AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs SRH: 36 ಎಸೆತ, 12 ಸಿಕ್ಸರ್..! ವೇಗದ ಶತಕ ಸಿಡಿಸಿ ದಾಖಲೆ ಬರೆದ ವೈಭವ್

Vaibhav Sooryavanshi Century: ಐಪಿಎಲ್ 2026 ರಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ತಮ್ಮ ಎರಡನೇ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ 12 ಸಿಕ್ಸರ್‌ಗಳೊಂದಿಗೆ 103 ರನ್ ಗಳಿಸಿ, ಆರೆಂಜ್ ಕ್ಯಾಪ್ ಸಹ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಹಾಗೂ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

RR vs SRH: 36 ಎಸೆತ, 12 ಸಿಕ್ಸರ್..! ವೇಗದ ಶತಕ ಸಿಡಿಸಿ ದಾಖಲೆ ಬರೆದ ವೈಭವ್
Vaibhav Sooryavanshi
ಪೃಥ್ವಿಶಂಕರ
|

Updated on: Apr 25, 2026 | 9:25 PM

Share

ಐಪಿಎಲ್ 2026 (IPL 2026) ರ 36 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ಸಿಡಿಸಿದರು. ತಮ್ಮ ಈ ಶತಕದ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದ ವೈಭವ್ ಕೇವಲ ಬೌಂಡರಿಗಳಿಂದಲೇ 92 ರನ್ ಕಲೆಹಾಕಿದರು. ಅಂದರೆ ವೈಭವ್ ಕೇವಲ 17 ಎಸೆತಗಳಲ್ಲಿ ಬರೋಬ್ಬರಿ 92 ರನ್ ಚಚ್ಚಿದರು.

ವೈಭವ್​ಗೆ ಆರೆಂಜ್ ಕ್ಯಾಪ್

ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, 37 ಎಸೆತಗಳಲ್ಲಿ 103 ರನ್ ಬಾರಿಸಿ ಔಟಾದರು. 36ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಶತಕ ಪೂರೈಸಿದ್ದು ವಿಶೇಷವಾಗಿತ್ತು. ಇದು ವೈಭವ್ ಅವರ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಮೊದಲನೇ ಸೀಸನ್​ನಲ್ಲಿ ಶತಕ ಬಾರಿಸಿದ್ದ ಅವರು ಇದೀಗ ಎರಡನೇ ಸೀಸನ್​ನಲ್ಲೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಶತಕದೊಂದಿಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನಕ್ಕೇರಿದ್ದು, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

2 ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್

ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಆವೃತ್ತಿಯಲ್ಲಿ 36 ಎಸೆತಗಳಲ್ಲಿ ಎರಡನೇ ಶತಕ ಬಾರಿಸುವ ಮೂಲಕ ವೈಭವ್, ಐಪಿಎಲ್ ಇತಿಹಾಸದಲ್ಲಿ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕೊರಳೊಡ್ಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗದ ಶತಕ

  • 30 ಎಸೆತಗಳು – ಕ್ರಿಸ್ ಗೇಲ್ (2013- ಪುಣೆ ವಾರಿಯರ್ಸ್​)
  • 35 ಎಸೆತಗಳು – ವೈಭವ್ ಸೂರ್ಯವಂಶಿ (2025- ಗುಜರಾತ್ ಟೈಟಾನ್ಸ್)
  • 36 ಎಸೆತಗಳು – ವೈಭವ್ ಸೂರ್ಯವಂಶಿ (2026- ಸನ್​ರೈಸರ್ಸ್​ ಹೈದರಾಬಾದ್)
  • 37 ಎಸೆತಗಳು – ಯೂಸುಫ್ ಪಠಾಣ್ (2010- ಮುಂಬೈ ಇಂಡಿಯನ್ಸ್)
  • 37 ಎಸೆತಗಳು – ಹೆನ್ರಿಚ್ ಕ್ಲಾಸೆನ್ (2025- ಕೆಕೆಆರ್)

ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

ಈ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮತ್ತೊಂದು ಪ್ರಮುಖ ದಾಖಲೆಯನ್ನು ನಿರ್ಮಿಸಿದರು. ಈ 12 ಸಿಕ್ಸರ್​ಗಳ ಸಹಾಯದಿಂದ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ವೈಭವ್ ಪಾಲಾಗಿದೆ. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.

RR vs SRH: 6,6,6,6..ಮೊದಲ ಓವರ್​ನಲ್ಲೇ ಸಿಕ್ಸರ್​ಗಳ ಮಳೆ; ದಾಖಲೆ ಬರೆದ ವೈಭವ್

ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ

  • 12- ವೈಭವ್ ಸೂರ್ಯವಂಶಿ vs ಸನ್‌ರೈಸರ್ಸ್
  • 11- ಮುರಳಿ ವಿಜಯ್ vs ಆರ್‌ಆರ್
  • 11- ವೈಭವ್ ಸೂರ್ಯವಂಶಿ vs ಜಿಟಿ
  • 10- ಸಂಜು ಸ್ಯಾಮ್ಸನ್ vs ಆರ್‌ಸಿಬಿ
  • 10- ಶ್ರೇಯಸ್ ಅಯ್ಯರ್ vs ಕೆಕೆಆರ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!