Google Pixel 9 Pro: ಆ್ಯಪಲ್ಗೆ ಶುರುವಾಯಿತು ನಡುಕ: ಐಫೋನ್ಗೆ ಟಕ್ಕರ್ ಕೊಡಲು ಬಂದೇ ಬಿಡ್ತು ಹೊಸ ಫೋನ್
ಐಫೋನ್ 16 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗೂಗಲ್ ಪಿಕ್ಸೆಲ್ 9 ಸರಣಿ ಈ ವಿಭಾಗದಲ್ಲಿ ಇದಕ್ಕೆ ಟಕ್ಕರ್ ಕೊಡುತ್ತಿದೆ. ಶೀಘ್ರದಲ್ಲೇ ಗೂಗಲ್ ಈ ಸರಣಿಯ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪಿಕ್ಸೆಲ್ 9 ಪ್ರೊ ಸ್ಮಾರ್ಟ್‌ಫೋನ್ ತರಲಿದೆ.
ಆ್ಯಪಲ್ ಕಂಪನಿಯ ಪ್ರಸಿದ್ಧ ಐಫೋನ್ಗಳಿಗೆ ಭಾರತ ಸೇರಿದಂತೆ ವಿಶ್ವದಲ್ಲಿ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ಹೊಸ ಹೊಸ ಸರಣಿಯನ್ನು ಬಿಡುಗಡೆ ಮಾಡುವ ಕಂಪನಿ ಇತ್ತೀಚೆಗಷ್ಟೆ ತನ್ನ 16 ಸರಣಿಯನ್ನು ಪರಿಚಯಿಸಿತ್ತು. ಇದೀದ ಈ ಫೋನುಗಳಿಗೆ ಟಕ್ಕರ್ ಕೊಡಲು ಮತ್ತೊಂದು ಕಂಪನಿ ಬಂದಿದೆ. ಅದುವೇ ಗೂಗಲ್ ಪಿಕ್ಸೆಲ್. ಐಫೋನ್ 16 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಗೂಗಲ್ ಪಿಕ್ಸೆಲ್ 9 ಸರಣಿ ಈ ವಿಭಾಗದಲ್ಲಿ ಇದಕ್ಕೆ ಟಕ್ಕರ್ ಕೊಡುತ್ತಿದೆ. ಶೀಘ್ರದಲ್ಲೇ ಗೂಗಲ್ ಈ ಸರಣಿಯ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪಿಕ್ಸೆಲ್ 9 ಪ್ರೊ ಸ್ಮಾರ್ಟ್‌ಫೋನ್ ತರಲಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಪಿಕ್ಸೆಲ್ 9 ಸರಣಿಯನ್ನು ಅನಾವರಣಗೊಳಿಸಲಾಯಿತು. ಆದರೆ ಪಿಕ್ಸೆಲ್ 9 ಪ್ರೊ ಮಾರಾಟವು ಭಾರತದಲ್ಲಿ ಪ್ರಾರಂಭವಾಗಿರಲಿಲ್ಲ. ಇದೀಗ ಆ್ಯಪಲ್ ಐಫೋನ್ 16 ಸರಣಿಯೊಂದಿಗೆ ಸ್ಪರ್ಧಿಸುವ ಪಿಕ್ಸೆಲ್ 9 ಪ್ರೊ ಸ್ಮಾರ್ಟ್‌ಫೋನ್‌ನ ಪ್ರೀ-ಬುಕಿಂಗ್ ಅಕ್ಟೋಬರ್ 17 ರಿಂದ ಪ್ರಾರಂಭವಾಗುತ್ತಿದೆ. ಹೀಗಾಗಿ ಸದ್ಯದಲ್ಲೇ ಈ ಫೋನ್ ಖರೀದಿಗೆ ಸಿಗಲಿದೆ.
ಗೂಗಲ್ ಪಿಕ್ಸೆಲ್ 9 ಪ್ರೊ ಫೀಚರ್ಸ್:
ಗೂಗಲ್ ಪಿಕ್ಸೆಲ್ 9 ಪ್ರೊ ನ ವಿಶೇಷಣಗಳು ಪಿಕ್ಸೆಲ್ 9 ಪ್ರೊ XL ಅನ್ನು ಹೋಲುತ್ತವೆ. ಇದು 6.3 ಇಂಚಿನ ಸೂಪರ್ ಆಕ್ಟುವಾ ಡಿಸ್ಪ್ಲೇ (LTPO) ಯೊಂದಿಗೆ ಬರುತ್ತದೆ. ಇದಲ್ಲದೆ, 1280*2856 ಪಿಕ್ಸೆಲ್ ರೆಸಲ್ಯೂಶನ್ ಮತ್ತು ಕಾರ್ನರಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಲಭ್ಯವಿದೆ. ಇದು 16GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
ಗೂಗಲ್ ಪಿಕ್ಸೆಲ್ 9 ಪ್ರೊ ಚಿಪ್‌ಸೆಟ್ ಮತ್ತು ಕ್ಯಾಮೆರಾ:
ಈ ಫೋನ್ ಗೂಗಲ್ ಟೆನ್ಸರ್ G4 ಚಿಪ್‌ಸೆಟ್‌ನ ಬೆಂಬಲದೊಂದಿಗೆ ಬರುತ್ತದೆ. ಇದು ಟೈಟಾನ್ M2 ಭದ್ರತಾ ಕೊಪ್ರೊಸೆಸರ್ ಅನ್ನು ಸಹ ಹೊಂದಿದೆ. ಛಾಯಾಗ್ರಹಣಕ್ಕಾಗಿ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು 50MP ವೈಡ್, 48MP ಅಲ್ಟ್ರಾ-ವೈಡ್ ಮತ್ತು 48MP 5x ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 42MP ಡ್ಯುಯಲ್ PD ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ, ಇದು ಆಟೋ ಫೋಕಸ್ ವೈಶಿಷ್ಟ್ಯದೊಂದಿಗೆ ಬರುತ್ತದೆ.
ಇದನ್ನೂ ಓದಿ: ನಿಮ್ಮ ಇನ್ಸ್ಟಾಗ್ರಾಮ್ ರೀಲ್ ವೈರಲ್ ಆಗದಿರಲು ಇದೇ ಕಾರಣ: ಸೆಟ್ಟಿಂಗ್ಸ್ನಲ್ಲಿ ಜಸ್ಟ್ ಹೀಗೆ ಮಾಡಿ
ಗೂಗಲ್ ಪಿಕ್ಸೆಲ್ 9 ಪ್ರೊ ಬೆಲೆ:
ಗೂಗಲ್ ಗೂಗಲ್ ಪಿಕ್ಸೆಲ್ 9 ಪ್ರೊ 256GB ಆಂತರಿಕ ಸಂಗ್ರಹಣೆಯ ಬೆಲೆ 1,09,999 ರೂ. ಆಗಿದೆ. ಅಕ್ಟೋಬರ್ 17 ರಂದು ಗೂಗಲ್ ಸ್ಟೋರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇದನ್ನು ಮುಂಗಡ-ಆರ್ಡರ್ ಮಾಡಬಹುದು. ಈ ಫೋನ್ ಮೂರು ಬಣ್ಣ ರೂಪಾಂತರಗಳಲ್ಲಿ ಬರುತ್ತದೆ. ಪಿಕ್ಸೆಲ್ 9 ಸರಣಿಯ ಇತರ ಫೋನ್‌ಗಳಂತೆ ಇದು ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾದಲ್ಲಿಯೂ ಲಭ್ಯವಿರುತ್ತದೆ. ಇದೇ ಆಸುಪಾಸಿನ ಬೆಲೆಯಲ್ಲಿರುವ ಆ್ಯಪಲ್ ಐಫೋನ್ 16 ಪ್ರೊ ಬೆಲೆ 1,19,900 ರೂ. ಗಳಿಂದ ಪ್ರಾರಂಭವಾಗುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ