Tech Tips: ನಿಮ್ಮ ಫೋನ್ ಪಾಸ್​ವರ್ಡ್ ಮರೆತಿರುವಿರಾ?: ಲಾಕ್ ಆಗಿದ್ರೆ ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ಅನ್‌ಲಾಕ್ ಮಾಡಿ

ನಿಮ್ಮ ಫೋನ್ ಲಾಕ್ ಆಗಿದ್ದರೆ ಅದನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್​ಗಳನ್ನು ಅನುಸರಿಸಿ.

Tech Tips: ನಿಮ್ಮ ಫೋನ್ ಪಾಸ್​ವರ್ಡ್ ಮರೆತಿರುವಿರಾ?: ಲಾಕ್ ಆಗಿದ್ರೆ ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ಅನ್‌ಲಾಕ್ ಮಾಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2024 | 12:39 PM

ಸಾಮಾನ್ಯವಾಗಿ ನಾವು ಸ್ನೇಹಿತರು ಅಥವಾ ಕುಟುಂಬದ ಭಯದಿಂದ ನಮ್ಮ ಸ್ಮಾರ್ಟ್​ಫೋನ್​ನಲ್ಲಿ ಪಾಸ್‌ಕೋಡ್ ಅನ್ನು ಬದಲಾಯಿಸುತ್ತಲೇ ಇರುತ್ತೇವೆ. ಹೀಗೆ ಹೊಸ ಪಾಸ್​ಕೋಡ್ ಹಾಕಿದಾಗ ಆರಂಭದಲ್ಲಿ ಆ ಪಾಸ್​ವರ್ಡ್ ನೆನಪು ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ ಪಾಸ್‌ಕೋಡ್ ಅನ್ನು ಮರೆತುಬಿಡುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್​ಗಳನ್ನು ಅನುಸರಿಸಿ.

ಈ ಟ್ರಿಕ್ ನಿಮಗೆ ಸಹಾಯ ಮಾಡುತ್ತದೆ:

ಇದಕ್ಕಾಗಿ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ Dr.Fone ಅಪ್ಲಿಕೇಶನ್ ಅನ್ನು ತೆರೆಯಬೇಕಾಗುತ್ತದೆ. ಅಪ್ಲಿಕೇಶನ್ ಅನ್ನು ತೆರೆದ ನಂತರ, ನಿಮ್ಮದು ಆ್ಯಪಲ್ ಐಫೋನ್ ಆಗಿದ್ದರೆ ಅದನ್ನು ಲ್ಯಾಪ್​ಟಾಪ್​ಗೆ ಸಂಪರ್ಕಿಸಬೇಕು. ಇದರ ನಂತರ ಅಪ್ಲಿಕೇಶನ್‌ಗೆ ಹೋಗಿ ಮತ್ತು ಸ್ಕ್ರೀನ್ ಅನ್‌ಲಾಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ, ಡಿಸ್​ಪ್ಲೇಯ ಮೇಲೆ 3 ಹಂತಗಳನ್ನು ನೀಡಲಾಗುತ್ತದೆ, ಅವುಗಳನ್ನು ಅನುಸರಿಸಿ. ಇದರ ನಂತರ ನಿಮ್ಮ ಐಫೋನ್ ಅನ್ಲಾಕ್ ಆಗುತ್ತದೆ.

ಆದರೆ ಇದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಎಂಬುದನ್ನು ನೆನಪಿನಲ್ಲಿಡಿ. ಇದನ್ನು ಬಳಸುವ ಮೊದಲು, ಅದರ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ಮತ್ತು ಪರಿಶೀಲಿಸಿ, ಹಾಗೆಯೆ ಗೂಗಲ್​ನಲ್ಲಿ ವಿಮರ್ಶೆ-ರೇಟಿಂಗ್ ಅನ್ನು ಎಚ್ಚರಿಕೆಯಿಂದ ಗಮನಿಸಿ.

ಫೈಂಡ್ ಮೈ ಐಫೋನ್ ಫೀಚರ್:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೈಂಡ್ ಮೈ ಐಫೋನ್ ಫೀಚರ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಅದನ್ನು ರಿಮೋಟ್‌ನಲ್ಲಿ ಐಫೋನ್ ಡೇಟಾವನ್ನು ಅಳಿಸಲು ಮತ್ತು ಫೋನ್ ಸಂಪೂರ್ಣ ರಿಸ್ಟೋರ್ ಮಾಡಲು ಬಳಸಬಹುದು. ಈ ಪ್ರಕ್ರಿಯೆಯಿಂದ ನಿಮ್ಮ ಪಾಸ್‌ಕೋಡ್ ಅನ್ನು ಸಹ ತೆಗೆದುಹಾಕಲಾಗುತ್ತದೆ. ಆಗ ಇದರಲ್ಲಿರುವ ಎಲ್ಲ ಡೇಟಾ ಡಿಲೀಟ್ ಆಗುತ್ತದೆ. ನಂತರ ನಿಮ್ಮ ಐಫೋನ್ ಹೊಸದರಂತೆ ಆಗುತ್ತದೆ. ಫೋನ್ ಕದ್ದಿದ್ದರೂ ಸಹ ಈ ವಿಧಾನವು ಉಪಯುಕ್ತವಾಗಿದೆ.

ಇದನ್ನೂ ಓದಿ: ಮನೆಯ ವೈಫೈ ವೇಗ ಕಡಿಮೆಯಾಗಿದೆಯೇ? ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ವೇಗ ಹೆಚ್ಚಿಸಿ

ಕಂಪ್ಯೂಟರ್ ಬಳಸಿ ಪಾಸ್‌ಕೋಡ್ ತೆಗೆಯಿರಿ:

ನೀವು ಮ್ಯಾಕ್ ಅಥವಾ ವಿಂಡೋಸ್ ಕಂಪ್ಯೂಟರ್ ಬಳಸಿ ನಿಮ್ಮ ಐಫೋನ್ ಅನ್ನು ರಿಸ್ಟೋರ್ ಮಾಡಬಹುದು. ಇದಕ್ಕಾಗಿ, iTunes ಗೆ ಹೋಗಿ, ಇಲ್ಲಿ ನಿಮ್ಮ ಐಫೋನ್ ಅನ್ನು ರಿಕವರಿ ಮೋಡ್​ನಲ್ಲಿ ಇರಿಸಿ. ಇದರ ನಂತರ iTunes ನಲ್ಲಿ ರಿಸ್ಟೋರ್ ಆಯ್ಕೆಯನ್ನು ಆರಿಸಿ. ಇದು ಐಫೋನ್ ಅನ್ನು ರಿಸೆಟ್ ಮಾಡುತ್ತದೆ, ಬಳಿಕ ನೀವು ಹೊಸ ಪಾಸ್ಕೋಡ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ.

ಈ ಎಲ್ಲಾ ಪ್ರಕ್ರಿಯೆಯನ್ನು ಮಾಡುವ ಮೊದಲು, ನೀವು ಯಾವಾಗಲೂ ನಿಮ್ಮ ಬ್ಯಾಕಪ್ ಅನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ, ನೀವು ನಿಮ್ಮ ಮೊಬೈಲ್​ನಲ್ಲಿರುವ ಎಲ್ಲ ಡೇಟಾವನ್ನು ಕಳೆದುಕೊಳ್ಳಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ