World Cadets Chess: ವಿಶ್ವ ಚೆಸ್ ಚಾಂಪಿಯನ್​ಶಿಪ್​ ಗೆದ್ದು ‘ಅಪ್ಪು’ಗೆ ಅರ್ಪಿಸಿದ ಪುಟ್ಟ ಕನ್ನಡತಿ

World Cadets Chess: ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ( ಇಂಗ್ಲೆಂಡ್ ) ಅವರನ್ನು ಫಾಲೋ ಮಾಡಿದ್ದರು.

World Cadets Chess: ವಿಶ್ವ ಚೆಸ್ ಚಾಂಪಿಯನ್​ಶಿಪ್​ ಗೆದ್ದು 'ಅಪ್ಪು'ಗೆ ಅರ್ಪಿಸಿದ ಪುಟ್ಟ ಕನ್ನಡತಿ
Appu - A Charvi
TV9kannada Web Team

| Edited By: Zahir PY

Sep 28, 2022 | 12:00 PM

ಯೂರೋಪ್​ನ ಜಾರ್ಜಿಯಾದಲ್ಲಿ ನಡೆದ FIDE ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ (World Cadets Chess) ಕರ್ನಾಟಕದ ಎ ಚಾರ್ವಿ (A Charvi) ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾಸನದ ಪುಟ್ಟ ಪೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದರು. ವಿಶೇಷ ಎಂದರೆ ತನ್ನ ಈ ವಿಶ್ವ ಚಾಂಪಿಯನ್ ಗೆಲುವನ್ನು ಚಾರ್ವಿ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಅರ್ಪಿಸಿದ್ದಾರೆ.

ಅಪ್ಪಟ ‘ಅಪ್ಪು’ ಅಭಿಮಾನಿಯಾಗಿರುವ ಹಾಸನದ ಶ್ರವಣಬೆಳಗೊಳ ಮೂಲದ‌ ಚಾರ್ವಿ ತನ್ನ ಗೆಲುವನ್ನು ತನ್ನ ನೆಚ್ಚಿನ ನಟ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ಸಮರ್ಪಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಆಲ್​ಟೈಮ್ ಫೇವರೇಟ್ ನಟನಿಗೆ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಗೌರವ ಸೂಚಿಸಿದ್ದಾರೆ.

ಈ ಸ್ಪರ್ಧೆಯಲ್ಲಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾರ್ವಿ 11 ಸುತ್ತುಗಳಿಂದ 9.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ( ಇಂಗ್ಲೆಂಡ್ ) ಅವರನ್ನು ಫಾಲೋ ಮಾಡಿದ್ದರು. ಆದರೆ ಇಬ್ಬರೂ 9.5 ಅಂಕಗಳೊಂದಿಗೆ ಚದುರಂಗದಾಟವನ್ನು ಕೊನೆಗೊಳಿಸಿದ್ದರು. ಆ ನಂತರ ಉತ್ತಮ ಟೈ-ಬ್ರೇಕ್ ಸ್ಕೋರ್​ನಲ್ಲಿ ಬೋಧನ ಅವರನ್ನು ಹಿಂದಿಕ್ಕಿ ಚಾರ್ವಿ ಲಿಟಲ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಎ ಚಾರ್ವಿ

ಚಾರ್ವಿ ಅಲ್ಲದೆ, ಗಾಜಿಯಾಬಾದ್ ಮೂಲದ ಶುಭಿ ಗುಪ್ತಾ ಅವರು 12 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದರು. 11 ಸುತ್ತುಗಳಿಂದ 8.5 ಅಂಕಗಳನ್ನು ಗಳಿಸಿದ ಶುಭಿ ಗುಪ್ತಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

ಕರ್ನಾಟಕದ ಕೀರ್ತಿ ಪಾತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಚಾರ್ವಿಯ ಈ ಸಾಧನೆಯನ್ನು 5 ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ.

ರಾಜ್ಯ ಸರ್ಕಾರದಿಂದ 5 ಲಕ್ಷ ರೂ.:

ವಿಶ್ವ ಕೆಡೆಟ್ ಚೆಸ್​ ಚಾಂಪಿಯನ್​ಶಿಪ್​ನಲ್ಲಿ ಪ್ರಶಸ್ತಿ ವಿಜೇತರಾಗಿರುವ ಹಾಸನ ಮೂಲದ ಚಾರ್ವಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವ ನಾರಾಯಣಗೌಡ ಘೋಷಿಸಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada