Lionel Messi, Jay Shah: ಲಿಯೋನೆಲ್ ಮೆಸ್ಸಿ ಕಡೆಯಿಂದ ಜಯ್ ಶಾಗೆ ವಿಶೇಷ ಗಿಫ್ಟ್
FIFA WORLD CUP: ಫಿಫಾ ವಿಶ್ವಕಪ್ನಲ್ಲಿ ನಾಲ್ಕು ಬಾರಿ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ್ದ ಲಿಯೋನೆಲ್ ಮೆಸ್ಸಿ ಈ ಬಾರಿಯ ವರ್ಲ್ಡ್ಕಪ್ ಮೂಲಕ ವಿದಾಯ ಹೇಳುವ ಇರಾದೆಯಲ್ಲಿದ್ದರು. ಅದರಂತೆ ಕೊನೆಯ ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಮೆಸ್ಸಿ ಅದ್ಭುತ ಪ್ರದರ್ಶನ ನೀಡಿದ್ದರು. ಪರಿಣಾಮ ವಿಶ್ವಕಪ್ ಫೈನಲ್ ತಲುಪಿದ್ದ ಅರ್ಜೆಂಟೀನಾ ಫ್ರಾನ್ಸ್ ತಂಡವನ್ನು ಎದುರಿಸಿತ್ತು.

ಫುಟ್ಬಾಲ್ ಅಂಗಳದ ಮ್ಯಾಜಿಷಿಯನ್ ಎಂದೇ ಖ್ಯಾತರಾಗಿರುವ ಅರ್ಜೆಂಟೀನಾದ ಪ್ರಸಿದ್ಧ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ವಿಶೇಷ ಉಡುಗೊರೆ ಕಳುಹಿಸಿದ್ದಾರೆ. ಅದು ಕೂಡ ವಿಶ್ವಕಪ್ ಗೆದ್ದಿರುವ ಸಂಭ್ರಮದ ನಡುವೆ ಎಂಬುದು ವಿಶೇಷ. ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫ್ರಾನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಗೆಲುವಿನ ಸಂಭ್ರಮಾಚರಣೆ ಭಾರತದಲ್ಲೂ ಕಂಡು ಬಂತು. ಏಕೆಂದರೆ ಅರ್ಜೆಂಟೀನಾ ಆಟಗಾರನಿಗೆ ಭಾರತದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅವರಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಒಬ್ಬರು.
ಇದೀಗ ವಿಶ್ವ ಚಾಂಪಿಯನ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಖುದ್ದು ಸಹಿ ಮಾಡಿರುವ ವಿಶೇಷ ಜೆರ್ಸಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಶೇಷ ಜೆರ್ಸಿಯ ಫೋಟೋವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
GOAT (ಮೆಸ್ಸಿ) ಶುಭಾಶಯ ಕೋರಿ, ತಮ್ಮ ಪಂದ್ಯದ ಜೆರ್ಸಿಯನ್ನು ಸಹಿ ಮಾಡಿ ಜಯ್ ಶಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಎಂತಹ ಸರಳ ವ್ಯಕ್ತಿತ್ವ. ಶೀಘ್ರದಲ್ಲೇ ನಾನು ಕೂಡ ಒಂದು ಜೆರ್ಸಿ ಪಡೆಯುವ ವಿಶ್ವಾಸವಿದೆ ಎಂದು ಪ್ರಗ್ಯಾನ್ ಓಜಾ ವಿಶೇಷ ಜೆರ್ಸಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದೀಗ ಜಯ್ ಶಾ ಅವರಿಗೆ ಲಭಿಸಿದ ಲಿಯೋನೆಲ್ ಮೆಸ್ಸಿಯ ಜೆರ್ಸಿಯ ಫೋಟೋ ವೈರಲ್ ಆಗಿದ್ದು, ಅರ್ಜೆಂಟೀನಾ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಈಡೇರಿದ ಮೆಸ್ಸಿಯ ಕನಸು:
ಫಿಫಾ ವಿಶ್ವಕಪ್ನಲ್ಲಿ ನಾಲ್ಕು ಬಾರಿ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ್ದ ಲಿಯೋನೆಲ್ ಮೆಸ್ಸಿ ಈ ಬಾರಿಯ ವರ್ಲ್ಡ್ಕಪ್ ಮೂಲಕ ವಿದಾಯ ಹೇಳುವ ಇರಾದೆಯಲ್ಲಿದ್ದರು. ಅದರಂತೆ ಕೊನೆಯ ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಮೆಸ್ಸಿ ಅದ್ಭುತ ಪ್ರದರ್ಶನ ನೀಡಿದ್ದರು. ಪರಿಣಾಮ ವಿಶ್ವಕಪ್ ಫೈನಲ್ ತಲುಪಿದ್ದ ಅರ್ಜೆಂಟೀನಾ ಫ್ರಾನ್ಸ್ ತಂಡವನ್ನು ಎದುರಿಸಿತ್ತು.
ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ (4-2) ನಲ್ಲಿ ಸೋಲಿಸಿದ ಅರ್ಜೆಂಟೀನಾ ಮೂರನೇ ಬಾರಿ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿತು. ಅದರಲ್ಲೂ ಕೊನೆಯ ಬಾರಿ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ಲಿಯೋನೆಲ್ ಮೆಸ್ಸಿ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಬಹುಕಾಲದ ತಮ್ಮ ಕನಸನ್ನು ಈಡೇರಿಸಿಕೊಂಡರು.
Published On - 10:31 pm, Fri, 23 December 22