Paris Olympics 2024: 10 ಮೀ. ಏರ್ ಪಿಸ್ತೂಲ್ ಸ್ಪರ್ಧೆ; ಫೈನಲ್ಗೇರಿದ ಮನು ಭಾಕರ್..!
Paris Olympics 2024: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್, ಭಾರತಕ್ಕೆ ಮೂರನೇ ವೈಯಕ್ತಿಕ ಪದಕ ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ. ಮನು 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್, ಭಾರತಕ್ಕೆ ಮೂರನೇ ವೈಯಕ್ತಿಕ ಪದಕ ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ. ಈ ಮೊದಲು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದುಕೊಟ್ಟಿದ್ದ ಮನು, ಆ ಬಳಿಕ ಸರಬ್ಜೋತ್ ಸಿಂಗ್ ಜೊತೆಗೂಡಿ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಇದೀಗ ಮನು 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮನು 590-24x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಸುಲಭವಾಗಿ ಫೈನಲ್ ತಲುಪಿದರು. ಆದರೆ ಈವೆಂಟ್ನಲ್ಲಿ ಭಾರತದ ಪರ ಸ್ಪರ್ಧಿಸಿದ್ದ ಇನ್ನೊಬ್ಬ ಅಥ್ಲೀಟ್ ಇಶಾ ಸಿಂಗ್ ಒಟ್ಟು 581-17x ಅಂಕಗಳೊಂದಿಗೆ 18 ನೇ ಸ್ಥಾನ ಪಡೆದು ಫೈನಲ್ನಿಂದ ಹೊರಗುಳಿದರು. ಉಳಿದಂತೆ ಹಂಗೇರಿಯ ಮೇಜರ್ ವೆರೋನಿಕಾ, ಮನುಗಿಂತ ಕೇವಲ ಎರಡು ಪಾಯಿಂಟ್ಗಳನ್ನು ಹೆಚ್ಚಿಗೆ ಪಡೆದು ಅಗ್ರಸ್ಥಾನ ಪಡೆದರು.
ಇತಿಹಾಸ ಸೃಷ್ಟಿಸುವ ಅವಕಾಶ
ಮನು ಭಾಕರ್ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಗೆದ್ದರೆ ಇತಿಹಾಸ ಸೃಷ್ಟಿಸಲಿದ್ದಾರೆ. ಏಕಂದರೆ ಹಿಂದೆಂದೂ ಯಾವುದೇ ಭಾರತೀಯ ಸ್ಪರ್ಧಿ ಒಲಿಂಪಿಕ್ಸ್ನಲ್ಲಿ ಸತತ ಮೂರು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ, ಭಾರತದ ಪರ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಸುಶೀಲ್ ಕುಮಾರ್ ಹಾಗೂ ಪಿವಿ ಸಿಂಧು 2 ಒಲಿಂಪಿಕ್ಸ್ ಪದಕಗಳನ್ನು ಗೆದ್ದಿದ್ದು, ಮನು ಕೂಡ ಇವರೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.
25 ಮೀ. ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ
25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿರಿರುವ ಮನು ಭಾಕರ್, ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಈ ಸ್ಪರ್ಧೆಯಲ್ಲಿ 6 ಪದಕಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. ಹಾಗೆಯೇ 2022 ರಲ್ಲಿ ಕೈರೋದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದರು. ಇದಲ್ಲದೆ ಕಳೆದ ವರ್ಷ, ಭೋಪಾಲ್ನಲ್ಲಿ ನಡೆದ ವಿಶ್ವಕಪ್ನಲ್ಲಿ, ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಹಾಗೂ 25 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಕೂಡ ಗೆದ್ದಿದ್ದರು.
Published On - 5:15 pm, Fri, 2 August 24