AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

36 ಎಸೆತಗಳಲ್ಲಿ 154 ರನ್ ಚಚ್ಚಿದ ಪಾಕಿಸ್ತಾನ್: ವಿಶ್ವ ದಾಖಲೆ ಜಸ್ಟ್ ಮಿಸ್!

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಬೌಲ್​ ಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ಚಾಂಪಿಯನ್ ಎನಿಸಿಕೊಂಡರೆ, ಪ್ಲೇಟ್ ಫೈನಲ್​ನಲ್ಲಿ ಪಾಕಿಸ್ತಾನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಆಸ್ಟ್ರೇಲಿಯಾವನ್ನು ಮಣಿಸಿ ಅಫ್ಘಾನಿಸ್ತಾನ್ ತಂಡ ತನ್ನದಾಗಿಸಿಕೊಂಡಿದೆ.

36 ಎಸೆತಗಳಲ್ಲಿ 154 ರನ್ ಚಚ್ಚಿದ ಪಾಕಿಸ್ತಾನ್: ವಿಶ್ವ ದಾಖಲೆ ಜಸ್ಟ್ ಮಿಸ್!
Pakistan Image Credit source: HKS
ಝಾಹಿರ್ ಯೂಸುಫ್
|

Updated on:Nov 02, 2026 | 9:09 AM

Share

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಪ್ಲೇಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಮೌಂಗ್ ಕಾಕ್‌ನ ಮಿಷನ್ ರೋಡ್ ಗ್ರೌಂಡ್​ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡದ ನಾಯಕ ಅಮೀರ್ ಖಲೀಮ್ ಬೌಲಿಂಗ್ ಆಯ್ದುಕೊಂಡಿದ್ದರು.

ಸಿಕ್ಸರ್‌ಗಳ ಸುರಿಮಳೆ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡಕ್ಕೆ ನಾಯಕ ಅಬ್ಬಾಸ್ ಅಫ್ರಿದಿ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಹೊಡಿಬಡಿ ಆಟವಾಡಿದ ಅಫ್ರಿದಿ 16 ಎಸೆತಗಳಲ್ಲಿ ಚಚ್ಚಿದ್ದು ಬರೋಬ್ಬರಿ 73 ರನ್​ಗಳು. ಈ 73 ರನ್​ಗಳಲ್ಲಿ 11 ಸಿಕ್ಸ್​ ಹಾಗೂ 1 ಫೋರ್ ಒಳಗೊಂಡಿತ್ತು.

ಅಬ್ಬಾಸ್ ಅಫ್ರಿದಿಗೆ ಉತ್ತಮ ಸಾಥ್ ನೀಡಿದ ಅಬ್ದುಲ್ ಸಮದ್ ಕೇವಲ 7 ಎಸೆತಗಳಲ್ಲಿ 32 ರನ್ (2 ಫೋರ್, 4 ಸಿಕ್ಸರ್) ಹಾಗೂ ಅಹ್ಮದ್ ದಾನಿಯಾಲ್ 5 ಎಸೆತಗಳಲ್ಲಿ 25 ರನ್ (4 ಸಿಕ್ಸರ್) ಬಾರಿಸಿ ಒಮಾನ್ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದರು. ಈ ಮೂಲಕ ಪಾಕಿಸ್ತಾನ್ ತಂಡ 6 ಓವರ್​ಗಳಲ್ಲಿ ಬರೋಬ್ಬರಿ 154 ರನ್​ ಕಲೆಹಾಕಿತು.

ಒಮಾನ್ ದಿಟ್ಟ ಹೋರಾಟ ವ್ಯರ್ಥ:

155 ರನ್‌ಗಳ ಅಸಾಧ್ಯ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಉಸ್ಮಾನ್ ಅಲಿ 17 ಎಸೆತಗಳಲ್ಲಿ 67 ರನ್ (4 ಫೋರ್, 8 ಸಿಕ್ಸರ್) ಮತ್ತು ಝೊಹೈಬ್ ಅಮಾನತ್ 18 ಎಸೆತಗಳಲ್ಲಿ 61 ರನ್ (3 ಫೋರ್, 8 ಸಿಕ್ಸರ್) ಚಚ್ಚುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದರು. ಆದರೆ, ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 136 ರನ್‌ಗಳಷ್ಟೇ ಗಳಿಸಲು ಶಕ್ತವಾಗಿ, 18 ರನ್‌ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಪ್ಲೇಟ್ ಫೈನಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ವಿಶ್ವ ದಾಖಲೆಯಲ್ಲ!

ಪಾಕಿಸ್ತಾನ್ ತಂಡ 6 ಓವರ್​ಗಳಲ್ಲಿ 154 ರನ್ ಚಚ್ಚಿದರೂ ಇದು ವಿಶ್ವ ದಾಖಲೆಯಾಗಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲೇ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 6 ಓವರ್​ಗಳಲ್ಲಿ ಬರೋಬ್ಬರಿ 159 ರನ್ ಸಿಡಿಸಿತ್ತು. ಈ ಮೂಲಕ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಸರ್ವಕಾಲಿಕ ದಾಖಲೆಯನ್ನು ಆಸ್ಟ್ರೇಲಿಯಾ ತನ್ನ ಹೆಸರಿಗೆ ಬರೆದುಕೊಂಡಿತ್ತು.

ಇದನ್ನೂ ಓದಿ: ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯ ಚೇಸಿಂಗ್

ಇದೀಗ ಪಾಕಿಸ್ತಾನ ತಂಡ ಒಮಾನ್ ವಿರುದ್ಧ ಈ ಬೃಹತ್ ದಾಖಲೆಯ ಸಮೀಪಕ್ಕೆ ತಲುಪಿದರೂ, ಕೇವಲ 6 ರನ್​ಗಳ ಕೊರತೆಯಿಂದಾಗಿ ಹೊಸ ವಿಶ್ವ ದಾಖಲೆ ನಿರ್ಮಿಸುವ ಸುವರ್ಣ ಅವಕಾಶವನ್ನು ಕೈಚೆಲ್ಲಿಕೊಂಡಿದೆ.

Published On - 9:09 am, Mon, 2 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ