Lionel Messi: ಈ ವಿದಾಯಕ್ಕೆ ಸಿದ್ಧವಾಗಿರಲಿಲ್ಲ! ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ

Lionel Messi: ಹಲವು ವರ್ಷಗಳನ್ನು ಕಳೆದ ನಂತರ ತಂಡವನ್ನು ತೊರೆಯುವುದು ನನಗೆ ತುಂಬಾ ಕಷ್ಟ, ಬಹುತೇಕ ನನ್ನ ಇಡೀ ಜೀವನವನ್ನು ಇಲ್ಲೇ ಕಳೆದಿದ್ದೇನೆ. ನಾನು ಈ ವಿದಾಯಕ್ಕೆ ತಯಾರಿರಲಿಲ್ಲ.

Lionel Messi: ಈ ವಿದಾಯಕ್ಕೆ ಸಿದ್ಧವಾಗಿರಲಿಲ್ಲ! ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ
ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳಿದ ಲಿಯೊನೆಲ್ ಮೆಸ್ಸಿ
Follow us
TV9 Web
| Updated By: ಪೃಥ್ವಿಶಂಕರ

Updated on:Aug 08, 2021 | 9:43 PM

ಆಧುನಿಕ ಫುಟ್ಬಾಲ್​ನ ಪ್ರಖ್ಯಾತ ತಂಡದೊಂದಿಗಿನ ಅತ್ಯಂತ ಸ್ಮರಣೀಯ ಮತ್ತು ಅದ್ಭುತವಾದ ಪ್ರಯಾಣ ಕೊನೆಗೊಂಡಿದೆ. ಈ ತಂಡದೊಂದಿಗೆ ಪ್ರಯಾಣದಲ್ಲಿದ್ದ ನಾಯಕ ಈಗ ತನ್ನ ತಂಡಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಲಿಯೊನೆಲ್ ಮೆಸ್ಸಿ, ಸ್ಪೇನ್‌ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ (ಎಫ್‌ಸಿ ಬಾರ್ಸಿಲೋನಾ) ದ ಶ್ರೇಷ್ಠ ಆಟಗಾರ, ಭಾನುವಾರದಂದು ಕ್ಲಬ್‌ಗೆ ವಿದಾಯ ಹೇಳಿದರು. ಕಳೆದ 21 ವರ್ಷಗಳಿಂದ ಬಾರ್ಸಿಲೋನಾದಲ್ಲಿದ್ದ ಮೆಸ್ಸಿ, ಎಲ್ಲಾ ಆಸೆ ಮತ್ತು ಪ್ರಯತ್ನಗಳ ನಂತರವೂ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಈ ಸುದೀರ್ಘ ಪ್ರಯಾಣ ಇಲ್ಲಿಗೆ ಕೊನೆಗೊಳ್ಳಬೇಕಾಯಿತು. ಬಾರ್ಸಿಲೋನಾ ಶುಕ್ರವಾರ ಮೆಸ್ಸಿಯ ನಿರ್ಗಮನದ ಬಗ್ಗೆ ಮಾಹಿತಿ ಪ್ರಕಟಿಸಿದ ನಂತರ, ಮೆಸ್ಸಿ ಭಾನುವಾರ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ ತಾನು ಬಾರ್ಸಿಲೋನಾದೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದರು. ಆದರೆ ಅದು ಆಗಲಿಲ್ಲ.

13 ನೇ ವಯಸ್ಸಿನಲ್ಲಿ ಬಾರ್ಸಿಲೋನಾದ ಅಕಾಡೆಮಿಗೆ ಸೇರಿದ ಮೆಸ್ಸಿಯ ಒಪ್ಪಂದವು ಈ ವರ್ಷದ ಜೂನ್ 30 ರಂದು ಕೊನೆಗೊಂಡಿತು. ಮೆಸ್ಸಿ ಮತ್ತು ಬಾರ್ಸಿಲೋನಾ ಅಧಿಕೃತವಾಗಿ ಪರಸ್ಪರ ಸಂಬಂಧ ಹೊಂದಿಲ್ಲದಿರುವುದು ಇದೇ ಮೊದಲು. ಈ ಸಮಯದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮೆಸ್ಸಿ ಮತ್ತೆ ಕ್ಲಬ್‌ಗೆ ಸೇರುವ ಭರವಸೆ ಮತ್ತು ಪ್ರಯತ್ನಗಳು ಇದ್ದವು. ಆದರೆ ಬಾರ್ಸಿಲೋನಾದ ಆರ್ಥಿಕ ಪರಿಸ್ಥಿತಿ ಮತ್ತು ಅದರ ಮೇಲೆ ಲಾ ಲಿಗಾ ನಿಯಮಗಳಿಂದಾಗಿ, ಎಲ್ಲಾ ಪ್ರಯತ್ನಗಳ ನಂತರವೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಇಬ್ಬರ ದೀರ್ಘ ಮತ್ತು ಸ್ಮರಣೀಯ ಸಂಬಂಧ ಇಲ್ಲಿಗೆ ಮುಗಿದಿದೆ.

ಈ ವಿದಾಯಕ್ಕೆ ಸಿದ್ಧವಾಗಿರಲಿಲ್ಲ ಬಾರ್ಸಿಲೋನಾ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಮೆಸ್ಸಿ ಕುಟುಂಬ, ಅವರ ತಂಡದ ಆಟಗಾರರು ಮತ್ತು ಕ್ಲಬ್ ಅಧಿಕಾರಿಗಳ ಸಮ್ಮುಖದಲ್ಲಿ, ಅರ್ಜೆಂಟೀನಾದ ಕ್ಯಾಪ್ಟನ್ ಮಗುವಿನಂತೆ ಅಳುತ್ತಾ ತನ್ನ ಮಾತುಗಳನ್ನು ಮುಂದುವರೆಸುತ್ತಲೇ ಇದ್ದರು. ಹಲವು ವರ್ಷಗಳನ್ನು ಕಳೆದ ನಂತರ ತಂಡವನ್ನು ತೊರೆಯುವುದು ನನಗೆ ತುಂಬಾ ಕಷ್ಟ, ಬಹುತೇಕ ನನ್ನ ಇಡೀ ಜೀವನವನ್ನು ಇಲ್ಲೇ ಕಳೆದಿದ್ದೇನೆ. ನಾನು ಈ ವಿದಾಯಕ್ಕೆ ತಯಾರಿರಲಿಲ್ಲ. ನಾನು ನನ್ನ ಮನೆಯಂತಿರುವ ಕ್ಲಬ್‌ನೊಂದಿಗೆ ಇರುತ್ತೇನೆ ಎಂದು ನನಗೆ ವಿಶ್ವಾಸವಿತ್ತು ಎಂದು ಭಾವುಕ ನುಡಿಯಾಡಿದ್ದಾರೆ.

21 ವರ್ಷಗಳ ಪ್ರಯಾಣ, ಹತ್ತಾರು ದಾಖಲೆಗಳು ಮೆಸ್ಸಿ 2004 ರಲ್ಲಿ ಕ್ಲಬ್‌ಗಾಗಿ ತಮ್ಮ ಹಿರಿಯ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಬಾರ್ಸಿಲೋನಾದೊಂದಿಗೆ ಇದ್ದರು. ಅವರು 672 ಗೋಲುಗಳೊಂದಿಗೆ ಬಾರ್ಸಿಲೋನಾದ ಅತ್ಯಧಿಕ ಗೋಲು ಗಳಿಸಿದವರಾಗಿದ್ದಾರೆ. ಅವರು ಕ್ಲಬ್‌ನೊಂದಿಗೆ 778 ಪಂದ್ಯಗಳನ್ನು ಆಡಿದ್ದಾರೆ, ಇದು ಒಂದು ದಾಖಲೆಯಾಗಿದೆ. ಅವರು 520 ಪಂದ್ಯಗಳಲ್ಲಿ 474 ಗೋಲುಗಳೊಂದಿಗೆ ಸ್ಪ್ಯಾನಿಷ್ ಲೀಗ್‌ನಲ್ಲಿ ಅಗ್ರ ಸ್ಕೋರರ್ ಆಗಿದ್ದಾರೆ. ಕ್ಲಬ್‌ನೊಂದಿಗೆ ಮೆಸ್ಸಿ 34 ಟ್ರೋಫಿಗಳನ್ನು ಗೆದ್ದರು, ಇದರಲ್ಲಿ ಲಾ ಲಿಗಾದಲ್ಲಿ 10 ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ 4.

Published On - 9:31 pm, Sun, 8 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ