RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ
Virat Kohli's 66th IPL Fifty: ಕ್ರಿಕೆಟ್ನಲ್ಲಿ 'ಕ್ಯಾಚಸ್ ವಿನ್ ಮ್ಯಾಚಸ್' ಮಾತು ನಿಜವಾಯಿತು. ಐಪಿಎಲ್ 2026 ರ RCB vs ಗುಜರಾತ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೊನ್ನೆ ರನ್ಗೆ ನೀಡಿದ ಸುಲಭ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಚೆಲ್ಲಿದರು. ಈ ಜೀವದಾನದ ಲಾಭ ಪಡೆದ ಕೊಹ್ಲಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 44 ಎಸೆತಗಳಲ್ಲಿ 81 ರನ್ ಬಾರಿಸಿ, RCB ಇನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು.

ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಫಿಲ್ಡರ್ ಮಾಡುವ ಅದೊಂದೆ ಒಂದು ತಪ್ಪು ತಂಡವನ್ನು ಸೋಲಿನ ದವಡೆಗೆ ಹೇಗೆ ತಳ್ಳುತ್ತದೆ ಎಂಬುದು ಇಂದಿನ ಆರ್ಸಿಬಿ ಹಾಗೂ ಗುಜರಾತ್ (RCB vs GT) ನಡುವಿನ ಪಂದ್ಯದಲ್ಲಿ ಸಾಭೀತಾಯಿತು. ಐಪಿಎಲ್ 2026 (IPL 2026) 34ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 206 ರನ್ ಕಲೆಹಾಕಿತ. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (Virat Kohli) ಹಾಗೂ ಜೆಕೋಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಗುಜರಾತ್ ಪರ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದರು. ಸಿರಾಜ್ ಬೌಲ್ ಮಾಡಿದ ಈ ಓವರ್ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಆ ಕ್ಯಾಚ್ ಹಿಡಿಯುವಲ್ಲಿ ವಾಷಿಂಗ್ಟನ್ ಸುಂದರ್ ವಿಫಲರಾದರು.
ಮೊದಲ ಎಸೆತದಲ್ಲೇ ಜೀವದಾನ
ಸಿರಾಜ್ ಎಸೆತವನ್ನು ಕೊಹ್ಲಿ ಮಿಡ್ ವಿಕೆಟ್ ಕಡೆಗೆ ಆಡಿದರು. ಅಲ್ಲಿಯೇ ನಿಂತಿದ್ದ ಸುಂದರ್ಗೆ ಇದು ಸುಲಭ ಕ್ಯಾಚ್ ಆಗಿತ್ತು. ಆದರೆ ಆ ಕ್ಯಾಚ್ ತೆಗೆದುಕೊಳ್ಳುವಲ್ಲಿ ಸುಂದರ್ ತಪ್ಪು ಮಾಡಿದರು. ಹೀಗಾಗಿ ಕೊಹ್ಲಿಗೆ ತಾವು ಎದುರಿಸಿದ ಮೊದಲ ಎಸೆತದಲ್ಲೇ ಜೀವದಾನ ಸಿಕ್ಕಿತು. ಅಂದರೆ ಆಗ ಕೊಗ್ಲಿ ಖಾತೆಯನ್ನು ತೆರೆದಿರಲಿಲ್ಲ. ಇಲ್ಲಿಂದ ಜೀವದಾನದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ವಿರಾಟ್ ಕೊಹ್ಲಿ ಗುಜರಾತ್ನ ಪ್ರತಿಯೊಬ್ಬ ಬೌಲರ್ ಅನ್ನು ತರಾಟೆಗೆ ತೆಗೆದುಕೊಂಡರು.
King Kohli ಕ್ಯಾಚ್ ಡ್ರಾಪ್! 😱
ಇದು GT ತಂಡಕ್ಕೆ ಅತಿ ದೊಡ್ಡ ನಷ್ಟ ಆಗಲಿದೆಯೇ? Virat Kohli ಅವರಿಗೆ ಒಮ್ಮೆ ಚಾನ್ಸ್ ಸಿಕ್ರೆ, ಅವ್ರು ಅದನ್ನ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸದೆ ಬಿಡುವುದಿಲ್ಲ.!💯🥵
ವೀಕ್ಷಿಸಿ | #TATAIPL2026 👉 #RCBvsGT | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ. #TATAIPL pic.twitter.com/ttqc3IvFsT
— Star Sports Kannada (@StarSportsKan) April 24, 2026
44 ಎಸೆತಗಳಲ್ಲಿ 81 ರನ್
ಇದರ ಫಲವಾಗಿ ಕೊಹ್ಲಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ 66 ನೇ ಐಪಿಎಲ್ ಅರ್ಧಶತಕ ಮತ್ತು ಈ ಆವೃತ್ತಿಯ ಮೂರನೇ ಅರ್ಧಶತಕವೂ ಆಗಿದೆ. ಕೊಹ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಕೊಹ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಬಾರಿಸಿದರು. ಅಂದರೆ ಕೊಹ್ಲಿ ಮುಂದಿನ 14 ಎಸೆತಗಳಲ್ಲಿ 31 ರನ್ ಚಚ್ಚಿದರು. ದುರಾದೃಷ್ಟವಶಾತ್ ಕೊಹ್ಲಿ ಜೇಸನ್ ಹೊಲ್ಡರ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಶತಕ ವಂಚಿತದರು.
RCB vs GT IPL 2026 Live Score: ಗುಜರಾತ್ ವಿರುದ್ಧ ಆರ್ಸಿಬಿಗೆ ಸುಲಭ ಜಯ
800 ಬೌಂಡರಿ, 300 ಸಿಕ್ಸರ್
ಕೊಹ್ಲಿ ತಮ್ಮ ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ಕೊಹ್ಲಿ ಐಪಿಎಲ್ನಲ್ಲಿ 800 ಬೌಂಡರಿಗಳನ್ನು ಮತ್ತು 300 ಸಿಕ್ಸರ್ಗಳನ್ನು ಬಾರಿಸಿದ ಮೈಲಿಗಲ್ಲು ದಾಟಿದರು. ಹಾಗೆಯೇ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Fri, 24 April 26




