AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರು ದಾಳಿ ನಡೆಸಿದ್ದು, ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು BLA ಹೊಸ ಸಾಗರ ಕಾರ್ಯತಂತ್ರದ ಭಾಗವಾಗಿದ್ದು, ಗ್ವಾದರ್ ಬಂದರು ಭದ್ರತೆಗೂ ಅಪಾಯ ಎದುರಾಗಿದೆ. ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭೂಮಿಯ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದ್ದು, ಪ್ರದೇಶದಲ್ಲಿ ಚೀನಾ ಹೂಡಿಕೆಗೆ ನಡುಕ ಹುಟ್ಟಿಸಿದೆ.

ಅರಬ್ಬಿ ಸಮುದ್ರದಲ್ಲಿ ಪಾಕ್ ಕರಾವಳಿ ರಕ್ಷಣಾ ಪಡೆ ಮೇಲೆ ಬಲೂಚ್ ಬಂಡುಕೋರರ ದಾಳಿ, ಮೂರು ಮಂದಿ ಸಾವು
ಸಾಂದರ್ಭಿಕ ಚಿತ್ರImage Credit source: Google Gemini
ನಯನಾ ರಾಜೀವ್
|

Updated on: Apr 13, 2026 | 8:22 AM

Share

ಇಸ್ಲಾಮಾಬಾದ್, ಏಪ್ರಿಲ್ 13: ಬಲೂಚಿಸ್ತಾನ(Balochistan)ದ ನೆಲದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದ ಬಲೂಚ್ ಪ್ರತ್ಯೇಕತಾವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ. ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ (Pakistan Coast Guard) ಗಸ್ತು ದೋಣಿಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ.

ನಡೆದಿದ್ದೇನು? ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ದಂಗೆಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗಳಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

‘ಬಿಎಲ್‌ಎ’  ಹೊಣೆ ಮತ್ತು ಹೊಸ ಕಾರ್ಯತಂತ್ರ ನಿಷೇಧಿತ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಕೇವಲ ಹೊಣೆ ಹೊರುವುದು ಮಾತ್ರವಲ್ಲದೆ, ಪಾಕಿಸ್ತಾನಕ್ಕೆ ಅಪಾಯಕಾರಿ ಎಚ್ಚರಿಕೆಯನ್ನು ನೀಡಿದೆ

ಸಮುದ್ರವೇ ಮುಂದಿನ ರಣರಂಗ

ನಾವು ಇನ್ನು ಮುಂದೆ ಭೂಮಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ ಗಡಿಗಳಲ್ಲೂ ದಾಳಿ ನಡೆಸುವುದು ನಮ್ಮ ಹೊಸ ಮಿಲಿಟರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಎಲ್‌ಎ ಘೋಷಿಸಿದೆ. ಸಮುದ್ರದ ಮಧ್ಯದಲ್ಲಿ ದಾಳಿ ನಡೆಸುವ ಮೂಲಕ ತಾವು ಜಲಮಾರ್ಗದಲ್ಲೂ ಭದ್ರತಾ ಪಡೆಗಳಿಗೆ ಬೆದರಿಕೆ ಒಡ್ಡಬಲ್ಲೆವು ಎಂಬುದನ್ನು ಬಂಡುಕೋರರು ಸಾಬೀತುಪಡಿಸಿದ್ದಾರೆ.

ಮತ್ತಷ್ಟು ಓದಿ: ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ಗ್ವಾದರ್ ಬಂದರಿಗೆ ಎದುರಾದ ಭೀತಿ? ಈ ದಾಳಿಯು ನಡೆದ ಪ್ರದೇಶವು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ನ ಪ್ರಮುಖ ಭಾಗವಾಗಿರುವ ಗ್ವಾದರ್ ಆಳ ಸಮುದ್ರ ಬಂದರು ಇದೇ ಕರಾವಳಿ ಪಟ್ಟಿಯಲ್ಲಿದೆ. ಕೋಸ್ಟ್ ಗಾರ್ಡ್ ಮೇಲಿನ ದಾಳಿಯು ಈ ಬಂದರು ಮತ್ತು ಇಲ್ಲಿ ನಡೆಯುತ್ತಿರುವ ಚೀನಾ ಮೂಲಸೌಕರ್ಯ ಯೋಜನೆಗಳ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾಬೂಲ್ ಕಡೆಗೆ ಇಸ್ಲಾಮಾಬಾದ್ ಬೆರಳು ಪಾಕಿಸ್ತಾನ ಸರ್ಕಾರವು ಈ ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ. ಬಲೂಚ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಮತ್ತು ಈ ದಾಳಿಗಳನ್ನು ಕಾಬೂಲ್‌ನಿಂದಲೇ ಯೋಜಿಸಲಾಗಿದೆ ಎಂದು ಇಸ್ಲಾಮಾಬಾದ್ ನಂಬುತ್ತದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ.

ಭೂಮಿಯ ಮೇಲಿನ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದೆ. ಬಿಎಲ್‌ಎ ನ ಈ ಹೊಸ ರೂಪ ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಹೂಡಿಕೆ ಮಾಡಿರುವ ಚೀನಾಕ್ಕೂ ನಡುಕ ಹುಟ್ಟಿಸಿದೆ. ಅರಬ್ಬಿ ಸಮುದ್ರದ ಭದ್ರತೆ ಈಗ ಜಾಗತಿಕ ಮಟ್ಟದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!