AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್‌ ಆಯ್ತು ದೃಶ್ಯ

ತಾಯಿ ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿ ಪ್ರಮುಖ ಪಾತ್ರವಹಿಸುತ್ತಾಳೆ. ತನ್ನ ನೋವು ಕಷ್ಟವನ್ನು ಮಕ್ಕಳ ಮುಂದೆ ತೋರಿಸಿಕೊಳ್ಳದೇ ಮಕ್ಕಳಿಗಾಗಿ ತನ್ನ ಜೀವನವನ್ನು ಮೀಸಲಿಡುತ್ತಾಳೆ. ಈ ದೃಶ್ಯ ನೋಡಿದ್ರೆ ಈ ಮಾತು ನಿಜವೆನಿಸುತ್ತದೆ. ತಾಯಿಯೊಬ್ಬಳು ಕೈಗಳಿಲ್ಲದಿದ್ದರೂ ದೈಹಿಕ ಕೊರತೆಯನ್ನು ಮೆಟ್ಟಿ ನಿಂತು ತನ್ನ ಮಗನಿಗೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Apr 02, 2026 | 4:18 PM

Share

ಕಣ್ಣಿಗೆ ಕಾಣುವ ದೇವರು ಎಂದರೆ ತಾಯಿ (mother). ಆಕೆಯ ನಿಷ್ಕಲ್ಮಶ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಆಗದು. ತನ್ನ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ತನ್ನ ನೋವು, ಕಷ್ಟಗಳನ್ನು ಬದಿಗಿರಿಸಿ ಅವರಿಗಾಗಿ ದುಡಿಯುತ್ತಾಳೆ. ಆದರೆ ಇಲ್ಲೊಬ್ಬ ತಾಯಿಯ ದೈಹಿಕ ಕೊರತೆಯೂ ಆಕೆಗೆ ತನ್ನ ಕಂದನ ಮೇಲಿನ ಪ್ರೀತಿ, ಕಾಳಜಿಯನ್ನು ಕಸಿದು ಕೊಂಡಿಲ್ಲ. ಕೈಗಳಿಲ್ಲದಿದ್ದರೂ ಪಕ್ಷಿಯಂತೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಮಗನ ಮೇಲೆ ತಾಯಿ ಪ್ರೀತಿ ತೋರ್ಪಡಿಸಿದ ರೀತಿ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

Whatsinthenews ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್ ನಲ್ಲಿ ತಾಯಿ ಕಾಳಜಿಯನ್ನು ಕಾಣಬಹುದು. ತಾಯಿಯೊಬ್ಬಳು  ಕೈಗಳಿಲ್ಲದಿದ್ದರೂ ಬಾಯಿಂದ ಮಗನಿಗೆ ತುತ್ತು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೇವರಿಗೆ ಯಾವುದನ್ನು ಕೊಡಬೇಕು ಕೊಡಬಾರದೆನ್ನುವುದು ಚೆನ್ನಾಗಿ ಗೊತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿ ಕಾಳಜಿ ಯಾವತ್ತೂ ಬದಲಾಗಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?