AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಪ್ಪ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತ ಪುಟಾಣಿ

ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಎಲ್ಲವು ಆಗಿರುತ್ತಾರೆ. ತಂದೆಗೂ ಮಗಳು ಅಂದ್ರೆ ಪ್ರಾಣಕ್ಕಿಂತ ಹೆಚ್ಚು. ತಂದೆಯ ಮುಂದೆ ಪುಟಾಣಿ ನೀಡಿದ ಮುದ್ದಾದ ರಿಯಾಕ್ಷನ್ ಗೆ ನೀವು ಕಳೆದೇ ಹೋಗ್ತೀರಾ. ಅಪ್ಪನ ಬೈಗುಳದ ಮಾತಿಗೆ ಪುಟಾಣಿ ಹೆದರಿ ಕಂಬದ ಹಿಂದೆ ನಿಂತಿರುವ ಕ್ಲಿಪಿಂಗ್ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಅಪ್ಪ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತ ಪುಟಾಣಿ
ವೈರಲ್‌ ವಿಡಿಯೋImage Credit source: Facebook
ಸಾಯಿನಂದಾ
|

Updated on:May 18, 2026 | 11:47 AM

Share

ತಂದೆ ಮಗಳ (father – daughter) ಸಂಬಂಧವೇ ಹಾಗೆ, ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಂದೆಗೂ ಮುದ್ದಿನ ಮಗಳು ಪುಟ್ಟ ರಾಜಕುಮಾರಿಯಾಗಿರುತ್ತಾಳೆ. ಮಗಳಿಗೂ ಯಾವತ್ತೂ ತಂದೆ ಗದರಲ್ಲ. ಆದರೆ ಈ ಪುಟಾಣಿಯ ತಂದೆಯೂ ಕೈಯಲ್ಲಿ ಪೊರಕೆ ಹಿಡಿದುಕೊಂಡು ಬೈಯಲು ಶುರು ಮಾಡಿದ್ದಾನೆ. ಅಪ್ಪನ  ಬೈಗುಳಕ್ಕೆ  ಪುಟ್ಟ ಹುಡುಗಿ ಹೆದರಿ ಹೋಗಿದೆ. ಕಂಬದ ಹಿಂದೆ ಅಡಗಿ ನಿಂತ ಪುಟಾಣಿ ವಿಡಿಯೋ ವೈರಲ್ ಆಗಿದೆ.

Distraction ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಂದೆಯೂ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತುಕೊಂಡ ಪುಟ್ಟ ಹುಡುಗಿ ಕಣ್ಣು ಮಿಟುಕಿಸುತ್ತಾ ನೋಡುತ್ತಿದೆ. ಅಷ್ಟೇ ಅಲ್ಲದೇ ಪುಟಾಣಿಯೂ ಮುಖವನ್ನು ಊದಿಸಿಕೊಂಡು ಮುದ್ದಾಗಿ ರಿಯಾಕ್ಷನ್ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುದ್ದಾದ ಪುಟಾಣಿ, ಹುಡುಕಲು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆ ಮಗಳ ಬಾಂಧವ್ಯವೇ ಚಂದ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 18 May 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More