Sign In

By signing in or creating an account, you agree with Associated Broadcasting Company's Terms & Conditions and Privacy Policy.

RSA vs BAN ICC World Cup 2023: ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 24, 2023 | 10:15 PM

South Africa vs Bangladesh, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 25 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 19 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ ತಂಡ 8 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. 

RSA vs BAN ICC World Cup 2023: ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ
South Africa

ಏಕದಿನ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ಹಂಗಾಮಿ ನಾಯಕ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (174) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 382 ರನ್​ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಪರ ಮಹಮ್ಮದುಲ್ಲಾ (111) ಶತಕ ಬಾರಿಸಿದರೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 46.4 ಓವರ್​ಗಳಲ್ಲಿ 233 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು 149 ರನ್​ಗಳ ಆಮೋಘ ಗೆಲುವು ದಾಖಲಿಸಿತು.

ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 25 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 19 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ ತಂಡ 8 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶ್ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಝ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯಟ್ಝಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲಿಝಾಡ್ ವಿಲಿಯಮ್ಸ್.

ಬಾಂಗ್ಲಾದೇಶ್ ತಂಡ: ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ತಂಝಿದ್ ಹಸನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ ರಿಯಾದ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಂಝಿಮ್ ಸಾಕಿಬ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹದೂದ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಝಾಡ್ ವಿಲಿಯಮ್ಸ್.

LIVE Cricket Score & Updates

The liveblog has ended.
  • 24 Oct 2023 10:09 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್ ಆಲೌಟ್

    ಲಿಝಾರ್ಡ್ ವಿಲಿಯಮ್ಸ್​ ಎಸೆದ 47ನೇ ಓವರ್​ನ 4ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್​ಗೆ ಕ್ಯಾಚ್ ನೀಡಿದ ಮುಸ್ತಫಿಜುರ್ ರೆಹಮಾನ್.

    46.4 ಓವರ್​ಗಳಲ್ಲಿ 233 ರನ್​ಗಳಿಸಿ ಆಲೌಟ್ ಆದ ಬಾಂಗ್ಲಾದೇಶ್ ತಂಡ.

    ಸೌತ್ ಆಫ್ರಿಕಾ– 382/5 (50)

    ಬಾಂಗ್ಲಾದೇಶ್– 233 (46.4)

    149 ರನ್​ಗಳ ಭರ್ಜರಿ ಜಯ ಸಾಧಿಸಿದ ಸೌತ್ ಆಫ್ರಿಕಾ ತಂಡ.

  • 24 Oct 2023 10:02 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್ 9ನೇ ವಿಕೆಟ್ ಪತನ

    ಜೆರಾಲ್ಡ್ ಕೊಯಟ್ಝಿ ಎಸೆದ 46ನೇ ಓವರ್​ನ 4ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಹೊಡೆತ ಬಾರಿಸಿದ ಮಹಮದುಲ್ಲಾ…ಬೌಂಡರಿ ಲೈನ್​ನಲ್ಲಿ ಕ್ಯಾಚ್.

    111 ಎಸೆತಗಳಲ್ಲಿ 111 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾ ತಂಡದ ಅನುಭವಿ ಬ್ಯಾಟರ್ ಮಹಮದುಲ್ಲಾ.

    ಕ್ರೀಸ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಹಾಗೂ ಶೊರಿಫುಲ್ ಇಸ್ಲಾಂ ಬ್ಯಾಟಿಂಗ್

    BAN 227/9 (45.4)

      

  • 24 Oct 2023 09:57 PM (IST)

    RSA vs BAN ICC World Cup 2023 Live Score: ಶತಕ ಪೂರೈಸಿದ ಮಹಮದುಲ್ಲಾ

    104 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಶತಕ ಪೂರೈಸಿದ ಮಹಮದುಲ್ಲಾ.

    ಶತಕದ ಬೆನ್ನಲ್ಲೇ ಕಗಿಸೊ ರಬಾಡ ಎಸೆದ 45ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಹಮದುಲ್ಲಾ.

    45 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡದ ಸ್ಕೋರ್

    ಕ್ರೀಸ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 222/8 (45)

      

  • 24 Oct 2023 09:53 PM (IST)

    RSA vs BAN ICC World Cup 2023 Live Score: ವಾಟ್ ಎ ಶಾಟ್- ಸಿಕ್ಸ್​

    ಜೆರಾಲ್ಡ್ ಕೊಯಟ್ಝಿ ಎಸೆದ 44ನೇ ಓವರ್​ನ 5ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ಮಹಮದುಲ್ಲಾ.

    ಈ ಸಿಕ್ಸ್​ನೊಂದಿಗೆ ಮಹಮದುಲ್ಲಾ ವೈಯುಕ್ತಿಕ ಸ್ಕೋರ್ 97 ಕ್ಕೇರಿಕೆ.

    ಕ್ರೀಸ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್

    BAN 211/8 (44)

      

  • 24 Oct 2023 09:33 PM (IST)

    RSA vs BAN ICC World Cup 2023 Live Score: 40 ಓವರ್​ಗಳು ಮುಕ್ತಾಯ

    ಮಾರ್ಕೊ ಯಾನ್ಸೆನ್ ಎಸೆದ 40ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಮಹಮದುಲ್ಲಾ.

    ಕ್ರೀಸ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 184/8 (40)

    ಸೌತ್ ಆಫ್ರಿಕಾ ತಂಡದ ಗೆಲುವಿಗೆ ಕೇವಲ 2 ವಿಕೆಟ್​ಗಳ ಅವಶ್ಯಕತೆ.

      

  • 24 Oct 2023 09:26 PM (IST)

    RSA vs BAN ICC World Cup 2023 Live Score: ಭರ್ಜರಿ ಸಿಕ್ಸ್​ ಸಿಡಿಸಿದ ಮಹಮದುಲ್ಲಾ

    ಲಿಝಾರ್ಡ್​ ವಿಲಿಯಮ್ಸ್ ಎಸೆದ 39ನೇ ಓವರ್​ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಸಿಕ್ಸ್ ಬಾರಿಸಿದ ಮಹಮದುಲ್ಲಾ.

    ಇದು ಬಾಂಗ್ಲಾದೇಶ್ ಇನಿಂಗ್ಸ್​ನ ಮೊದಲ ಸಿಕ್ಸ್​.

    5ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಮುಸ್ತಫಿಜುರ್ ರೆಹಮಾನ್.

    BAN 178/8 (39)

      

  • 24 Oct 2023 09:20 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್​ ತಂಡದ 8 ವಿಕೆಟ್ ಪತನ

    ಕಗಿಸೊ ರಬಾಡ ಎಸೆದ 37ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಹಸನ್ ಮಹಮೂದ್.

    ಕ್ರೀಸ್​ನಲ್ಲಿ ಮುಸ್ತಫಿಜುರ್ ರೆಹಮಾನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 164/8 (37)

    ಭರ್ಜರಿ ಬೌಲಿಂಗ್ ಮೂಲಕ ಗೆಲುವಿನತ್ತ ಮುನ್ನಡೆಯುತ್ತಿರುವ ಸೌತ್ ಆಫ್ರಿಕಾ ತಂಡ

      

  • 24 Oct 2023 09:05 PM (IST)

    RSA vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಮಹಮದುಲ್ಲಾ

    67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್ ತಂಡದ ಅನುಭವಿ ಬ್ಯಾಟರ್ ಮಹಮದುಲ್ಲಾ.

    ಕಗಿಸೊ ರಬಾಡ ಎಸೆದ 35ನೇ ಓವರ್​ನ ಕೊನೆಯ ಎಸೆತದಲ್ಲಿ ಥರ್ಡ್​ಮ್ಯಾನ್ ಫೀಲ್ಡರ್​ನತ್ತ ಫೋರ್ ಬಾರಿಸಿದ ಹಸನ್ ಮಹಮೂದ್.

    35 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡದ ಸ್ಕೋರ್ 148 ರನ್​ಗಳು.

    BAN 148/7 (35)

      

  • 24 Oct 2023 08:49 PM (IST)

    RSA vs BAN ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 125 ರನ್ ಕಲೆಹಾಕಿದ ಬಾಂಗ್ಲಾದೇಶ್.

    7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಹಸನ್ ಮಹಮೂದ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 125/7 (30)

      

  • 24 Oct 2023 08:40 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್​ ತಂಡದ 7 ವಿಕೆಟ್ ಪತನ

    ಜೆರಾಲ್ಡ್ ಕೊಯಟ್ಝಿ ಎಸೆದ 29ನೇ ಓವರ್​ನ ಮೂರನೇ ಎಸೆತದಲ್ಲಿ ಬೌಲರ್​ಗೆ ಕ್ಯಾಚ್ ನೀಡಿದ ನಾಸುಮ್ ಅಹ್ಮದ್.

    19 ಎಸೆತಗಳಲ್ಲಿ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ಬ್ಯಾಟರ್ ನಾಸುಮ್ ಅಹ್ಮದ್.

    BAN 122/7 (28.3)

      

  • 24 Oct 2023 08:32 PM (IST)

    RSA vs BAN ICC World Cup 2023 Live Score: ವೆಲ್ಕಂ ಬೌಂಡರಿ

    ಜೆರಾಲ್ಡ್ ಕೊಯಟ್ಝಿ ಎಸೆದ 26ನೇ ಓವರ್​ನ 3ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮಹಮದುಲ್ಲಾ.

    ಈ ಫೋರ್​ನೊಂದಿಗೆ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ.

    ಕ್ರೀಸ್​ನಲ್ಲಿ ನಾಸುಮ್ ಅಹ್ಮದ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 103/6 (27)

      

  • 24 Oct 2023 08:22 PM (IST)

    RSA vs BAN ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 93 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಮೆಹದಿ ಹಸನ್ ಮಿರಾಝ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 93/6 (25)

      

  • 24 Oct 2023 08:11 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್​ ತಂಡದ 6 ವಿಕೆಟ್ ಪತನ

    ಕೇಶವ್ ಮಹಾರಾಜ್ ಎಸೆದ 22ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತ ಬಾರಿಸಿದ ಮೆಹದಿ ಹಸನ್ ಮಿರಾಝ್…ಬೌಂಡರಿ ಲೈನ್​ನಲ್ಲಿ ಕ್ಯಾಚ್. ಸೌತ್ ಆಫ್ರಿಕಾ ತಂಡಕ್ಕೆ 6ನೇ ಯಶಸ್ಸು.

    19 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೆಹದಿ ಹಸನ್ ಮಿರಾಝ್.

    BAN 81/6 (22)

      

  • 24 Oct 2023 08:02 PM (IST)

    RSA vs BAN ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 72 ರನ್ ಕಲೆಹಾಕಿದ ಬಾಂಗ್ಲಾದೇಶ್ ಬ್ಯಾಟರ್​ಗಳು.

    ಕ್ರೀಸ್​ನಲ್ಲಿ ಮೆಹದಿ ಹಸನ್ ಮಿರಾಝ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್

    BAN 72/5 (20)

    ಔಟಾದ ಬ್ಯಾಟರ್​ಗಳ ಪಟ್ಟಿ:

    • ಲಿಟ್ಟನ್ ದಾಸ್
    • ತಂಝಿದ್ ಹಸನ್
    • ನಜ್ಮುಲ್ ಹೊಸೈನ್ ಶಾಂಟೊ
    • ಶಕೀಬ್ ಅಲ್ ಹಸನ್
    • ಮುಶ್ಫಿಕುರ್ ರಹೀಮ್

      

  • 24 Oct 2023 07:53 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್ ನಿಧಾನಗತಿಯ ಬ್ಯಾಟಿಂಗ್

    18 ಓವರ್​ಗಳ ಮುಕ್ತಾಯದ ವೇಳೆಗೆ 64 ರನ್​ ಕಲೆಹಾಕಿದ ಬಾಂಗ್ಲಾದೇಶ್ ಬ್ಯಾಟರ್​ಗಳು.

    5 ವಿಕೆಟ್​ಗಳನ್ನು ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಮೆಹದಿ ಹಸನ್ ಮಿರಾಝ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್

    BAN 64/5 (18)

      

  • 24 Oct 2023 07:42 PM (IST)

    RSA vs BAN ICC World Cup 2023 Live Score: 15 ಓವರ್​ಗಳು ಮುಕ್ತಾಯ

    ಕಗಿಸೊ ರಬಾಡ ಎಸೆದ 15ನೇ ಓವರ್​ನ ಕೊನೆಯ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಲಿಟ್ಟನ್ ದಾಸ್ (22).

    ಬಾಂಗ್ಳಾದೇಶ್ ತಂಡದ 5ನೇ ವಿಕೆಟ್ ಪತನ.

    15 ಓವರ್​ಗಳ ಮುಕ್ತಾಯದ ವೇಳೆಗೆ 58 ರನ್​ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    BAN 58/5 (15)

     ಬಾಂಗ್ಲಾದೇಶ್ ತಂಡಕ್ಕೆ 383 ರನ್​ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.

      

  • 24 Oct 2023 07:26 PM (IST)

    RSA vs BAN ICC World Cup 2023 Live Score: 4ನೇ ವಿಕೆಟ್ ಪತನ

    ಜೆರಾಲ್ಡ್ ಕೊಯಟ್ಝಿ ಎಸೆದ 12ನೇ ಓವರ್​ನ 5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಮುಶ್ಫಿಕುರ್ ರಹೀಮ್.

    17 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್.

    BAN 46/4 (12)

      

  • 24 Oct 2023 07:17 PM (IST)

    RSA vs BAN ICC World Cup 2023 Live Score: 10 ಓವರ್​ಗಳ ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 35 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ ಬೌಲರ್​ಗಳು.

    ಕ್ರೀಸ್​ನಲ್ಲಿ ಲಿಟ್ಟನ್ ದಾಸ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್

    BAN 35/3 (10)

     ಬಾಂಗ್ಲಾದೇಶ್ ತಂಡಕ್ಕೆ 383 ರನ್​ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.

  • 24 Oct 2023 07:00 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್​ 3 ವಿಕೆಟ್ ಪತನ

    ಲಿಝಾರ್ಡ್ ವಿಲಿಯಮ್ಸ್ ಎಸೆದ 8ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್.

    ಕ್ರೀಸ್​ನಲ್ಲಿ ಲಿಟ್ಟನ್ ದಾಸ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್

    BAN 32/3 (8)

      

  • 24 Oct 2023 06:56 PM (IST)

    RSA vs BAN ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್

    ಮಾರ್ಕೊ ಯಾನ್ಸೆನ್ 7ನೇ ಓವರ್​ನ ಮೊದಲ ಎಸೆತದಲ್ಲೇ ಹೆನ್ರಿಕ್ ಕ್ಲಾಸೆನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ ತಂಝಿದ್ ಹಸನ್ (12)

    2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ನಜ್ಮುಲ್ ಹೊಸೈನ್ ಶಾಂಟೊ (0).

    ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಸೌತ್ ಆಫ್ರಿಕಾ.

    BAN 31/2 (7)

      

  • 24 Oct 2023 06:49 PM (IST)

    RSA vs BAN ICC World Cup 2023 Live Score: ಸ್ಕ್ವೇರ್ ಕಟ್-ಫೋರ್

    ಲಿಝಾರ್ಡ್ ವಿಲಿಯಮ್ಸ್​ ಎಸೆದ 6ನೇ ಓವರ್​ನ 2ನೇ ಎಸೆತದಲ್ಲಿ ಸ್ಕ್ವೇರ್ ಕಟ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ತಂಝಿದ್ ಹಸನ್.

    ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಲಿಟ್ಟನ್ ದಾಸ್.

    BAN 30/0 (6)

     

  • 24 Oct 2023 06:44 PM (IST)

    RSA vs BAN ICC World Cup 2023 Live Score: ಆಕರ್ಷಕ ಬೌಂಡರಿ

    ಮಾರ್ಕೊ ಯಾನ್ಸೆನ್ ಎಸೆದ 5ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಲಿಟ್ಟನ್ ದಾಸ್.

    5 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾ ತಂಡದ ಸ್ಕೋರ್ 19 ರನ್​ಗಳು.

    ಕ್ರೀಸ್​ನಲ್ಲಿ ಲಿಟ್ಟನ್ ದಾಸ್ ಹಾಗೂ ತಂಝಿದ್ ಹಸನ್ ಬ್ಯಾಟಿಂಗ್.

    BAN 19/0 (5)

     

  • 24 Oct 2023 06:26 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್​ ಇನಿಂಗ್ಸ್​ ಆರಂಭ

    ಮೊದಲ ಓವರ್​ನಲ್ಲಿ ಕೇವಲ 2 ರನ್ ನೀಡಿದ ಎಡಗೈ ವೇಗಿ ಮಾರ್ಕೊ ಯಾನ್ಸೆನ್.

    ಕ್ರೀಸ್​ನಲ್ಲಿ ಲಿಟ್ಟನ್ ದಾಸ್ ಹಾಗೂ ತಂಝಿದ್ ಹಸನ್ ಬ್ಯಾಟಿಂಗ್

    BAN 2/0 (1)

    ಬಾಂಗ್ಲಾದೇಶ್ ತಂಡಕ್ಕೆ 383 ರನ್​ಗಳ ಗುರಿ ನೀಡಿರುವ ಸೌತ್ ಆಫ್ರಿಕಾ.

     

  • 24 Oct 2023 05:50 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್ ಅಂತ್ಯ

    ಹಸನ್ ಮಹಮೂದ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    2ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಕ್ಲಾಸೆನ್ (90).

    4ನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಸಿಕ್ಸ್ ಸಿಡಿಸಿದ ಎಡಗೈ ದಾಂಡಿಗ ಡೇವಿಡ್ ಮಿಲ್ಲರ್.

    50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 382 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಸೌತ್ ಆಫ್ರಿಕಾ– 382/5 (50)

    ಬಾಂಗ್ಲಾದೇಶ್ ತಂಡಕ್ಕೆ 383 ರನ್​ಗಳ ಕಠಿಣ ಗುರಿ

     

  • 24 Oct 2023 05:43 PM (IST)

    RSA vs BAN ICC World Cup 2023 Live Score: ಕಿಲ್ಲರ್ ಮಿಲ್ಲರ್

    ಶೊರಿಫುಲ್ ಇಸ್ಲಾಂ ಎಸೆದ 49ನೇ ಓವರ್​ನಲ್ಲಿ 19 ರನ್ ಬಾರಿಸಿದ ಡೇವಿಡ್ ಮಿಲ್ಲರ್.

    ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಮಿಲ್ಲರ್.

    ಕೊನೆಯ ಓವರ್​ ಬಾಕಿ, ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಕ್ ಕ್ಲಾಸೆನ್​ ಬ್ಯಾಟಿಂಗ್.

    RSA 368/4 (49)

     

  • 24 Oct 2023 05:33 PM (IST)

    RSA vs BAN ICC World Cup 2023 Live Score: ಕ್ಲಾಸೆನ್ ಕ್ಲಾಸ್

    ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ ಎಸೆದ 47ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಸಿಕ್ಸ್​ ಸಿಡಿಸಿದ ಹೆನ್ರಿಕ್ ಕ್ಲಾಸೆನ್.

    4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್.

    5ನೇ ಎಸೆತದಲ್ಲಿ ಪುಲ್ ಶಾಟ್ ಮೂಲಕ ಮತ್ತೊಂದು ಭರ್ಜರಿ ಸಿಕ್ಸ್​ ಬಾರಿಸಿದ ಕ್ಲಾಸೆನ್.

    RSA 337/4 (47)

     

  • 24 Oct 2023 05:23 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾದ 4ನೇ ವಿಕೆಟ್ ಪತನ

    ಹಸನ್ ಮಹಮೂದ್ ಎಸೆದ 46ನೇ ಓವರ್​ನ ಮೊದಲ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿದ ಕ್ವಿಂಟನ್ ಡಿಕಾಕ್.

    140 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 174 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ಡಿಕಾಕ್.

    RSA 317/4 (46)

     

      

  • 24 Oct 2023 05:21 PM (IST)

    RSA vs BAN ICC World Cup 2023 Live Score: 45 ಓವರ್​ಗಳು ಮುಕ್ತಾಯ

    ಮುಸ್ತಫಿಜುರ್ ರೆಹಮಾನ್ ಎಸೆದ 45ನೇ ಓವರ್​ನ ಮೊದಲ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಡಿಕಾಕ್.

    45 ಓವರ್​ಗಳ ಮುಕ್ತಾಯದ ವೇಳೆಗೆ 309 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಬೃಹತ್ ಮೊತ್ತದತ್ತ ಸಾಗುತ್ತಿರುವ ಸೌತ್ ಆಫ್ರಿಕಾ ಸ್ಕೋರ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ (174) ಹಾಗೂ ಹೆನ್ರಿಕ್ ಕ್ಲಾಸೆನ್ (53)​ ಬ್ಯಾಟಿಂಗ್.

    RSA 309/3 (45)

      

  • 24 Oct 2023 05:10 PM (IST)

    RSA vs BAN ICC World Cup 2023 Live Score: 150 ರನ್ ಪೂರೈಸಿದ ಡಿಕಾಕ್

    ಶಕೀಬ್ ಅಲ್ ಹಸನ್ ಎಸೆದ 43ನೇ ಓವರ್​ನಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳನ್ನು ಬಾರಿಸಿದ ಕ್ವಿಂಟನ್ ಡಿಕಾಕ್.

    ಇದರೊಂದಿಗೆ 129 ಎಸೆತಗಳಲ್ಲಿ 150 ರನ್ ಪೂರೈಸಿದ ಡಿಕಾಕ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಹೆನ್ರಿಕ್ ಕ್ಲಾಸೆನ್​ ಬ್ಯಾಟಿಂಗ್.

    RSA 283/3 (43)

      

  • 24 Oct 2023 05:06 PM (IST)

    RSA vs BAN ICC World Cup 2023 Live Score: ಡಿಕಾಕ್ ಸಿಡಿಲಬ್ಬರ

    ಶೊರಿಫುಲ್ ಇಸ್ಲಾಂ ಎಸೆದ 42ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಕ್ವಿಂಟನ್ ಡಿಕಾಕ್.

    137 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಸೌತ್ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್.

    RSA 261/3 (42)

      

  • 24 Oct 2023 05:04 PM (IST)

    RSA vs BAN ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 238 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    4ನೇ ವಿಕೆಟ್​ಗೆ 75 ರನ್​ಗಳ ಜೊತೆಯಾಟವಾಡಿರುವ ಡಿಕಾಕ್-ಕ್ಲಾಸೆನ್.

    ಬೃಹತ್ ಮೊತ್ತದ ಸಾಗುತ್ತಿರುವ ಸೌತ್ ಆಫ್ರಿಕಾ ತಂಡದ ಸ್ಕೋರ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ (120) ಹಾಗೂ ಹೆನ್ರಿಕ್ ಕ್ಲಾಸೆನ್ (40)​ ಬ್ಯಾಟಿಂಗ್.

    RSA 238/3 (40)

     

  • 24 Oct 2023 04:25 PM (IST)

    RSA vs BAN ICC World Cup 2023 Live Score: ಶತಕ ಪೊರೈಸಿದ ಡಿಕಾಕ್

    101 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಶತಕ ಪೂರೈಸಿದ ಕ್ವಿಂಟನ್ ಡಿಕಾಕ್.

    35 ಓವರ್​ಗಳ ಮುಕ್ತಾಯದ ವೇಳೆಗೆ 196 ರನ್​ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಹೆನ್ರಿಕ್ ಕ್ಲಾಸೆನ್​ ಬ್ಯಾಟಿಂಗ್.

    RSA 196/3 (35)

      

  • 24 Oct 2023 04:05 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ ತಂಡದ 3ನೇ ವಿಕೆಟ್ ಪತನ

    ಶಕೀಬ್ ಅಲ್ ಹಸನ್ 31ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್​ಗೆ ಯತ್ನಿಸಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.

    69 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್.

    RSA 167/3 (30.4)

      

  • 24 Oct 2023 04:02 PM (IST)

    RSA vs BAN ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 165 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ (90) ಹಾಗೂ ಐಡೆನ್ ಮಾರ್ಕ್ರಾಮ್ (60)​ ಬ್ಯಾಟಿಂಗ್.

    3ನೇ ವಿಕೆಟ್​ಗೆ 130 ರನ್​ಗಳ ಜೊತೆಯಾಟವಾಡಿದ ಡಿಕಾಕ್-ಮಾರ್ಕ್ರಾಮ್.

    RSA 165/2 (30)

      

  • 24 Oct 2023 03:45 PM (IST)

    RSA vs BAN ICC World Cup 2023 Live Score: ಅರ್ಧಶತಕ ಪೂರೈಸಿದಿ ಮಾರ್ಕ್ರಾಮ್

    ಮೆಹದಿ ಹಸನ್ ಮಿರಾಝ್ ಎಸೆದ 26ನೇ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಬ್ಯಾಕ್​ವರ್ಡ್ ಪಾಯಿಂಟ್​ನತ್ತ ಫೋರ್ ಬಾರಿಸಿದ ಐಡೆನ್ ಮಾರ್ಕ್ರಾಮ್.

    ಈ ಫೋರ್​ನೊಂದಿಗೆ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್.

    RSA 141/2 (26)

      

  • 24 Oct 2023 03:40 PM (IST)

    RSA vs BAN ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 131 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ಕಬಳಿಸಲಷ್ಟೇ ಶಕ್ತರಾದ ಬಾಂಗ್ಲಾ ಬೌಲರ್​ಗಳು.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 131/2 (25)

      

  • 24 Oct 2023 03:30 PM (IST)

    RSA vs BAN ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್

    ಮಹಮದುಲ್ಲಾ ಎಸೆದ 22ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​ ಬಾರಿಸಿದ ಕ್ವಿಂಟನ್ ಡಿಕಾಕ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 113/2 (22)

      

  • 24 Oct 2023 03:24 PM (IST)

    RSA vs BAN ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 99 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್ (59) ಹಾಗೂ ಬಲಗೈ ಬ್ಯಾಟರ್ ಐಡೆನ್ ಮಾರ್ಕ್ರಾಮ್ (26)​ ಬ್ಯಾಟಿಂಗ್.

    ರೀಝ ಹೆಂಡ್ರಿಕ್ಸ್​ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್.

    RSA 99/2 (20)

      

  • 24 Oct 2023 03:13 PM (IST)

    RSA vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಡಿಕಾಕ್

    ಹಸನ್ ಮಹಮೂದ್ ಎಸೆದ 18ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್​ ಬಾರಿಸಿದ ಕ್ವಿಂಟನ್ ಡಿಕಾಕ್.

    ಈ ಫೋರ್​ನೊಂದಿಗೆ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್.

    ಸೌತ್ ಆಫ್ರಿಕಾ ತಂಡದಿಂದ ಉತ್ತಮ ಬ್ಯಾಟಿಂಗ್.

    RSA 92/2 (18)

      

  • 24 Oct 2023 03:04 PM (IST)

    RSA vs BAN ICC World Cup 2023 Live Score: ಕ್ವಿಂಟನ್ ಭರ್ಜರಿ ಬ್ಯಾಟಿಂಗ್

    ಹಸನ್ ಮಹಮೂದ್ ಎಸೆದ 16ನೇ ಓವರ್​ನ 4ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಕ್ವಿಂಟನ್ ಡಿಕಾಕ್.

    45 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 46 ರನ್ ಬಾರಿಸಿರುವ ಕ್ವಿಂಟನ್ ಡಿಕಾಕ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 77/2 (16)

      

  • 24 Oct 2023 02:59 PM (IST)

    RSA vs BAN ICC World Cup 2023 Live Score: ಡಿಕಾಕ್ ಭರ್ಜರಿ ಸಿಕ್ಸ್​

    ಶಕೀಬ್ ಅಲ್ ಹಸನ್ ಎಸೆದ 15ನೇ ಓವರ್​ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್​ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.

    15 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 67 ರನ್​ಗಳು.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 67/2 (15)

      

  • 24 Oct 2023 02:50 PM (IST)

    RSA vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ

    12 ಓವರ್​ ಮುಕ್ತಾಯದ ವೇಳೆ ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 51/2 (12)

    ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಔಟ್.

      

  • 24 Oct 2023 02:44 PM (IST)

    RSA vs BAN ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳ ಮುಕ್ತಾಯದ ವೇಳೆಗೆ 44 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ​ ಬ್ಯಾಟಿಂಗ್.

    RSA 44/2 (10)

      

  • 24 Oct 2023 02:35 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ 2ನೇ ವಿಕೆಟ್ ಪತನ

    ಸ್ಪಿನ್ನರ್ ಮೆಹದಿ ಹಸನ್ ಮಿರಾಝ್ ಎಸೆದ 8ನೇ ಓವರ್​ನ 5ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್​..ಅಂಪೈರ್ ತೀರ್ಪು ಔಟ್.

    7 ಎಸೆತಗಳಲ್ಲಿ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್​.

    ಬಾಂಗ್ಲಾದೇಶ್ ತಂಡದಿಂದ ಉತ್ತಮ ಬೌಲಿಂಗ್.

    RSA 36/2 (8)

      

      

  • 24 Oct 2023 02:27 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ ಮೊದಲ ವಿಕೆಟ್ ಪತನ

    ಎಡಗೈ ವೇಗಿ ಶೊರಿಫುಲ್ ಇಸ್ಲಾಂ ಎಸೆದ 7ನೇ ಓವರ್​ನ ಮೊದಲ ಎಸೆತದಲ್ಲೇ ರೀಝ ಹೆಂಡ್ರಿಕ್ಸ್ ಕ್ಲೀನ್ ಬೌಲ್ಡ್​. ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು.

    19 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರೀಝ ಹೆಂಡ್ರಿಕ್ಸ್​.

    RSA 35/1 (7)

      

      

  • 24 Oct 2023 02:26 PM (IST)

    RSA vs BAN ICC World Cup 2023 Live Score: ಸಿಕ್ಸರ್ ಡಿಕಾಕ್

    ಮೆಹದಿ ಹಸನ್ ಮಿರಾಝ್ 6ನೇ ಓವರ್​ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಕ್ವಿಂಟನ್ ಡಿಕಾಕ್.

    ಇದು ಸೌತ್ ಆಫ್ರಿಕಾ ಇನಿಂಗ್ಸ್​ನ ಮೊದಲ ಸಿಕ್ಸರ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರೀಝ ಹೆಂಡ್ರಿಕ್ಸ್​ ಬ್ಯಾಟಿಂಗ್.

    RSA 33/0 (6)

      

  • 24 Oct 2023 02:22 PM (IST)

    RSA vs BAN ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಶೊರಿಫುಲ್ ಇಸ್ಲಾಂ ಎಸೆದ 5ನೇ ಓವರ್​ನ ಮೂರನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.

    5 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 25 ರನ್​ಗಳು.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರೀಝ ಹೆಂಡ್ರಿಕ್ಸ್​ ಬ್ಯಾಟಿಂಗ್.

    RSA 25/0 (5)

      

  • 24 Oct 2023 02:14 PM (IST)

    RSA vs BAN ICC World Cup 2023 Live Score: ಆಕರ್ಷಕ ಕವರ್ ಡ್ರೈವ್

    ಮುಸ್ತಫಿಜುರ್ ರೆಹಮಾನ್ ಎಸೆದ 3ನೇ ಓವರ್​ನ 2ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ರೀಝ ಹೆಂಡ್ರಿಕ್ಸ್​.

    ಸೌತ್ ಆಫ್ರಿಕಾ ತಂಡದಿಂದ ಉತ್ತಮ ಬ್ಯಾಟಿಂಗ್.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರೀಝ ಹೆಂಡ್ರಿಕ್ಸ್​ ಬ್ಯಾಟಿಂಗ್.

    RSA 14/0 (3)

      

  • 24 Oct 2023 02:10 PM (IST)

    RSA vs BAN ICC World Cup 2023 Live Score: ಮಿರಾಝ್ ಸ್ಪಿನ್ ಮೋಡಿ

    ಸ್ಪಿನ್ನರ್​ ಮೆಹದಿ ಹಸನ್ ಮಿರಾಝ್ 2ನೇ ಓವರ್​ನಲ್ಲಿ ನೀಡಿದ್ದು ಕೇವಲ 3 ರನ್​ಗಳು ಮಾತ್ರ.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರೀಝ ಹೆಂಡ್ರಿಕ್ಸ್​ ಬ್ಯಾಟಿಂಗ್.

    RSA 9/0 (2)

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಸೌತ್ ಆಫ್ರಿಕಾ ತಂಡ

      

  • 24 Oct 2023 02:05 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್​ ಆರಂಭ

    ಮುಸ್ತಫಿಜುರ್ ರೆಹಮಾನ್ ಎಸೆದ ಮೊದಲ ಓವರ್​ನ 4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್. ಇದು ಸೌತ್ ಆಫ್ರಿಕಾ ಇನಿಂಗ್ಸ್​ನ ಮೊದಲ ಬೌಂಡರಿ.

    ಕ್ರೀಸ್​ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರೀಝ ಹೆಂಡ್ರಿಕ್ಸ್​ ಬ್ಯಾಟಿಂಗ್.

    RSA 6/0 (1)

      

  • 24 Oct 2023 01:53 PM (IST)

    Mysore Dasara Jamboo Savari Live: ನಂದಿಧ್ವಜ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಮೈಸೂರು: ಅರಮನೆ ಬಲರಾಮ ಗೇಟ್​ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸಚಿವರಾದ ಕೆ.ಹೆಚ್​.ಮುನಿಯಪ್ಪ, ವೆಂಕಟೇಶ್​, ಶಿವರಾಜ್​ ತಂಗಡಗಿ, ಸಂಸದ ಪ್ರತಾಪ್​ ಸಿಂಹ, ಶಾಸಕ ತನ್ವೀರ್ ಸೇಠ್​ ಸೇರಿ ಹಲವರು ಭಾಗಿಯಾಗಿದ್ದರು.

  • 24 Oct 2023 01:49 PM (IST)

    Mysore Dasara Jamboo Savari Live: ಅದ್ದೂರಿ ದಸರಾ ವಿರೋಧಿಸಿ ಪ್ರತಿಭಟನೆ; ರೈತರನ್ನು ವಶಕ್ಕೆ ಪಡೆದ ಪೊಲೀಸರು

    ಮೈಸೂರು: ಅದ್ದೂರಿ ದಸರಾ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂಬೂ ಸವಾರಿ ವೀಕ್ಷಣೆ ಮಾಡಲು ಹಾಕಿದ್ದ ಗ್ಯಾಲರಿಯಲ್ಲಿ ಕುಳಿತಿದ್ದ ರೈತರು ಅದ್ಧೂರಿ ದಸರಾವನ್ನು ವಿರೋಧಿಸಿ ಘೋಷಣೆ ಕೂಗಿದ್ದರು. ಈ ವಿಚಾರವಾಗಿ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೈತ ಮುಖಂಡರನ್ನು ಪೊಲೀಸರು‌ ವಶಕ್ಕೆ ಪಡೆದು ಜೀಪ್​​ನಲ್ಲಿ ಕರೆದೊಯ್ದರು. ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಅದ್ಧೂರಿ ದಸರಾಗೆ ವಿರೋಧಿಸಿದ್ದರು.

  • 24 Oct 2023 01:39 PM (IST)

    RSA vs BAN ICC World Cup 2023 Live Score: ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

    ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯಟ್ಝಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲಿಝಾಡ್ ವಿಲಿಯಮ್ಸ್.

  • 24 Oct 2023 01:38 PM (IST)

    RSA vs BAN ICC World Cup 2023 Live Score: ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್

    ಬಾಂಗ್ಲಾದೇಶ್ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಝ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.

  • 24 Oct 2023 01:34 PM (IST)

    RSA vs BAN ICC World Cup 2023 Live Score: ಟಾಸ್ ಗೆದ್ದ ಸೌತ್ ಆಫ್ರಿಕಾ

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸೌತ್ ಆಫ್ರಿಕಾ ತಂಡದ ಹಂಗಾಮಿ ನಾಯಕ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

Published On - Oct 24,2023 1:33 PM

Follow us
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್