AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ಟೂರ್ನಿಗೆ PSL ಸವಾಲು!

ಜಾಗತಿಕ ಕ್ರಿಕೆಟ್‌ನ ಅತಿ ದೊಡ್ಡ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೆ ನಿಲ್ಲುವ ತಾಕತ್ತು ಜಗತ್ತಿನ ಬೇರೆ ಯಾವ ಲೀಗ್‌ಗಿದೆ? ಶ್ರೀಮಂತಿಕೆ, ಗ್ಲಾಮರ್ ಮತ್ತು ಗುಣಮಟ್ಟದಲ್ಲಿ ಸದಾ ನಂ.1 ಸ್ಥಾನದಲ್ಲಿರುವ ಐಪಿಎಲ್ ಸಾಮ್ರಾಜ್ಯಕ್ಕೆ, ಈಗ ಪಾಕಿಸ್ತಾನ ಸೂಪರ್ ಲೀಗ್ ಅನಗತ್ಯವಾಗಿ ಸವಾಲು ಹಾಕಲು ಹೊರಟಿದೆ. ಈ ಸವಾಲಿನ ಹಿಂದಿರುವ ಪ್ಲ್ಯಾನ್​​ಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

IPL ಟೂರ್ನಿಗೆ PSL ಸವಾಲು!
Psl Vs IplImage Credit source: x.com
ಝಾಹಿರ್ ಯೂಸುಫ್
|

Updated on: Oct 08, 2026 | 3:03 PM

Share

ಜಾಗತಿಕ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳು ಬಂದರೆ ಸಾಕು, ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿರುತ್ತದೆ. ಐಪಿಎಲ್ ಎಂಬ ಹಣದ ಹೊಳೆ ಹರಿಯುವ ಟಿ20 ಲೀಗ್​ಗೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳಿಲ್ಲದಂತೆ ವಿಶೇಷ ‘ವಿಂಡೋ’ ನೀಡುತ್ತದೆ. ಆದರೆ, 2027ರಲ್ಲಿ ಈ ಏಕಸ್ವಾಮ್ಯಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನೇರವಾಗಿ ಸವಾಲು ಹಾಕಲು ಮುಂದಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್‌ನ 12ನೇ ಆವೃತ್ತಿಯನ್ನು ಮಾರ್ಚ್ 18 ರಿಂದ ಮೇ 2 ರವರೆಗೆ ನಡೆಸುವುದಾಗಿ ಪಿಸಿಬಿ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಐಪಿಎಲ್ ಮತ್ತು ಪಿಎಸ್​ಎಲ್ ಮುಖಾಮುಖಿಯಾಗುವುದು ಕೂಡ ಖಚಿತವಾಗಿದೆ. ಏಕೆಂದರೆ ಐಪಿಎಲ್​ ಮಾರ್ಚ್ 10  ರಿಂದ ಶುರುವಾಗುವ ಸಾಧ್ಯತೆಯಿದ್ದು, ಮೇ 15 ರಂದು ಫೈನಲ್ ನಡೆಸಲು ಪ್ಲ್ಯಾನ್ ರೂಪಿಸಲಾಗಿದೆ.

ಇತ್ತ ಪಾಕಿಸ್ತಾನ್ ಸೂಪರ್ ಲೀಗ್ ಮಾರ್ಚ್ 18 ರಿಂದ ಮೇ 2 ರವರೆಗೆ ನಡೆಯುವುದರಿಂದ ಒಂದೇ ದಿನ ಎರಡು ಟೂರ್ನಿಯ ಶೇ. 80 ಕ್ಕಿಂತ ಪಂದ್ಯಗಳು ನಡೆಯಲಿದೆ. ಇದು ಕೇವಲ ಎರಡು ಲೀಗ್‌ಗಳ ನಡುವಿನ ಪೈಪೋಟಿಯಲ್ಲ, ಕ್ರಿಕೆಟ್ ರಾಜತಾಂತ್ರಿಕತೆ ಮತ್ತು ಬಿಸಿನೆಸ್ ಸಾಮ್ರಾಜ್ಯಗಳ ನಡುವಿನ ಜಿದ್ದಾಜಿದ್ದಿ.

  • ಇಂಡಿಯನ್ಸ್ ಪ್ರೀಮಿಯರ್ ಲೀಗ್ ಡೇಟ್: ಮಾರ್ಚ್ 10 ರಿಂದ ಮೇ 15 (ತಾತ್ಕಾಲಿಕ ದಿನಾಂಕ)
  • ಪಾಕಿಸ್ತಾನ್ ಸೂಪರ್ ಲೀಗ್ ಡೇಟ್: ಮಾರ್ಚ್ 18 ರಿಂದ ಮೇ 2

ಪಿಸಿಬಿ ಇಂತಹದೊಂದು ಸಾಹಸಕ್ಕೆ ಕೈಹಾಕಿದ್ದು ಏಕೆ?

ಸ್ಥಳೀಯ ಮಾರುಕಟ್ಟೆಯ ಲಾಭ: ಪಾಕಿಸ್ತಾನದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಪಂದ್ಯಗಳನ್ನು ನಡೆಸಿದರೆ ಕ್ರೀಡಾಂಗಣಕ್ಕೆ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಾರೆ ಮತ್ತು ಟಿವಿ ರೇಟಿಂಗ್ಸ್ ಹೆಚ್ಚುತ್ತದೆ ಎಂಬುದು ಫ್ರಾಂಚೈಸಿಗಳ ಲೆಕ್ಕಾಚಾರ.

8 ತಂಡಗಳ ವಿಸ್ತರಣೆ: ಮುಂದಿನ ಆವೃತ್ತಿಗಳಿಂದ ಪಿಎಸ್ಎಲ್ 8 ತಂಡಗಳ ಬೃಹತ್ ಲೀಗ್ ಆಗಿ ಬದಲಾಗುತ್ತಿದೆ. ಹೀಗಾಗಿ ಹೆಚ್ಚಿನ ಪಂದ್ಯಗಳನ್ನು ಆಯೋಜಿಸಲು ಪಿಸಿಬಿಗೆ ಸುದೀರ್ಘ ಅವಧಿಯ ಅಗತ್ಯವಿತ್ತು.

ಜಾಗತಿಕ ಕ್ರಿಕೆಟ್ ಮೇಲಾಗುವ ಪ್ರಮುಖ ಪರಿಣಾಮಗಳು

ಆಟಗಾರರ ಆಯ್ಕೆ: ಐಪಿಎಲ್‌ನಲ್ಲಿ ಆಡುವ ಅಂತರರಾಷ್ಟ್ರೀಯ ಆಟಗಾರರು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಹಾಗಾಗಿ ಯಾವುದೇ ಟಾಪ್ ಆಟಗಾರರು ಐಪಿಎಲ್ ಬಿಟ್ಟು ಪಿಎಸ್ಎಲ್‌ಗೆ ಹೋಗುವ ಸಾಧ್ಯತೆ ತೀರಾ ಕಡಿಮೆ. ಆದರೆ, ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ನ್ಯೂಝಿಲೆಂಡ್‌ನ ಆಟಗಾರರಿಗೆ ಪಿಎಸ್ಎಲ್ ಈಗ ದೊಡ್ಡ ಆಶ್ರಯತಾಣವಾಗಲಿದೆ.

ಪ್ರಸಾರಕರು ಮತ್ತು ಸ್ಪಾನ್ಸರ್‌ಗಳ ಸಂಕಟ: ಸೌತ್ ಏಷ್ಯಾದ ಕ್ರಿಕೆಟ್ ಮಾರುಕಟ್ಟೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳಿಗೆ ಭಾರೀ ಬೇಡಿಕೆ ಇದೆ. ಆದರೆ, ಏಕಕಾಲದಲ್ಲಿ ಎರಡು ಲೀಗ್‌ಗಳು ನಡೆದಾಗ ಜಾಹೀರಾತುದಾರರ ಬಜೆಟ್ ವಿಭಜನೆಯಾಗುತ್ತದೆ. ಡಿಜಿಟಲ್ ಮತ್ತು ಟಿವಿ ಪ್ರಸಾರ ಹಕ್ಕುಗಳನ್ನು ಹೊಂದಿರುವ ಕಂಪನಿಗಳು ವೀಕ್ಷಕರನ್ನು ಸೆಳೆಯಲು ಭಾರೀ ಕಸರತ್ತು ನಡೆಸಬೇಕಾಗುತ್ತದೆ.

ಇದನ್ನೂ ಓದಿ: ಏನಿದು ಐಪಿಎಲ್ ಮಿನಿ ಹರಾಜು? ಇದರ ನಿಯಮಗಳೇನು?

ಇದಾಗ್ಯೂ ಬಿಸಿಸಿಐನ ಆರ್ಥಿಕ ಶಕ್ತಿಯ ಮುಂದೆ ಪಿಸಿಬಿಯ ಈ ನಿರ್ಧಾರವು ಒಂದು ದೊಡ್ಡ ‘ಜೂಜು’ ಎಂದೇ ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಪಿಎಸ್ಎಲ್ ಈ ಸಂಘರ್ಷದ ನಡುವೆಯೂ ಯಶಸ್ವಿಯಾದರೆ, ಭವಿಷ್ಯದಲ್ಲಿ ಐಪಿಎಲ್‌ನಂತೆಯೇ ಪಿಎಸ್ಎಲ್ ಕೂಡ ಸ್ವತಂತ್ರ ವಿಂಡೋವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಆದರೆ ಜಾಗತಿಕ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ 2027ರ ಬೇಸಿಗೆಯು ಸಾರ್ವಕಾಲಿಕ ಅತ್ಯುತ್ತಮ ಟಿ20 ರಸದೌತಣ ನೀಡಲಿರುವುದಂತೂ ಸತ್ಯ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More