ನಿನ್ನ ಜೇಬಿನಲ್ಲಿ ವಿಕೆಟ್ ಇದೆ, ನನ್ನ ಕಿಸೆಯಲ್ಲಿ ಪಾಯಿಂಟ್ಸ್ ಇದೆ!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಆಟಕ್ಕಷ್ಟೇ ಅಲ್ಲ, ಆಟಗಾರರ ನಡುವಿನ 'ಸ್ವ್ಯಾಗ್' ಮತ್ತು ಜಿದ್ದಾಜಿದ್ದಿಗೂ ಹೆಸರುವಾಸಿ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಅಫ್ಘಾನ್ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರು ರವೀಂದ್ರ ಜಡೇಜಾ ಅವರ ಕಾಲೆಳೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಪಿಎಲ್ ಅಂಗಳದಲ್ಲಿ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟ ಮಾತ್ರವಲ್ಲದೆ, ಆಟಗಾರರ ನಡುವಿನ ಸಂಭ್ರಮಾಚರಣೆಯ ಜಿದ್ದಾಜಿದ್ದೂ ನೋಡುಗರಿಗೆ ಭರಪೂರ ಮನರಂಜನೆ ನೀಡುತ್ತದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯವು ಇಂತಹದ್ದೇ ಒಂದು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಯಿತು. ರಾಜಸ್ಥಾನ ರಾಯಲ್ಸ್ ತಂಡದ ರವೀಂದ್ರ ಜಡೇಜಾ ಅವರ ‘ಪಾಕೆಟ್’ ಸಂಭ್ರಮಕ್ಕೆ, ಅಫ್ಘಾನ್ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ನೀಡಿದ ತಮಾಷೆಯ ತಿರುಗೇಟು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಈ ‘ಪಾಕೆಟ್ ವೀಡಿಯೋ’ ಹಿಂದಿನ ಕಥೆಯೇನು? ಇಲ್ಲಿದೆ ಸಂಪೂರ್ಣ ವಿವರ.
ಏನಿದು ‘ಪಾಕೆಟ್’ ಸೆಲೆಬ್ರೇಷನ್?
ಜೈಪುರದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್‌ನ ರವೀಂದ್ರ ಜಡೇಜಾ ಅವರು ಜೋಸ್ ಬಟ್ಲರ್ ಅವರ ವಿಕೆಟ್ ಪಡೆದು, ನಿನ್ನ ವಿಕೆಟ್ ನನ್ನ ಪಾಕೆಟ್ನಲ್ಲಿ ಎಂಬಾರ್ಥದಲ್ಲಿ ‘ಪಾಕೆಟ್ ಸೆಲೆಬ್ರೇಷನ್’ ಮಾಡಿದ್ದರು.
Wicket in the pocket ☝️
Celebrations out 🥳
Ravindra Jadeja doing what he does best 🩷
Updates ▶️ https://t.co/t7CEEL9Bzp#TATAIPL | #KhelBindaas | #RRvGT | @rajasthanroyals pic.twitter.com/qGBNr38o4S
— IndianPremierLeague (@IPL) May 9, 2026
ರಶೀದ್ ಖಾನ್ ತಿರುಗೇಟು:
ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು 77 ರನ್‌ಗಳ ಬೃಹತ್ ಅಂತರದಿಂದ ಗೆದ್ದ ನಂತರ, ರಶೀದ್ ಖಾನ್ ಅವರು ಒಂದು ವಿಶೇಷ ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಜೇಬಿನಲ್ಲಿದ್ದ ವಸ್ತುವನ್ನು ಹುಡುಕುವಂತೆ ಅಭಿನಯಿಸಿದ ರಶೀದ್ ಖಾನ್, ನನ್ನ ಪಾಕೆಟ್ನಲ್ಲಿ 2 ಪಾಯಿಂಟ್ ಇದೆ ಎಂದು ತೋರಿಸಿದ್ದಾರೆ.
2️⃣ points in our pocket ✅ pic.twitter.com/HDoYymCFDX
— Gujarat Titans (@gujarat_titans) May 9, 2026
ಅಂದರೆ ನಿನ್ನ ಕಿಸೆಯಲ್ಲಿ ವಿಕೆಟ್ ಇದ್ದರೆ, ನನ್ನ ಜೇಬಿನಲ್ಲಿ 2 ಪಾಯಿಂಟ್ ಇದೆ ಎಂದು ರಶೀದ್ ಖಾನ್ ಪರೋಕ್ಷವಾಗಿ ರವೀಂದ್ರ ಜಡೇಜಾಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ವಿಕೆಟ್ಗಿಂತ ಪಾಯಿಂಟ್ ಮುಖ್ಯ ಎಂಬುದನ್ನು ಸಾರಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದ ಮುಖ್ಯಾಂಶಗಳು:
-
- ಟೈಟಾನ್ಸ್ ಬ್ಯಾಟಿಂಗ್: ಶುಭ್ಮನ್ ಗಿಲ್ (84) ಮತ್ತು ಸಾಯಿ ಸುದರ್ಶನ್ (55) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 229 ರನ್ ಕಲೆಹಾಕಿತು.
- ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್: 230 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 77 ರನ್ಗಳಿಂದ ಸೋಲೊಪ್ಪಿಕೊಂಡಿದೆ.
- ರಶೀದ್ ಖಾನ್ ಮ್ಯಾಜಿಕ್: ಈ ಪಂದ್ಯದಲ್ಲಿ ಮಿಂಚಿದ ರಶೀದ್ ಖಾನ್ 4 ಓವರ್ಗಳಲ್ಲಿ 33 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಇದರಲ್ಲಿ ರವೀಂದ್ರ ಜಡೇಜಾ ಅವರ ವಿಕೆಟ್ ಕೂಡ ಸೇರಿತ್ತು ಎಂಬುದು ವಿಶೇಷ.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಅಲ್ಲದೆ ಮುಂದಿನ ಮೂರು ಮ್ಯಾಚ್ಗಳಲ್ಲಿ ಒಂದು ಗೆಲುವು ಸಾಧಿಸಿದರೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
Published On - 1:02 pm, Sun, 10 May 26




