AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಯಾವತ್ತಾದ್ರೂ ಒಣ ಕಪ್ಪೆ ಚಟ್ನಿ ಟ್ರೈ ಮಾಡಿದ್ದೀರಾ?

ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆಯ ರೆಸಿಪಿ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅದರಲ್ಲಿ ಕೆಲವು ವಿಚಿತ್ರ ಆಹಾರಗಳನ್ನು ಕಂಡಾಗ ವಾಂತಿ ಬಂದಂತೆ ಆಗುತ್ತೆ. ಇದೀಗ ಇಂತಹದ್ದೇ ವಿಚಿತ್ರ ರೆಸಿಪಿ ವಿಡಿಯೋವೊಂದು ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ಗಂಜಿಯೊಂದಿಗೆ ಸವಿಯಲು ಒಣ ಕಪ್ಪೆಯ ಚಟ್ನಿ ತಯಾರಿಸುವುದನ್ನು ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಯಾವತ್ತಾದ್ರೂ ಒಣ ಕಪ್ಪೆ ಚಟ್ನಿ ಟ್ರೈ ಮಾಡಿದ್ದೀರಾ?
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Oct 03, 2024 | 5:43 PM

Share

ಇಡ್ಲಿ, ದೋಸೆಯೊಂದಿಗೆ ಸವಿಯಲು ತೆಂಗಿನಕಾಯಿ ಚಟ್ನಿ ಬೆಸ್ಟ್‌ ಆದ್ರೆ ಕರಾವಳಿಯ ಶೈಲಿಯ ಒಣ ಮೀನು ಚಟ್ನಿ ಗಂಜಿಯೊಟ್ಟಿಗೆ ಸವಿಯಲು ಸಖತ್‌ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ನೀವು ಕೂಡಾ ಈ ಎರಡೂ ರೆಸಿಪಿಗಳನ್ನು ಟ್ರೈ ಮಾಡಿರ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ಡಿಫರೆಂಟ್‌ ಆಗಿರುವ ಚಟ್ನಿ ರೆಸಿಪಿಯೊಂದನ್ನು ತಯಾರಿಸಿದ್ದು, ಈ ಒಣ ಕಪ್ಪೆಯ ರೆಸಿಪಿಯನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಈ ಒಣ ಕಪ್ಪೆ ಚಟ್ನಿ ಮಣಿಪುರದ ಸಾಂಪ್ರದಾಯಿಕ ಖಾದ್ಯವಂತೆ. ಒಣ ಕಪ್ಪೆ, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಪುದೀನಾವನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಈ ಸಾಂಪ್ರದಾಯಿಕ ಚಟ್ನಿಯನ್ನು ತಯಾರಿಸಲಾಗುತ್ತದೆ. ಒಣ ಮೀನಿನ ಚಟ್ನಿಯಂತೆ, ಈ ಕಪ್ಪೆ ಚಟ್ನಿಯನ್ನೂ ಕೂಡಾ ಅನ್ನದೊಂದಿಗೆ ಸವಿಯುತ್ತಾರೆ ಇಲ್ಲಿನ ಜನ. ಈ ರೆಸಿಪಿ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು telien_thefoodie ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಣ ಕಪ್ಪೆ ಚಟ್ನಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು. ಮೊದಲಿಗೆ ಒಣ ಕಪ್ಪೆಯನ್ನು ಸ್ಪಲ್ಪ ಬಿಸಿ ಮಾಡಿ ನಂತರ ಅದನ್ನು ಕುಟ್ಟಣಿಗೆಯಲ್ಲಿ ಹಾಕಿ ಬಳಿಕ ಅದರ ಜೊತೆ ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ ಎಲ್ಲವನ್ನೂ ಎಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಈ ಚಟ್ನಿಯನ್ನು ತಯಾರಿಸಿದ್ದಾರೆ.

ಇದನ್ನೂ ಓದಿ: ಈ ಯುವತಿಗೆ ಕಿಸ್ ಕೊಡಬೇಕಾದ್ರೆ ಈ ಮೂರು ರೂಲ್ಸ್ ಬ್ರೇಕ್ ಮಾಡೋ ಆಗಿಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾರು ಕೂಡಾ ಇತರರು ತಿನ್ನುವ ಆಹಾರವನ್ನು ದ್ವೇಷಿಸಬೇಕಾಗಿಲ್ಲ, ನೀವು ನಿಮ್ಮ ಇಷ್ಟದ ಆಹಾರವನ್ನು ತಿನ್ನುವಂತೆ ಅವರಿಗೂ ಅವರಿಷ್ಟದ ಆಹಾರವನ್ನು ತಿನ್ನುವ ಹಕ್ಕಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಪ್ಪೆಯನ್ನು ತಿನ್ನುವುದು ಸುರಕ್ಷಿತವೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ; ಶೇಖ್ ಹಸೀನಾ ಮಗ ಎಚ್ಚರಿಕೆ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಅಸಮಾಧಾನಿತ ಹಿರಿಯ ಶಾಸಕನ ಮನವೊಲಿಕೆಗೆ ಅಖಾಡಕ್ಕಿಳಿದ ಹೈಕಮಾಂಡ್
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ