AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಕೊಹ್ಲಿ-ರೋಹಿತ್-ಎಬಿಡಿಗೂ ಸಾಧ್ಯವಾಗದ ಸಾಧನೆ: ಐಪಿಎಲ್​ನಲ್ಲಿ ಶುಭ್​ಮನ್ ಗಿಲ್ ನೂತನ ದಾಖಲೆ

IPL 2026 Stats: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ 44 ಎಸೆತಗಳಲ್ಲಿ 84 ರನ್ ಗಳಿಸಿ ಗುಜರಾತ್ ಟೈಟಾನ್ಸ್ ತಂಡವನ್ನು 77 ರನ್‌ಗಳ ಅಂತರದಿಂದ ಗೆಲ್ಲಿಸಿದರು. ಈ ಇನ್ನಿಂಗ್ಸ್‌ನೊಂದಿಗೆ ಗಿಲ್ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಗಿಲ್ ಈ ಸೀಸನ್‌ನಲ್ಲಿ 10 ಪಂದ್ಯಗಳಲ್ಲಿ ಒಟ್ಟು 462 ರನ್ ಗಳಿಸಿದ್ದಾರೆ. ಈ ಸಾಧನೆಯ ಮೂಲಕ ಗಿಲ್ ಒಂದು ವಿಶೇಷ ದಾಖಲೆಯ ಕ್ಲಬ್‌ಗೆ ಸೇರಿದ್ದಾರೆ.

Shubman Gill: ಕೊಹ್ಲಿ-ರೋಹಿತ್-ಎಬಿಡಿಗೂ ಸಾಧ್ಯವಾಗದ ಸಾಧನೆ: ಐಪಿಎಲ್​ನಲ್ಲಿ ಶುಭ್​ಮನ್ ಗಿಲ್ ನೂತನ ದಾಖಲೆ
Shubman Gill (6)
ಸಾಯಿನಂದಾ
| Edited By: |

Updated on: May 10, 2026 | 9:21 AM

Share

ಬೆಂಗಳೂರು (ಮೇ. 10): ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ಈ ಬಾರಿ ಐಪಿಎಲ್ 2026ರಲ್ಲಿ ಬೊಂಬಾಟ್ ಫಾರ್ಮ್‌ನಲ್ಲಿ ಇದ್ದಾರೆ. ಅವರ ಬ್ಯಾಟಿಂಗ್ ಈ ಸೀಸನ್‌ನಲ್ಲಿ ಭರ್ಜರಿ ರನ್ ಕಲೆಹಾಕುತ್ತಿದೆ. ಐಪಿಎಲ್ 2026ರ 52ನೇ ಪಂದ್ಯ ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗಿಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 44 ಎಸೆತಗಳಲ್ಲಿ 84 ರನ್ ಗಳಿಸಿದ ಅವರು ತಂಡವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 77 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಈ ಇನ್ನಿಂಗ್ಸ್‌ನೊಂದಿಗೆ ಗಿಲ್ ಈ ಸೀಸನ್‌ನಲ್ಲಿ 10 ಪಂದ್ಯಗಳಲ್ಲಿ ಒಟ್ಟು 462 ರನ್ ಗಳಿಸಿದ್ದಾರೆ. ಈ ಸಾಧನೆಯ ಮೂಲಕ ಗಿಲ್ ಒಂದು ವಿಶೇಷ ದಾಖಲೆಯ ಕ್ಲಬ್‌ಗೆ ಸೇರಿದ್ದಾರೆ. ಐಪಿಎಲ್‌ನಲ್ಲಿ ಸತತ 7 ಸೀಸನ್‌ಗಳಲ್ಲಿ 400+ ರನ್ ಗಳಿಸಿದ ಮೂರನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಸಾಧನೆ ಇದುವರೆಗೆ ಕೇವಲ ಸುರೇಶ್ ರೈನಾ ಮತ್ತು ಶಿಖರ್ ಧವನ್ ಮಾತ್ರ ಸಾಧಿಸಿದ್ದರು.

ಸುರೇಶ್ ರೈನಾ: 2008ರಿಂದ 2014ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ನಿರಂತರವಾಗಿ 7 ಸೀಸನ್‌ಗಳಲ್ಲಿ 400+ ರನ್ ಗಳಿಸಿದ್ದರು.

ಶಿಖರ್ ಧವನ್: 2016ರಿಂದ 2022ರವರೆಗೆ ವಿವಿಧ ತಂಡಗಳ ಪರ ಧವನ್ ಇದೇ ಸಾಧನೆ ಮಾಡಿದ್ದಾರೆ.

ಇದೀಗ ಶುಭ್​ಮನ್ ಗಿಲ್ ಕೂಡ ಈ ಎಲೈಟ್ ಪಟ್ಟಿಯಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದ್ದಾರೆ.

RR vs GT, IPL 2026: ಬೌಲಿಂಗ್‌ನಲ್ಲಿ ಫ್ಲಾಪ್ ಆದ ಜೋಫ್ರಾ ಆರ್ಚರ್: ಸೋಲಿನ ಬಳಿಕ ನಾಯಕ ಯಶಸ್ವಿ ಜೈಸ್ವಾಲ್ ಏನು ಹೇಳಿದ್ರು

ಗಿಲ್ 2022ರಿಂದ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ. ಅದಕ್ಕೂ ಮೊದಲು 2020 ಮತ್ತು 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು.

ಇನ್ನೊಂದು ಕಡೆ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇನ್ನೂ ವಿರಾಟ್ ಕೊಹ್ಲಿ ಹೆಸರಲ್ಲೇ ಇದೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಈ ದಾಖಲೆಯನ್ನು ಇನ್ನೂ ಯಾರೂ ಮುರಿಯಲಿಲ್ಲ. ಹಾಗೇ, ಕೊಹ್ಲಿ ಒಂದೇ ಸೀಸನ್‌ನಲ್ಲಿ 400+ ರನ್ ಗಳಿಸಿರುವುದು ಒಟ್ಟು 11 ಬಾರಿ ಇದು ಇನ್ನೂ ಅಪ್ರತಿಮ ಸಾಧನೆ ಆಗಿದೆ. ಇದರ ನಡುವೆ, ಸತತ ಸೀಸನ್‌ಗಳಲ್ಲಿ 400+ ರನ್ ಗಳಿಸುವ ಸಾಧನೆಯಲ್ಲಿ ಗಿಲ್ ಈಗ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
ಬೆಳಗ್ಗೆ ಎದ್ದು ಮನೆ ಮುಂದೆ ನೀರು ಹಾಕುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಾಗಮನ!
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು