ಲಾಕ್​ಡೌನ್ ರೂಲ್ಸ್​ ಬ್ರೇಕ್ ಮಾಡಿದ ಅಮೀರ್ ಖಾನ್

ಇಂಗ್ಲೆಂಡ್​ನ ಖ್ಯಾತ ವೃತ್ತಿಪರ ಬಾಕ್ಸರ್ ಅಮೀರ್ ಖಾನ್ ಲಾಕ್​ಡೌನ್ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಬೋಲ್ಟನ್​ನಲ್ಲಿ ತನ್ನ ಮಗಳ ಹುಟ್ಟುಹಬ್ಬವನ್ನ ಆಚರಿಸುವ ಸಲುವಾಗಿ, ಸಂಬಂಧಿಕರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾರೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿರೋ ಅಮೀರ್ ಖಾನ್, ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಈ ಹಿಂದೆ ಈದ್ ಹಬ್ಬದ ವೇಳೆಯೂ ಇದೇ ರೀತಿ ಬ್ರೇಕ್ ರೂಲ್ಸ್ ಮಾಡಿದ್ದೂ ಇದೆ. ‘ಲಾಕ್​ಡೌನ್ ಸಾಕು..’ ಅರ್ಜೆಂಟಿನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ, ದೇಶದಲ್ಲಿ 16,201 ಮಂದಿ ಸೋಂಕಿತರಿದ್ದು, 4 ಸಾವಿರಕ್ಕೂ ಅಧಿಕ […]

ಲಾಕ್​ಡೌನ್ ರೂಲ್ಸ್​ ಬ್ರೇಕ್ ಮಾಡಿದ ಅಮೀರ್ ಖಾನ್
Follow us
ಸಾಧು ಶ್ರೀನಾಥ್​
| Updated By:

Updated on:May 31, 2020 | 5:20 PM

ಇಂಗ್ಲೆಂಡ್​ನ ಖ್ಯಾತ ವೃತ್ತಿಪರ ಬಾಕ್ಸರ್ ಅಮೀರ್ ಖಾನ್ ಲಾಕ್​ಡೌನ್ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಬೋಲ್ಟನ್​ನಲ್ಲಿ ತನ್ನ ಮಗಳ ಹುಟ್ಟುಹಬ್ಬವನ್ನ ಆಚರಿಸುವ ಸಲುವಾಗಿ, ಸಂಬಂಧಿಕರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾರೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿರೋ ಅಮೀರ್ ಖಾನ್, ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಈ ಹಿಂದೆ ಈದ್ ಹಬ್ಬದ ವೇಳೆಯೂ ಇದೇ ರೀತಿ ಬ್ರೇಕ್ ರೂಲ್ಸ್ ಮಾಡಿದ್ದೂ ಇದೆ.

‘ಲಾಕ್​ಡೌನ್ ಸಾಕು..’ ಅರ್ಜೆಂಟಿನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ, ದೇಶದಲ್ಲಿ 16,201 ಮಂದಿ ಸೋಂಕಿತರಿದ್ದು, 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ವೈರಸ್ ನಿಗ್ರಹಕ್ಕಾಗಿ ಲಾಕ್​ಡೌನ್ ಹೇರಿದ್ರೆ, ವಿರೋಧಿ ಕಿಚ್ಚು ಕೂಡ ಹೆಚ್ಚಾಗಿದೆ. ಲಾಕ್​ಡೌನ್ ಸಡಿಲಿಗೊಳಿಸುವಂತೆ ಒತ್ತಾಯಿಸಿದ ನೂರಾರು ಜನರು ಬೌನೋಸ್ ಏರ್ಸ್​ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು.

ಬ್ರೆಜಿಲ್​ಗೆ ಆರ್ಥಿಕ ಸಂಕಷ್ಟ: ಬ್ರೆಜಿಲ್ ದೇಶಕ್ಕೆ ಕೊರೊನಾ ಕ್ರೂರಿ ಬೆಂಬಿಡಿದೇ ಕಾಡ್ತಿದೆ. ನಿನ್ನೆವೊಂದೇ ದಿನ 33.274 ಜನರಿಗೆ ಕೊರೊನಾ ಸೋಂಕು ಬಂದಿದ್ದು, ಆಘಾತ ಹೆಚ್ಚಿಸಿದೆ. ದಕ್ಷಿಣ ಅಮೆರಿಕದ ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 4,98,440ಕ್ಕೆ ಏರಿಕೆಯಾಗಿದೆ. ಅಮೆರಿಕದ ನಂತರ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ 2ನೇ ಸ್ಥಾನಕ್ಕೆ ಏರಿಕೆಯಾಗಿದೆ. ಲಾಕ್​ಡೌನ್​ನಿಂದಾಗಿ ಹಲವು ಸಂಸ್ಥೆಗಳು ಬಂದ್ ಆಗಿದ್ದು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ.

ವರ್ಷಾಂತ್ಯಕ್ಕೆ ಕೊರೊನಾಗೆ ವ್ಯಾಕ್ಸಿನ್: ಕೊರೊನಾ ವೈರಸ್​ನ ಜನ್ಮಸ್ಥಾನ ಚೀನಾದಲ್ಲಿ ಸೋಂಕಿಗೆ ಮುಲಾಮು ಕಂಡು ಹಿಡಿಯೋ ಪ್ರಯತ್ನ ನಡೀತಿದೆ. ವ್ಯಾಕ್ಸಿನ್ ಸಂಶೋಧನೆ ಕಾರ್ಯ ಪ್ರಗತಿಯಲ್ಲಿದ್ದು, ವರ್ಷಾಂತ್ಯಕ್ಕೆ ವ್ಯಾಕ್ಸಿನ್ ಪತ್ತೆ ಹಚ್ಚುವುದಾಗಿ ಚೀನಾ ಸರ್ಕಾರ ಹೇಳಿದೆ. ಈಗಾಗಲೇ, 2 ಸಾವಿರ ಜನರಿಂದ ಮಾದರಿ ಸಂಗ್ರಹಿಸಿ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಲಾಗುತ್ತಿದೆ ಅಂತಾ ವುಹಾನ್​ ಬಯೋಲಜಿಕಲ್ ಉತ್ಪದನಾ ಸಂಸ್ಥೆ ಹೇಳಿದೆ.

ಪಾಕ್​ನಲ್ಲಿ ಕೊರೊನಾ ಟೆನ್ಷನ್: ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೂ ಕೊರೊನಾ ವಿಲನ್ ಆಗಿದೆ. ಸೋಂಕಿತರ ಸಂಖ್ಯೆ ಈಗಾಗಲೇ 64 ಸಾವಿರದ ಗಡಿ ದಾಟಿದೆ. ಸೋಂಕಿನಿಂದಾಗಿ ಕಳೆದ 24 ಗಂಟೆಯಲ್ಲಿ 50ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,317ಕ್ಕೆ ಏರಿದೆ. ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಅಂದ್ರೆ, 22,964 ಕೇಸ್ ಪತ್ತೆಯಾದ್ರೆ, ಪಂಜಾಬ್​ನಲ್ಲಿ 8,842 ಸೋಂಕಿತರಿದ್ದು, ಆತಂಕ ಹೆಚ್ಚಿದೆ.

ಆಫ್ರಿಕಾದಲ್ಲಿ ‘ಟೆಸ್ಟಿಂಗ್’ ಸಮಸ್ಯೆ: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ತಾಂಡವ ನೃತ್ಯವನ್ನಾಡ್ತಿದೆ. ಸರ್ಕಾರದ ಪ್ರಕಾರ ಸುಮಾರು 1 ಲಕ್ಷ ಜನರ ಪರೀಕ್ಷೆ ಇನ್ನೂ ಪೆಂಡಿಂಗ್ ಇದೆಯಂತೆ. ಕೊರೊನಾ ಟೆಸ್ಟಿಂಗ್ ಕಿಟ್​ಗಳು ಅಗತ್ಯ ಸಂಖ್ಯೆಯಲ್ಲಿ ಇಲ್ಲದೇ ಇರೋದ್ರಿಂದ ಸೋಂಕು ಪರೀಕ್ಷೆಯೂ ವಿಳಂಬವಾಗ್ತಿದೆ. ಸೀಮಿತ ಚೌಕಟ್ಟಿನಲ್ಲಿ ಇದನ್ನ ಮೆಟ್ಟಿ ನಿಲ್ಲುವುದು ಸರ್ಕಾರಕ್ಕೆ ದೊಡ್ಡ ಸಾಹಸವಾಗಿದೆ.

‘ವೈದ್ಯರು ಹುತಾತ್ಮರಲ್ಲ’ ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ ಜೀವನ ಹಂಗು ತೊರೆದು ಕೆಲಸ ಮಾಡ್ತಿದ್ದಾರೆ. ಆದ್ರೆ, ಇಂಥಾ ಫ್ರಂಟ್ ಲೈನ್ ವರ್ಕರ್ಸ್​ಗೆ ಸರ್ಕಾರ ಪಿಪಿಇ ಕಿಟ್​ಗಳನ್ನ ನೀಡುವಲ್ಲಿ ಹಿಂದೇಟು ಹಾಕ್ತಿದೆ. ವೈದ್ಯರು ಮತ್ತು ನರ್ಸ್​ಗಳು ಪಿಪಿಇ ಕಿಟ್ ಇಲ್ಲದೇ ಕೆಲಸ ಮಾಡ್ತಿದ್ದಾರೆ. ಇದನ್ನ ಖಂಡಿಸಿದ ಭಾರತ ಮೂಲದ ವೈದ್ಯರು, ‘ಡಾಕ್ಟರ್​ಗಳು ಹುತಾತ್ಮರಲ್ಲ’ ಅನ್ನುವ ಸ್ಲೋಗನ್ ಹಿಡಿದು ಮಂಡಿಯೂರಿ ಶಾಂತರೀತಿಯಲ್ಲಿ ಪ್ರತಿಭಟಿಸಿದ್ರು.

Published On - 5:19 pm, Sun, 31 May 20

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ