AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2027: ಯಾವ ತಂಡದ ಬಳಿ ಇದೆ ಗರಿಷ್ಠ ಮೊತ್ತ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವುಮೆನ್ಸ್ ಪ್ರೀಮಿಯರ್ ಲೀಗ್ 5ನೇ ಆವೃತ್ತಿಯ ಮಿನಿ ಆಟಗಾರರ ಹರಾಜು ಪ್ರಕ್ರಿಯೆಯು ಇದೇ ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್‌ನಲ್ಲಿ ಸಂಜೆ 5:30 ಕ್ಕೆ ಅದ್ಧೂರಿಯಾಗಿ ಆರಂಭವಾಗಲಿದೆ. ಬಿಸಿಸಿಐ ಇತ್ತೀಚೆಗಷ್ಟೇ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿರುವ ಆಟಗಾರ್ತಿಯರ ಅಧಿಕೃತ ಶಾರ್ಟ್‌ಲಿಸ್ಟ್ ಅನ್ನು ಪ್ರಕಟಿಸಿದ್ದು, ಈ ಬಾರಿ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳಿಗಾಗಿ ಭಾರಿ ಪೈಪೋಟಿ ಏರ್ಪಡುವುದು ಖಚಿತವಾಗಿದೆ.

WPL 2027: ಯಾವ ತಂಡದ ಬಳಿ ಇದೆ ಗರಿಷ್ಠ ಮೊತ್ತ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Wpl 2027 Image Credit source: WPL
ಝಾಹಿರ್ ಯೂಸುಫ್
|

Updated on: Oct 20, 2026 | 2:38 PM

Share

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಐದನೇ ಆವೃತ್ತಿಯ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅಕ್ಟೋಬರ್ 28 ರಂದು ನಡೆಯಲಿರುವ ಈ ಹರಾಜಿನಲ್ಲಿ ಒಟ್ಟು 146 ಆಟಗಾರ್ತಿಯರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ, ಈ ಪೈಕಿ ಕೇವಲ ಬೆರಳೆಣಿಕೆಯಷ್ಟು ಆಟಗಾರ್ತಿಯರಿಗೆ ಮಾತ್ರ ವಿವಿಧ ತಂಡಗಳಲ್ಲಿ ಸ್ಥಾನ ಸಿಗಲಿದೆ. ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಏನಿದು ಮಿನಿ ಹರಾಜು? ಎಷ್ಟು ಸ್ಲಾಟ್‌ಗಳು ಖಾಲಿ ಇವೆ? ಯಾವ ಫ್ರಾಂಚೈಸಿ ಬಳಿ ಗರಿಷ್ಠ ಮೊತ್ತವಿದೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಏನಿದು ಮಿನಿ ಹರಾಜು?

ಮಿನಿ ಹರಾಜು ಎಂದರೆ ಪ್ರತಿ ಸೀಸನ್‌ಗಿಂತ ಮುನ್ನ ತಂಡದ ಸಣ್ಣಪುಟ್ಟ ಕೊರತೆಗಳನ್ನು ನೀಗಿಸಲು ನಡೆಸುವ ಒಂದು ಸೀಮಿತ ಹರಾಜು ಪ್ರಕ್ರಿಯೆಯಾಗಿದೆ. ಮೆಗಾ ಹರಾಜಿಗೆ ಹೋಲಿಸಿದರೆ ಮಿನಿ ಹರಾಜು ಹೇಗೆ ಭಿನ್ನ ಮತ್ತು ಇದರ ಮುಖ್ಯ ವೈಶಿಷ್ಟ್ಯಗಳು ಇಲ್ಲಿವೆ:

  • ಆಟಗಾರ್ತಿಯರ ಉಳಿಸಿಕೊಳ್ಳುವಿಕೆ: ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಪ್ರಮುಖ ಆಟಗಾರ್ತಿಯರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳುತ್ತವೆ. ಕೇವಲ ಬೇಡದ ಆಟಗಾರ್ತಿಯರನ್ನು ಮಾತ್ರ ತಂಡದಿಂದ ಬಿಡುಗಡೆ ಮಾಡುತ್ತವೆ.
  • ಸೀಮಿತ ಸ್ಥಾನಗಳು: ತಂಡಗಳು ಈಗಾಗಲೇ ಬಹುತೇಕ ಆಟಗಾರ್ತಿಯರನ್ನು ಉಳಿಸಿಕೊಂಡಿರುವುದರಿಂದ, ಹರಾಜಿನಲ್ಲಿ ಕೇವಲ ಖಾಲಿ ಇರುವ ಬೆರಳೆಣಿಕೆಯ ಸ್ಥಾನಗಳನ್ನು ತುಂಬಲು ಮಾತ್ರ ಅವಕಾಶವಿರುತ್ತದೆ.

ಎಷ್ಟು ಸ್ಲಾಟ್​ಗಳು ಖಾಲಿ ಇವೆ?

ಈ ಬಾರಿಯ ಮಿನಿ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಒಟ್ಟು 146 ಆಟಗಾರ್ತಿಯರು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಆದರೆ, ಐದು ಫ್ರಾಂಚೈಸಿಗಳಲ್ಲಿ ಖಾಲಿ ಇರುವುದು ಕೇವಲ 27 ಸ್ಲಾಟ್‌ಗಳು ಮಾತ್ರ. ಅಂದರೆ ಎಲ್ಲಾ ಫ್ರಾಂಚೈಸಿಗಳು ತಮ್ಮ ಖಾಲಿ ಇರುವ ಸ್ಲಾಟ್​ಗಳನ್ನು ತುಂಬಿದರೆ ಗರಿಷ್ಠ 27 ಆಟಗಾರ್ತಿಯರಿಗೆ ಮಾತ್ರ ಅವಕಾಶ ಸಿಗಲಿದೆ.

  • ಭಾರತೀಯ ಸ್ಲಾಟ್‌ಗಳು: ಹರಾಜಿನಲ್ಲಿ 119 ಭಾರತೀಯ ಆಟಗಾರ್ತಿಯರಿದ್ದು (22 ಕ್ಯಾಪ್ಡ್, 97 ಅನ್‌ಕ್ಯಾಪ್ಡ್), ಕೇವಲ 20 ಸ್ಥಾನಗಳು ಲಭ್ಯವಿವೆ.
  • ವಿದೇಶಿ ಸ್ಲಾಟ್‌ಗಳು: 27 ವಿದೇಶಿ ಆಟಗಾರ್ತಿಯರು ಕಣದಲ್ಲಿದ್ದು, ಕೇವಲ 7 ಸ್ಥಾನಗಳಿಗಾಗಿ ಮಾತ್ರ ಇಲ್ಲಿ ಅವಕಾಶವಿದೆ.

ಯಾರಿಗೆ ಗರಿಷ್ಠ ಮೂಲ ಬೆಲೆ?

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಸೋಫಿಯಾ ಡಂಕ್ಲಿ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಸೋಫಿ ಮೊಲಿನ್ಯೂ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಅಂದರೆ ₹50 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದು, ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಇದರ ಜೊತೆಗೆ ಭಾರತದ ಕಿರಣ್ ನವಗಿರೆ, ಜಿ. ಕಮಲಿನಿ ಹಾಗೂ ಆಸ್ಟ್ರೇಲಿಯಾದ ಹೀದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್ ₹40 ಲಕ್ಷದ ಬ್ರಾಕೆಟ್‌ನಲ್ಲಿದ್ದಾರೆ. ಇನ್ನುಳಿದಂತೆ ಶ್ರೀಲಂಕಾದ ಚಾಮರಿ ಅಥಾಪತ್ತು ಮತ್ತು ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ ಸೇರಿದಂತೆ 30 ಆಟಗಾರ್ತಿಯರು ₹30 ಲಕ್ಷದ ಮೂಲ ಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಯಾವ ತಂಡದ ಪರ್ಸ್‌ನಲ್ಲಿ ಎಷ್ಟಿದೆ ಹಣ? ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು?

ಹರಾಜಿಗೆ ಮುನ್ನ ಐದೂ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಉಳಿಸಿಕೊಂಡಿರುವ ಹಣ ಮತ್ತು ಖಾಲಿ ಇರುವ ಸ್ಲಾಟ್‌ಗಳ ಸಂಪೂರ್ಣ ವಿವರ ಇಲ್ಲಿದೆ:

ಫ್ರಾಂಚೈಸಿ ತಂಡ  ಲಭ್ಯವಿರುವ ಒಟ್ಟು ಸ್ಲಾಟ್‌ಗಳು ವಿದೇಶಿ ಆಟಗಾರ್ತಿಯರ ಸ್ಲಾಟ್‌ಗಳು ಉಳಿದಿರುವ ಒಟ್ಟು ಮೊತ್ತ
ಯುಪಿ ವಾರಿಯರ್ಸ್​ 7 2 ₹3.65 ಕೋಟಿ
ಗುಜರಾತ್ ಜೈಂಟ್ಸ್​ 3 0 ₹1.25 ಕೋಟಿ
ರಾಯಲ್ ಚಾಲೆಂಜರ್ಸ್​ ಬೆಂಗಳೂರು 7 1 ₹1.15 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್​ 5 2 ₹1.10 ಕೋಟಿ
ಮುಂಬೈ ಇಂಡಿಯನ್ಸ್​ 5 2 ₹1.00 ಕೋಟಿ

ಯುಪಿ ವಾರಿಯರ್ಸ್​ ಬಳಿ ಬಿಗ್ ಬಜೆಟ್:

ರಿಟೆನ್ಷನ್ ವೇಳೆ ಬರೋಬ್ಬರಿ 9 ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ ಯುಪಿ ವಾರಿಯರ್ಸ್ ತಂಡವು ಅತ್ಯಧಿಕ ₹3.75 ಕೋಟಿ ರೂಪಾಯಿ ಹಾಗೂ 8 ಸ್ಲಾಟ್‌ಗಳೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಮತ್ತೊಂದೆಡೆ, ಹರಾಜಿಗೂ ಮುನ್ನವೇ ತಾರಾ ನಾರ್ರಿಸ್ ಅವರನ್ನು ಟ್ರೇಡ್ ಮಾಡಿಕೊಂಡಿರುವ ಮುಂಬೈ ಇಂಡಿಯನ್ಸ್ ಬಳಿ ಕೇವಲ ₹1 ಕೋಟಿ ಉಳಿದಿದ್ದು, 6 ಭಾರತೀಯ ಆಟಗಾರ್ತಿಯರನ್ನು ಕಡಿಮೆ ಬಜೆಟ್‌ನಲ್ಲಿ ಖರೀದಿಸಬೇಕಾದ ಸವಾಲು ಎದುರಿಸುತ್ತಿದೆ.

ಇದನ್ನೂ ಓದಿ: WPL 2027: ಗರಿಷ್ಠ ಮೂಲ ಬೆಲೆ ಘೋಷಿಸಿದ ಇಬ್ಬರು ಆಟಗಾರ್ತಿಯರು!

ಕಳೆದ ಬಾರಿಯ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು, ತಮಗೆ ಅಗತ್ಯವಿರುವ 5 ಸ್ಲಾಟ್‌ಗಳನ್ನು (2 ವಿದೇಶಿ ಆಟಗಾರ್ತಿಯರು ಸೇರಿದಂತೆ) ಭರ್ತಿ ಮಾಡಲು ₹1.15 ಕೋಟಿ ಬಜೆಟ್‌ನೊಂದಿಗೆ ವಿಶೇಷ ಕಾರ್ಯತಂತ್ರ ರೂಪಿಸಲಿದೆ. ಒಟ್ಟಾರೆಯಾಗಿ, ಕೊಚ್ಚಿಯ ಈ ಮಿನಿ ಹರಾಜು ಅಂಗಳದಲ್ಲಿ ಯಾವ ಆಟಗಾರ್ತಿಯ ಅದೃಷ್ಟ ಖುಲಾಯಿಸಲಿದೆ? ಯಾರು ಯಾವ ಫ್ರಾಂಚೈಸಿಯ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ