AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಬಾಪೆ ಪರಾಕ್ರಮಕ್ಕೆ ಮೆಸ್ಸಿಯ ವಿಶ್ವ ದಾಖಲೆ ಶೇಕಿಂಗ್!

Kylian Mbappe: ಮಿಂಚಿನ ವೇಗ, ಮಂತ್ರಮುಗ್ಧಗೊಳಿಸುವ ಡ್ರಿಬ್ಲಿಂಗ್ ಕೌಶಲ್ಯ ಹಾಗೂ ಗೋಲು ಪೆಟ್ಟಿಗೆಯ ಮುಂದೆ ನಿಂತು ಎದುರಾಳಿ ರಕ್ಷಣಾ ಕೋಟೆಯನ್ನು ಧೂಳೀಪಟ ಮಾಡುವ ಅಪ್ರತಿಮ ಚಾಣಾಕ್ಷ... ಹೀಗೆ ವಿಶ್ವಕಪ್ ಅಂಗಳದಲ್ಲಿ ಕಿಲಿಯನ್ ಎಂಬಾಪೆ ಪರಾಕ್ರಮ ಮುಂದುವರೆದಿದೆ. ಈ ಪರಾಕ್ರಮದೊಂದಿಗೆ ಎಂಬಾಪೆ ಇದೀಗ ಲಿಯೋನೆಲ್ ಮೆಸ್ಸಿಯ ವಿಶ್ವ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ.

ಎಂಬಾಪೆ ಪರಾಕ್ರಮಕ್ಕೆ ಮೆಸ್ಸಿಯ ವಿಶ್ವ ದಾಖಲೆ ಶೇಕಿಂಗ್!
Mbappe Vs MessiImage Credit source: FIFA
ಝಾಹಿರ್ ಯೂಸುಫ್
|

Updated on:Jul 01, 2026 | 10:08 AM

Share

ಫಿಫಾ ವಿಶ್ವಕಪ್ 2026ರಲ್ಲಿ ಕಿಲಿಯನ್ ಎಂಬಾಪೆ ಪರಾಕ್ರಮ ಮುಂದುವರೆದಿದೆ. ಕಳೆದ ಮೂರು ಮ್ಯಾಚ್​ಗಳಲ್ಲಿ 4 ಗೋಲು ಬಾರಿಸಿದ್ದ ಎಂಬಾಪೆ ಇದೀಗ ಮತ್ತೆರಡು ಗೋಲುಗಳನ್ನು ದಾಖಲಿಸಿದ್ದಾರೆ. ಈ ಗೋಲುಗಳೊಂದಿಗೆ 20 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ಪರ ಸೆಂಟರ್​ ಫಾರ್ವರ್ಡ್​ನಲ್ಲಿ ಆಡಿದ್ದ ಎಂಬಾಪೆ ಮೊದಲಾರ್ಧದ 45ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಪಾಸ್​ ಅನ್ನು ಗೋಲಾಗಿ ಪರಿವರ್ತಿಸಿದ್ದರು.

ಇದಾದ ಬಳಿಕ ದ್ವಿತೀಯಾರ್ಧದ 74ನೇ ನಿಮಿಷದಲ್ಲಿ, ಮೈಕೆಲ್ ಒಲಿಸೆ ನೀಡಿದ ಮತ್ತೊಂದು ನಿಖರವಾದ ತ್ರೂ-ಪಾಸ್ ಅನ್ನು ಗೋಲು ಬಲೆಯೊಳಗೆ ತಲುಪಿಸಿದ್ದರು.

ಇದರ ನಡುವೆ 53ನೇ ನಿಮಿಷದಲ್ಲಿ ಮೈಕೆಲ್ ಒಲಿಸೆ ಕೂಡ ಒಂದು ಗೋಲು ದಾಖಲಿಸಿದ್ದರು. ಈ ಮೂಲಕ ಫ್ರಾನ್ಸ್ ತಂಡವು 3-0 ಅಂತರದಿಂದ ಸ್ವೀಡನ್ ತಂಡವನ್ನು ಮಣಿಸಿ ಪ್ರೀ ಕ್ವಾರ್ಟರ್​ ಫೈನಲ್​​ಗೆ ಎಂಟ್ರಿ ಕೊಟ್ಟಿದೆ.

ಎಂಬಾಪೆ ವಿಶ್ವ ದಾಖಲೆ:

ಸ್ವೀಡನ್ ವಿರುದ್ಧ ಬಾರಿಸಿದ 2 ಗೋಲುಗಳೊಂದಿಗೆ ಕಿಲಿಯನ್ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ನಾಕೌಟ್ ಗೋಲುಗಳನ್ನು ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಈ ದಾಖಲೆ ಬ್ರೆಝಿಲ್​ ದಿಗ್ಗಜರಾದ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ಅವರ ಹೆಸರಿನಲ್ಲಿತ್ತು.

  • ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ತಲಾ 8 ನಾಕೌಟ್ ಗೋಲು ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಕಿಲಿಯನ್ ಎಂಬಾಪೆ 10 ನಾಕೌಟ್ ಗೋಲುಗಳೊಂದಿಗೆ ಇದೀಗ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

2018 ರ ವಿಶ್ವಕಪ್​ನ ನಾಕೌಟ್​ ಹಂತದಲ್ಲಿ 3 ಗೋಲು ಬಾರಿಸಿದ್ದ ಎಂಬಾಪೆ, 2022 ರ ವಿಶ್ವಕಪ್​ನ ನಾಕೌಟ್ ಸುತ್ತಿನಲ್ಲಿ 5 ಗೋಲು ದಾಖಲಿಸಿದ್ದರು. ಇದೀಗ ಸ್ವೀಡನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಮತ್ತೆರಡು ಗೋಲು ಬಾರಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮೆಸ್ಸಿ ದಾಖಲೆಯೇ ಶೇಕಿಂಗ್!

ಸ್ವೀಡನ್ ವಿರುದ್ಧದ ಎರಡು ಗೋಲುಗಳ ನೆರವಿನಿಂದ ಕಿಲಿಯನ್ ಎಂಬಾಪೆ ತಮ್ಮ ಒಟ್ಟಾರೆ ವಿಶ್ವಕಪ್ ವೃತ್ತಿಜೀವನದ ಗೋಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಅವರನ್ನು ಹಿಂದಿಕ್ಕಿ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಪ್ರಸ್ತುತ 19 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಅವರಿಗಿಂತ ಎಂಬಾಪೆ ಕೇವಲ 1 ಗೋಲಿನ ಅಂತರದಿಂದ ಹಿಂದೆ ಇದ್ದಾರೆ.  ಅಂದರೆ ಈ ಬಾರಿಯ ಟೂರ್ನಿಯಲ್ಲೇ ಕಿಲಿಯನ್ ಎಂಬಾಪೆ, ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸುವುದನ್ನು ಎದುರು ನೋಡಬಹುದು.

  • ಲಿಯೋನೆಲ್ ಮೆಸ್ಸಿ 29 ವಿಶ್ವಕಪ್ ಪಂದ್ಯಗಳ ಮೂಲಕ ಈವರೆಗೆ 19 ಗೋಲು ದಾಖಲಿಸಿದ್ದಾರೆ.
  • ಕಿಲಿಯನ್ ಎಂಬಾಪೆ ಕೇವಲ 18 ವಿಶ್ವಕಪ್​ ಪಂದ್ಯಗಳ ಮೂಲಕ ಈವರೆಗೆ 18 ಗೋಲು ಬಾರಿಸಿದ್ದಾರೆ.

ಇದನ್ನೂ ಓದಿ: ಗಾಯದ ಸಮಸ್ಯೆ… ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ!

ಈಗಾಗಲೇ ನಾಲ್ಕು ಮ್ಯಾಚ್​ಗಳ ಮೂಲಕ ಒಟ್ಟು 6 ಗೋಲು ದಾಖಲಿಸಿರುವ ಕಿಲಿಯನ್ ಎಂಬಾಪೆ ಅವರ ಅದ್ಭುತ ಪ್ರದರ್ಶನ ಮುಂದಿನ ಪಂದ್ಯದಲ್ಲೂ ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ‘ಫ್ರೆಂಚ್ ಬುಲೆಟ್’ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On - 10:01 am, Wed, 1 July 26

Follow Us
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ