AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹೊಸ ಬೈಕ್‌ಗೆ ಹೂಮಾಲೆ ಹಾಕೋ ಬದ್ಲು ಹೆಂಡ್ತಿ ಕೊರಳಿಗೆ ಹಾಕಿದ ಮುಗ್ಧ ವ್ಯಕ್ತಿ

ಮುಗ್ಧ ವ್ಯಕ್ತಿಗಳು ಏನು ಹೇಳಿದ್ರೂ ಕಣ್ಣು ಮುಚ್ಚಿಕೊಂಡು ನಂಬಿ ಬಿಡ್ತಾರೆ. ಈ ವ್ಯಕ್ತಿಯದ್ದು ಅದೇ ಕಥೆ. ಹೊಸ ವಾಹನಕ್ಕೆ ಹೂವಿನ ಮಾಲೆ ಹಾಕೋದನ್ನು ಬಿಟ್ಟು ಹೆಂಡತಿಯ ಕೊರಳಿಗೆ ಹಾಕಲು ಹೋಗಿದ್ದಾನೆ. ಈ ಮುಗ್ಧ ವ್ಯಕ್ತಿ ಮಾಡಿದ ಕೆಲಸಕ್ಕೆ ಶೋ ರೂಮ್ ನಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಹೊಸ ಬೈಕ್‌ಗೆ ಹೂಮಾಲೆ ಹಾಕೋ ಬದ್ಲು ಹೆಂಡ್ತಿ ಕೊರಳಿಗೆ ಹಾಕಿದ ಮುಗ್ಧ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 28, 2026 | 3:06 PM

Share

ತಿಳಿದೋ, ತಿಳಿಯದೇನೋ ಮಾಡುವ ಕೆಲ ಕೆಲಸಗಳು ಉಳಿದವರು ನಮ್ಮನ್ನು ನೋಡಿ ನಗುವಂತೆ ಮಾಡುತ್ತದೆ. ಇದೀಗ ಇದಕ್ಕೆ ಸಾಕ್ಷಿಯೆಂಬಂತಿದೆ ಈ ದೃಶ್ಯ. ಹೊಸ ಬೈಕ್ ಖರೀದಿ ಮಾಡಲು ಶೋರೂಮ್‌ಗೆ ಹೋದ ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬ (innocent people) ಮಾಡಿದ ಕೆಲಸದಿಂದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಹೊಸ ಬೈಕ್‌ಗೆ ಹೂಮಾಲೆ ಹಾಕುವ ಬದಲು ಪತ್ನಿಗೆ ಕೊರಳಿಗೆ ಹಾಕಲು ಮುಂದಾಗಿದ್ದಾನೆ. ಈ ಘಟನೆಯೂ ಅಲ್ಲಿಂದವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಬೈಕ್‌ಗೆ ಹೂಮಾಲೆ ಹಾಕೋ ಬದಲು ಹೆಂಡ್ತಿ ಕೊರಳಿಗೆ ಹಾಕಿದ ವ್ಯಕ್ತಿ

ಶಿವಾನಿ (Shivani) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವ್ಯಕ್ತಿಯ ಉಡುಗೆಯೇ ಹೇಳುತ್ತೆ ಹಳ್ಳಿಯ ವ್ಯಕ್ತಿಯೆಂದು. ಹೌದು, ಅಪ್ಪಟ ಮುಗ್ಧ ವ್ಯಕ್ತಿ ತನ್ನ ಪತ್ನಿಯೊಂದಿಗೆ ಶೋ ರೂಮ್ ಗೆ ಭೇಟಿ ನೀಡಿ ಹೊಸ ಬೈಕ್ ಖರೀದಿ ಮಾಡಿದ್ದಾನೆ. ಇದೇ ವೇಳೆ ಅಲ್ಲೇ ಇದ್ದವರು ಈ ವ್ಯಕ್ತಿಯ ಕೈಗೆ ಹೂವಿನ ಮಾಲೆಯನ್ನು ಕೊಟ್ಟಿದ್ದಾರೆ. ಬೈಕ್ ಹೂ ಮಾಲೆ ಹಾಕೋ ಬದಲು ಹೆಂಡ್ತಿ ಕೊರಳಿಗೆ ಹೂ ಮಾಲೆ ಹಾಕಿದ್ದಾನೆ. ಇದೇ ವೇಳೆ ಶೋ ರೂಮ್ ನಲ್ಲಿದ್ದವರು ಬೈಕ್ ಹಾಕಿ ಎಂದು ನಗುತ್ತಾ ಹೇಳಿದ್ದಾರೆ. ತನ್ನ ಪತಿಯ ಕೆಲಸ ಪತ್ನಿ ಕೂಡ ಬಿದ್ದು ಬಿದ್ದು ನಕ್ಕಿದ್ದಾಳೆ. ಇತ್ತ ಈ ವ್ಯಕ್ತಿ ಕೂಡ ತನ್ನ ಮುಖಕ್ಕೆ ಕೈ ಹಿಡಿದುಕೊಂಡು ಮುಗ್ಧತೆಯಿಂದ ನಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Shivani ✨ (@lateupdate.in)

ಇದನ್ನೂ ಓದಿ: ಮನೆಗೆ ಬಂತು ಸ್ಮಾರ್ಟ್ ಟಿವಿ; ಡೆಲಿವರಿ ಬಾಯ್ ಕೆಲಸ ಮಾಡಿ ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ

ವ್ಯಕ್ತಿಯ ಮುಗ್ಧತೆಗೆ ಫಿದಾ ಆದ ನೆಟ್ಟಿಗರು

ಈ ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಈ ವ್ಯಕ್ತಿಗೆ ಹೆಂಡ್ತಿ ಮೊದ್ಲು, ಆಮೇಲೆ ಬೈಕ್ ಎನ್ನುವುದು ಚೆನ್ನಾಗಿ ತಿಳಿದಿದೆ ಎಂದಿದ್ದಾರೆ. ಇನ್ನೊಬ್ಬರು, ಶುದ್ಧ ಪ್ರೀತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಂಕಲ್ ತನ್ನ ಆದ್ಯತೆ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು