AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತರೂ, ನಕ್ಕರೂ ಓಡೋಡಿ ಬರುತ್ತೆ ಈ ಶ್ವಾನ.. ಇದರ ಬೆಲೆ ಎಷ್ಟು ಗೊತ್ತಾ?

ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್​ಶ್ವಾನ ಸಾಕಬಹುದು. ಈ ಶ್ವಾನದ ಬೆಲೆ ಕೇಳಿದರೆ ನೀವು ಸ್ವಲ್ಪ ಭಯ ಬೀಳಬಹುದು. ಏಕೆಂದರೆ ಈ ರೋಬಾಟ್​ ನಾಯಿಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ.

ಅತ್ತರೂ, ನಕ್ಕರೂ ಓಡೋಡಿ ಬರುತ್ತೆ ಈ ಶ್ವಾನ.. ಇದರ ಬೆಲೆ ಎಷ್ಟು ಗೊತ್ತಾ?
ರೋಬಾಟ್​ ಶ್ವಾನ
ರಾಜೇಶ್ ದುಗ್ಗುಮನೆ
| Edited By: |

Updated on:Oct 16, 2026 | 10:54 PM

Share

ಮಲಯಾಳಂನಲ್ಲಿ ‘ಆ್ಯಂಡ್ರಾಯ್ಡ್​ ಕುಂಜಪ್ಪನ್​ ವರ್ಷನ್​ 5.25’ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಮನೆಯಲ್ಲಿ ಒಬ್ಬಂಟಿಯಾಗಿರುವ ತಂದೆಗೆ ವಿದೇಶದಲ್ಲಿರುವ ಮಗ ರೋಬಾಟ್​ ಒಂದನ್ನು ತಂದುಕೊಡುತ್ತಾನೆ. ಆ ರೋಬಾಟ್​ ಮನೆಯಲ್ಲಿ ಒಂಟಿಯಾಗಿರುವ ತಂದೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಆತನ ಭಾವನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ/ ಪ್ರತಿಕ್ರಿಯಿಸುತ್ತದೆ. ಈಗ ವಿಜ್ಞಾನಿಗಳು ಇದೇ ಮಾದರಿಯಲ್ಲಿ ರೋಬಾಟ್​ ನಾಯಿಯನ್ನು ಕಂಡು ಹಿಡಿದಿದ್ದಾರೆ. ಈ ಶ್ವಾನ ಮನುಷ್ಯನ ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ!

ಹೌದು, ಕೊಡಾ ಸಂಸ್ಥೆ (Koda) ಹೊಸ ರೋಬಾಟ್​ ಒಂದನ್ನು ಅನ್ವೇಷಣೆ ಮಾಡಿದೆ. ಶ್ವಾನದಂತೆ ಇರುವ ಈ ರೋಬಾಟ್​, ವ್ಯಕ್ತಿಯ ಭಾವನೆಯನ್ನು ಗ್ರಹಿಸುತ್ತದೆ. ಬೇಸರ, ಸಂತೋಷ, ಉತ್ಸುಕತೆ, ಖಿನ್ನತೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೆನ್ಸ್​ ಮಾಡುವ ಈ ಶ್ವಾನ, ಅದಕ್ಕೆ ತಕ್ಕನಾಗಿ ಪ್ರತಿಕ್ರಿಯಿಸುತ್ತದೆ.

ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್​ಶ್ವಾನ ಸಾಕಬಹುದು. ಇನ್ನು, ಮನೆಯನ್ನು ಕಾಯುವ ಕೆಲಸವನ್ನು ಕೂಡ ಈ ರೋಬಾಟ್​ ಮಾಡಲಿದೆ.

ನಾಯಿಗಳಿಗೆ ಶೇಕ್​ ಹ್ಯಾಂಡ್​ ಮಾಡುವುದು ಸೇರಿ ಸಾಕಷ್ಟು ವಿಚಾರಗಳನ್ನು ನೀವು ಕಲಿಸಿಕೊಟ್ಟಿರುತ್ತೀರಿ. ಈ ರೋಬಾಟ್​ ಶ್ವಾನಕ್ಕೂ ನೀವು ಈ ರೀತಿ ವಿಚಾರಗಳನ್ನು ಕಲಿಸಿಕೊಡಬಹುದು. ನೀವು ಕಲಿಸುವ ಹೊಸ ಅಂಶಗಳನ್ನು ಅದು ಸುಲಭವಾಗಿ ಕಲಿತುಕೊಳ್ಳುತ್ತದೆ.

ಈ ರೋಬೋಟ್​ ನಿತ್ಯ ನಿಮ್ಮನ್ನು ಪರಮಾರ್ಶಿಸುತ್ತದೆ. ನಿಮ್ಮಲ್ಲಿ ಆಗುವ ಬದಲಾವಣೆಯ  ಮಾಹಿತಿಯನ್ನು ಅದು ತನ್ನಲ್ಲಿಯೇ ಇಟ್ಟುಕೊಳ್ಳುತ್ತದೆ. ಈ ರೀತಿ ಸಂಗ್ರಹವಾದ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಇದನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ. ಈ ಶ್ವಾನದ ಬೆಲೆ ಕೇಳಿದರೆ ನೀವು ಸ್ವಲ್ಪ ಭಯ ಬೀಳಬಹುದು. ಏಕೆಂದರೆ ಈ ರೋಬಾಟ್​ ನಾಯಿಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ.

Published On - 3:32 pm, Wed, 27 January 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More