AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 14 ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ RCB ಆಟಗಾರ್ತಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ, ಉತ್ತಾರಾಖಂಡ್​ನ ಯುವ ಆಲ್​ರೌಂಡರ್ ಪ್ರೇಮಾ ರಾವತ್ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರ್ತಿ ಫಾತಿಮಾ ಸನಾ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ಕೇವಲ 14 ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ RCB ಆಟಗಾರ್ತಿ!
Prema RawatImage Credit source: RCB
ಝಾಹಿರ್ ಯೂಸುಫ್
|

Updated on: Nov 03, 2026 | 1:34 PM

Share

ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಈ ವಿಶ್ವ ದಾಖಲೆ ಬರೆದಿರುವುದು ಉತ್ತರಾಖಂಡ್ ತಂಡದ ಆಲ್​ರೌಂಡರ್ ಪ್ರೇಮಾ ರಾವತ್. ಅದು ಕೂಡ ಕೇವಲ 14 ಎಸೆತಗಳಲ್ಲಿ ವಿಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ. ಈ ಅರ್ಧಶತಕದೊಂದಿಗೆ ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸಿಡಿಲಬ್ಬರದ ಬ್ಯಾಟಿಂಗ್:

ಪುಣೆಯ ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಈ ಪಂದ್ಯದಲ್ಲಿ ಉತ್ತರಾಖಂಡ್ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪ್ರೇಮಾ ರಾವತ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್​ನೊಂದಿಗೆ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

ವಿಶೇಷ ಎಂದರೆ ಈ ಅರ್ಧಶತಕದಲ್ಲಿ 48 ರನ್​ಗಳು ಬೌಂಡರಿಗಳಿಂದಲೇ ಬಂದಿದ್ದವು. ಅಂದರೆ ಪ್ರೇಮಾ ರಾವತ್ ತಮ್ಮ ವಿಶ್ವ ದಾಖಲೆಯ ಹಾಫ್ ಸೆಂಚುರಿಯಲ್ಲಿ 6 ಫೋರ್ ಹಾಗೂ 4 ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಆಲ್ ರೌಂಡರ್​ ಪ್ರದರ್ಶನ:

ಪ್ರೇಮಾ ರಾವತ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಉತ್ತರಾಖಂಡ್ ತಂಡವು 2 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲೂ ಮಿಂಚಿದ ಲೆಗ್ ಸ್ಪಿನ್ನರ್ ಪ್ರೇಮಾ, 4 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಇವರ ಆಲ್ ರೌಂಡ್ ಆಟದಿಂದಾಗಿ ಹೈದರಾಬಾದ್ ತಂಡವನ್ನು 98 ರನ್‌ಗಳಿಗೆ ನಿಯಂತ್ರಿಸಿದ ಉತ್ತರಾಖಂಡ್ 89 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಹೊಸ ವಿಶ್ವ ದಾಖಲೆ:

ಟಿ20 ಮಹಿಳಾ ಕ್ರಿಕೆಟ್​ನಲ್ಲಿ (ಅಂತಾರಾಷ್ಟ್ರೀಯ ಮತ್ತು ದೇಶೀಯ ಸೇರಿ) ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಫಾತಿಮಾ ಸನಾ ಹೆಸರಿನಲ್ಲಿತ್ತು. ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸನಾ ಕೇವಲ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಪ್ರೇಮಾ ರಾವತ್ ಅಳಿಸಿ ಹಾಕಿದ್ದಾರೆ. ಕೇವಲ 14 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ಪ್ರೇಮಾ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: 3 ಆಟಗಾರರ ಡೀಲ್… ಮುಂಬೈ ಇಂಡಿಯನ್ಸ್​ಗೆ ಅರ್ಷದೀಪ್ ಸಿಂಗ್?

ಆರ್​ಸಿಬಿ ಆಟಗಾರ್ತಿ:

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಪ್ರೇಮಾ ರಾವತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. 2025ರ ಡಬ್ಲ್ಯುಪಿಎಲ್ ಹರಾಜಿನ ಮೂಲಕ ಆರ್​ಸಿಬಿ ಪ್ರೇಮಾ ಅವರನ್ನು ₹1.2 ಕೋಟಿ ನೀಡಿ ಖರೀದಿಸಿತ್ತು. ಅಲ್ಲದೆ ಈ ಬಾರಿ ಕೂಡ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More