AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ಬ್ಯಾಟಿಂಗ್ ಕಿರಿಕಿರಿ, ಐಪಿಎಲ್ ರಹಸ್ಯ ವರ್ಕ್ ಆಗಿಲ್ಲ!

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೊಹ್ಲಿ ಅವರ ಈ ಆಕ್ರಮಣಕಾರಿ ಆಟ ಆತಿಥೇಯ ನ್ಯೂಝಿಲೆಂಡ್ ಬೌಲರ್‌ಗಳಿಗೆ ಎಷ್ಟು ತಲೆನೋವಾಗಿ ಪರಿಣಮಿಸಿತ್ತು ಎಂಬುದಕ್ಕೆ ಜೇಕಬ್ ಡಫಿಯ ಹೇಳಿಕೆಯೇ ಸಾಕ್ಷಿ.

ಕೊಹ್ಲಿ ಬ್ಯಾಟಿಂಗ್ ಕಿರಿಕಿರಿ, ಐಪಿಎಲ್ ರಹಸ್ಯ ವರ್ಕ್ ಆಗಿಲ್ಲ!
Duffy - ViratImage Credit source: IPL
ಝಾಹಿರ್ ಯೂಸುಫ್
|

Updated on: Nov 05, 2026 | 9:41 AM

Share

ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆಕ್ಲೆಂಡ್​ನ ಈಡನ್ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 40.2 ಓವರ್​ಗಳಲ್ಲಿ 185 ರನ್​ಗಳಿಸಿ ಆಲೌಟ್ ಆಯಿತು.

ಟೀಮ್ ಇಂಡಿಯಾ ಇನಿಂಗ್ಸ್ ವೇಳೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 32 ಓವರ್​ಗಳಲ್ಲಿ 143 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ 74 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 22.4 ಓವರ್​ಗಳಲ್ಲಿ 143 ರನ್​ಗಳಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಈ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ನಮಗೆ ತುಂಬಾ ‘ಕಿರಿಕಿರಿ’ ಉಂಟುಮಾಡಿತು. ಏಕೆಂದರೆ ಅವರ ಬ್ಯಾಟಿಂಗ್​ನಲ್ಲಿ ತಪ್ಪುಗಳೇ ಕಾಣಿಸಲ್ಲ ಎಂದು ಡಫಿ ಹೇಳಿದ್ದಾರೆ.

ಕಡಿಮೆ ಸ್ಕೋರ್ ಇದ್ದುದರಿಂದ ನಾವು ಹೇಗಾದರೂ ಮ್ಯಾಚ್​ನಲ್ಲಿ ಹಿಡಿತ ಸಾಧಿಸಲು ಯೋಜನೆ ಹಾಕಿಕೊಂಡಿದ್ದೆವು. ನಮ್ಮ ಬೌಲರ್​ಗಳು ಅಂತಹದೊಂದು ಮನಸ್ಥಿತಿಯೊಂದಿಗೆ ಕಣಕ್ಕಿಳಿದಿದ್ದರು. ಆದರೆ ಕೊಹ್ಲಿ ಕ್ರೀಸ್‌ಗೆ ಬಂದ ತಕ್ಷಣ ತೋರಿದ ಅದ್ಭುತ ಆಕ್ರಮಣಕಾರಿ ಮನೋಭಾವ ಕಿವೀಸ್ ಬೌಲರ್‌ಗಳ ಆತ್ಮವಿಶ್ವಾಸವನ್ನು ಧೂಳೀಪಟ ಮಾಡಿತು ಎಂದು ಡಫಿ ಹೇಳಿದ್ದಾರೆ.

ಈಡನ್ ಪಾರ್ಕ್ ಮೈದಾನದ ಬೌನ್ಸ್ ಮತ್ತು ಸಣ್ಣ ಬೌಂಡರಿಗಳ ಲಾಭವನ್ನು ವಿರಾಟ್ ಕೊಹ್ಲಿ ಚೆನ್ನಾಗಿ ಪಡೆದರು. “ಅವರ ಬ್ಯಾಟಿಂಗ್‌ನಲ್ಲಿ ತಪ್ಪು ಹುಡುಕುವುದು ತುಂಬಾ ಕಷ್ಟ. ಹುಕ್ ಮತ್ತು ಪುಲ್ ಶಾಟ್‌ಗಳನ್ನು ಅವರು ಆಡಿದ ರೀತಿ ಅದ್ಭುತವಾಗಿತ್ತು. ಬೌಲರ್‌ಗಳ ವೇಗವನ್ನೇ ಬಳಸಿ ಅವರು ಬೌಂಡರಿ ಬಾರಿಸುತ್ತಿದ್ದರೆ ನಮಗೆ ಅಸಹಾಯಕತೆ ಎನಿಸುತ್ತಿತ್ತು” ಎಂದು ಡಫಿ ತಿಳಿಸಿದ್ದಾರೆ.

ಐಪಿಎಲ್ ರಹಸ್ಯವೂ ವರ್ಕ್ ಆಗಲಿಲ್ಲ!

ಜೇಕಬ್ ಡಫಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆ ಆಡಿದ್ದಾರೆ. ನೆಟ್ಸ್‌ನಲ್ಲಿ ಕೊಹ್ಲಿಗೆ ಸಾಕಷ್ಟು ಬೌಲಿಂಗ್ ಮಾಡಿರುವ ಅನುಭವ ಅವರಿಗಿತ್ತು. ಆದರೆ, “ನೆಟ್ಸ್‌ನಲ್ಲಿ ಅವರು ನನಗೆ ಹೇಗೆ ಚಚ್ಚುತ್ತಿದ್ದರೋ, ಪಂದ್ಯದಲ್ಲೂ ಅದನ್ನೇ ಮಾಡಿದರು. ಐಪಿಎಲ್​ನ ಯಾವುದೇ ರಹಸ್ಯಗಳೂ ಕೂಡ ವರ್ಕ್​ ಆಗಲಿಲ್ಲ. ಅವರ ವಿರುದ್ಧ ಬೌಲಿಂಗ್ ಮಾಡುವುದು ನಿಜಕ್ಕೂ ಕಿರಿಕಿರಿ!” ಎಂದು ಡಫಿ ನಗುತ್ತಾ ಪುನರುಚ್ಚರಿಸಿದರು.

ಇದನ್ನೂ ಓದಿ: RCB ಸಿಂಗಲ್ ಸಿಂಹ: 9 ತಂಡಗಳ ನಡುವೆ ಜಿದ್ದಾಜಿದ್ದಿ!

ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಅವರ ಈ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು ಮಾತ್ರವಲ್ಲದೆ, ನ್ಯೂಝಿಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ತನ್ನ ಇರಾದೆಯನ್ನು ಸ್ಪಷ್ಟಪಡಿಸಿದೆ. ಬೌಲರ್‌ಗಳ ತಂತ್ರಗಳನ್ನು ಅರಿತು ಮೈದಾನದ ಮೂಲೆ ಮೂಲೆಗೂ ಬೌಂಡರಿ ಬಾರಿಸುವ ಕೊಹ್ಲಿ ಅವರ ಈ ಕಲೆ, ಕಿವೀಸ್ ವೇಗಿ ಜೇಕಬ್ ಡಫಿ ಅವರಂತಹ ಬೌಲರ್‌ಗಳಿಗೆ ‘ಕಿರಿಕಿರಿ’ ತಂದಿರುವುದು ಸಹಜವೇ ಆದರೂ, ಜಗತ್ತಿನಾದ್ಯಂತ ಇರುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಇದು ಶುದ್ಧ ಮನರಂಜನೆಯಾಗಿತ್ತು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!