ಹಾರ್ದಿಕ್ ಪಾಂಡ್ಯರನ್ನು ಕಾಗೆ ಎಂದು ಕರೆದ ರೋಹಿತ್ ಶರ್ಮಾ; ವಿಡಿಯೋ ವೈರಲ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಮಾರ್ಚ್ 24 ರಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಈ ನಡುವೆ, ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಕಾಗೆ ಎಂದು ಕರೆದ ವಿಡಿಯೋ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಮಾರ್ಚ್ 24 ರಂದು ನಡೆಯುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಈ ನಡುವೆ, ಭಾರತ ತಂಡದ ನಾಯಕನಾಗಿರುವ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಹಾರ್ದಿಕ್ ಪಾಂಡ್ಯ ಅವರನ್ನು ಕಾಗೆ ಎಂದು ಕರೆದ ವಿಡಿಯೋ ವೈರಲ್ ಆಗುತ್ತಿದೆ.
ವಿಷಯವೇನೆಂದರೆ, ಹರ್ಭಜನ್ ಸಿಂಗ್ ಇನ್ಸ್ಟಾಗ್ರಾಮ್ (Instagram) ಲೈವ್ ಬಂದಿದ್ದು, ರೋಹಿತ್ ಶರ್ಮಾ ಜಾಯಿನ್ ಆಗಿದ್ದರು. ಮಾತುಕತೆ ನಡುವೆ ಆಲ್ರೌಂಡರ್ಗಳ ಕುರಿತು ಮಾತನಾಡುತ್ತಿದ್ದಾರೆ. ಇದೇ ವೇಳೆ ಕ್ರಿಕೆಟಿಗರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ಹೆಸರು ಪ್ರಸ್ತಾಪವಾದಾಗ ಹಾರ್ದಿಕ್ ಪಾಂಡ್ಯ ಅವರನ್ನು ಕೌವ (ಕಾಗೆ) ಎಂದು ರೋಹಿತ್ ಶರ್ಮಾ ಕರೆದು ನಗುತ್ತಾರೆ. ಇದಕ್ಕೆ ಬಜ್ಜಿ ಕೂಡ ಕೌವ ಎಂದು ಹೇಳಿ ನಗುತ್ತಾರೆ.
ರೋಹಿತ್ ಶರ್ಮಾ, ಹರ್ಬಜನ್ ಸಿಂಗ್ ಮಾತುಕತೆಯ ವಿಡಿಯೋ
Rohit Sharma calls Hardik Pandya ‘Kauwa’ pic.twitter.com/zlmW4A0dMT
— Himanshu (@himanshux_) April 23, 2020
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ, ಲೈವ್ನಲ್ಲಿ ಮಾತು ಮುಂದುವರಿಸಿದ್ದಾರೆ. ಪಾಂಡ್ಯಾ ಈ ಹೆಸರಿನಿಂದ ಕರೆಯುವುದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಬಜ್ಜಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಿಟ್ಮ್ಯಾನ್, ಗೊತ್ತಿಲ್ಲ, ಬಿಡಿ ಇದನ್ನು, ಇಲ್ಲಾಂದರೆ ನನಗೆ ಮೆಸೆಜ್ ಬರುತ್ತದೆ ಎಂದಿದ್ದಾರೆ. ಈ ವೇಳೆ, ಪಾಂಡ್ಯ ನಮ್ಮ ಸಹೋದರ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: IPL 2024: ರೋಹಿತ್ ಶರ್ಮಾ ಜೊತೆ ನಾಯಕತ್ವದ ಬಗ್ಗೆ ಒಮ್ಮೆಯೂ ಚರ್ಚಿಸದ ಹಾರ್ದಿಕ್ ಪಾಂಡ್ಯ..!
ಐಪಿಎಲ್ 2024 ರ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಅಭ್ಯಾಸವನ್ನೂ ಆರಂಭಿಸಿದ್ದಾರೆ. ಇದರ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದರಲ್ಲಿ ರೋಹಿತ್ ಶರ್ಮಾ ಉತ್ತಮ ಶಾರ್ಟ್ ಹೊಡೆಯುತ್ತಿರುವುದನ್ನು ಕಾಣಬಹುದು.
ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನ ಅತ್ಯಂತ ಯಶಸ್ವಿ ನಾಯಕ. ಮುಂಬೈ ಇಂಡಿಯನ್ಸ್ 2013 ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತು. ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಬಳಿಕ ರೋಹಿತ್ ನಾಯಕತ್ವದಲ್ಲೇ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಕಪ್ಗಳನ್ನು ಗೆದ್ದುಕೊಂಡಿದೆ.
ಮತ್ತಷ್ಟು ಕ್ರೀಡೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ