit Sharma) ಪಡೆ ಉತ್ತಮ ಪ್ರದರ್ಶನ ನೀಡುತ್ತಿದೆ. ಇತ್ತ ದೂರದ ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸುವುದರೊಂದಿಗೆ ಕಿವೀಸ್ ಪಡೆ (New Zealand vs Sri Lanka ) ಭಾರತಕ್ಕೆ ಎರಡನೇ ಸಿಹಿ ಸುದ್ದಿ ನೀಡಿದೆ. ವಾಸ್ತವವಾಗಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಆಡಬೇಕೆಂದರೆ ಶ್ರೀಲಂಕಾ ತಂಡ ಟೆಸ್ಟ್ ಸರಣಿಯಲ್ಲಿ ಸೋಲಲೇಬೇಕಾಗಿದೆ. ಇದೀಗ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡ 83 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಡಬ್ಲ್ಯುಟಿಸಿ ಹಾದಿ ಸುಗಮ

ಈ ಟೆಸ್ಟ್​ನಲ್ಲಿ ಶ್ರೀಲಂಕಾ ತಂಡ ಸೋಲನುಭವಿಸಿದರೆ, ಟೀಂ ಇಂಡಿಯಾ ಸುಲಭವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲಿದೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಅಹಮದಾಬಾದ್ ಟೆಸ್ಟ್‌ನಲ್ಲಿ ಭಾರತ ಹಿನ್ನಡೆ ಅನುಭವಿಸಿದರೂ ಕೂಡ ಶ್ರೀಲಂಕಾ ತಂಡದ ಸೋಲು ಭಾರತವನ್ನು ಫೈನಲ್​ಗೆ ಕರೆದೊಯ್ಯಲ್ಲಿದೆ.

IND vs AUS: ಒಂದೇ ಇನ್ನಿಂಗ್ಸ್​ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್..!

ಮೊದಲ ಟೆಸ್ಟ್​ನಲ್ಲಿ ಶ್ರೀಲಂಕಾ ಬಲಿಷ್ಠ ಆರಂಭ ಪಡೆದುಕೊಂಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 355 ರನ್ ಬಾರಿಸುವುದರೊಂದಿಗೆ ನ್ಯೂಜಿಲೆಂಡ್ ತಂಡದ ಟಾಪ್ ಆರ್ಡರ್ ಅನ್ನು ಬೇಗನೆ ಪೆವಿಲಿಯನ್​ಗಟ್ಟುವುದರೊಂದಿಗೆ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವ ಸೂಚನೆ ನೀಡಿತ್ತು. ಆದರೆ ಶನಿವಾರದಂದು ಇಡೀ ಪಂದ್ಯದ ದಿಕ್ಕನೇ ಬದಲಿಸಿದ ಡ್ಯಾರೆಲ್ ಮಿಚೆಲ್ ಶತಕ ಬಾರಿಸುವ ಮೂಲಕ ನ್ಯೂಜಿಲೆಂಡ್‌ಗೆ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕೆ ಸಿಲುಕಿಕೊಂಡಿದೆ.

ಶ್ರೀಲಂಕಾಕ್ಕೆ ಆರಂಭಿಕ ಆಘಾತ

ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 83 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಮೂರನೇ ದಿನದ ಅಂತ್ಯದಲ್ಲಿ ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ ಮತ್ತು ಕುಸಾಲ್ ಮೆಂಡಿಸ್ ರೂಪದಲ್ಲಿ ಹಿನ್ನಡೆ ಅನುಭವಿಸಿತು. ಫರ್ನಾಂಡೊ 28 ರನ್ ಗಳಿಸಿದರೆ, ಕರುಣಾರತ್ನೆ 17 ಮತ್ತು ಮೆಂಡಿಸ್ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಈ 3 ವಿಕೆಟ್​ ಕಳೆದುಕೊಂಡಿರುವ ಲಂಕಾ ದಿನದಾಟದಂತ್ಯಕ್ಕೆ 65 ರನ್‌ಗಳ ಮುನ್ನಡೆ ಸಾಧಿಸಿದೆ.

ಡ್ಯಾರೆಲ್ ಮಿಚೆಲ್ ಶತಕ

ಇದಕ್ಕೂ ಮೊದಲು, ಲಂಕಾ ನೀಡಿದ 355 ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 162 ರನ್​ಗಳಿಗೆ 5 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದರೊಂದಿಗೆ 3ನೇ ದಿನದಾಟ ಆರಂಭಿಸಿದ ಕಿವೀಸ್ ಪರ ಡ್ಯಾರೆಲ್ ಮಿಚೆಲ್ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 124 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಿಚೆಲ್, ಇದಾದ ಬಳಿಕ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮಿಚೆಲ್ ಅವರ ಶತಕದ ಆಧಾರದ ಮೇಲೆ ಕಿವೀಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 373 ರನ್ ಗಳಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Sat, 11 March 23

Follow Us