Freedom Convoy ಪ್ರತಿಭಟನೆಗಳ ನಡುವೆ ಕೆನಡಾದ ಪ್ರಧಾನಿ ಕುಟುಂಬ ರಹಸ್ಯ ಸ್ಥಳಕ್ಕೆ ಸ್ಥಳಾಂತರ: ವರದಿ

Freedom Convoy ಪ್ರತಿಭಟನೆಗಳ ನಡುವೆ ಕೆನಡಾದ ಪ್ರಧಾನಿ ಕುಟುಂಬ ರಹಸ್ಯ ಸ್ಥಳಕ್ಕೆ ಸ್ಥಳಾಂತರ: ವರದಿ
ಕೆನಡಾದಲ್ಲಿ ಪ್ರತಿಭಟನೆ

ಕೊವಿಡ್-19 ಲಸಿಕೆ ಆದೇಶಗಳನ್ನು ವಿರೋಧಿಸಿ ದೊಡ್ಡ ಪ್ರಮಾಣದ ಪ್ರತಿಭಟನೆಯು ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆಯುತ್ತಿದ್ದಂತೆ ಟ್ರಡೊ ಕುಟುಂಬ ಬೇರೆಡೆ ಸ್ಥಳಾಂತರವಾಗಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

TV9kannada Web Team

| Edited By: Rashmi Kallakatta

Jan 30, 2022 | 1:29 PM

ಒಟ್ಟಾವಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಮತ್ತು ಅವರ ಕುಟುಂಬವು ದೇಶದ ರಾಜಧಾನಿಯಲ್ಲಿರುವ ತಮ್ಮ ಮನೆಯನ್ನು ತೊರೆದು ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದೆ ಎಂದು ವರದಿಗಳು ಹೇಳಿವೆ.  ಕೊವಿಡ್-19 ಲಸಿಕೆ (Covid Vaccine) ಆದೇಶಗಳನ್ನು ವಿರೋಧಿಸಿ ದೊಡ್ಡ ಪ್ರಮಾಣದ ಪ್ರತಿಭಟನೆಯು ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆಯುತ್ತಿದ್ದಂತೆ ಟ್ರಡೊ ಕುಟುಂಬ ಬೇರೆಡೆ ಸ್ಥಳಾಂತರವಾಗಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಗಡಿಯಾಚೆಗಿನ ಟ್ರಕ್ ಚಾಲಕರಿಗೆ ಲಸಿಕೆ ಅಗತ್ಯತೆಯ ವಿರುದ್ಧ ‘ಫ್ರೀಡಮ್ ಕಾನ್ವಾಯ್’ (Freedom Convoy)ಎಂದು ಕರೆಯಲ್ಪಡುವ ಪ್ರತಿಭಟನೆಯಾಗಿ ಪ್ರಾರಂಭವಾದದ್ದು ಟ್ರುಡೊ ಸರ್ಕಾರದ ಕೊರೊನಾವೈರಸ್ ನಿಯಮಗಳ ವಿರುದ್ಧ ದೊಡ್ಡ ಪ್ರತಿಭಟನೆಯಾಗಿ ಬೆಳೆದಿದೆ.  ಕೊವಿಡ್-19 ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಲು ಕರೆ ನೀಡಲು ಶನಿವಾರ ರಾಜಧಾನಿಯಲ್ಲಿ ಸಾವಿರಾರು ಟ್ರಕ್ಕರ್‌ಗಳು ಮತ್ತು ಇತರ ಪ್ರತಿಭಟನಾಕಾರರು ಸೇರಿದ್ದರು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.  ಈ ಪೈಕಿ ಕೆಲವು ಮಕ್ಕಳು, ವೃದ್ಧರು ಮತ್ತು ಅಂಗವಿಕಲರು ಇದ್ದರು. ದಿ ಗ್ಲೋಬ್ ಅಂಡ್ ಮೇಲ್ ಪತ್ರಿಕೆಯ ಪ್ರಕಾರ, ಕೆನಡಾದ ಪ್ರಧಾನ ಮಂತ್ರಿ ವಿರುದ್ಧ ಆಕ್ರಮಣಕಾರಿ ಮತ್ತು ಅಶ್ಲೀಲತೆ-ಲೇಪಿತ ಬರಹ-ಚಿಹ್ನೆಗಳ ಪ್ಲೆಕಾರ್ಡ್ ನ್ನು ಕೆಲವರು ಹಿಡಿದಿದ್ದರು. 

ಕೆಲವು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದ ಮೇಲೆ ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು ಕೆನಡಾದ ಉನ್ನತ ಸೈನಿಕ ಜನರಲ್ ವೇಯ್ನ್ ಐರ್ ಮತ್ತು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಇದನ್ನು ಖಂಡಿಸಿದ್ದಾರೆ.

ತೀವ್ರ ಚಳಿಯ ಎಚ್ಚರಿಕೆಯ ಹೊರತಾಗಿಯೂ ನೂರಾರು ಪ್ರತಿಭಟನಾಕಾರರು ಸಂಸತ್ ಆವರಣಕ್ಕೆ ನುಗ್ಗಿದ ನಂತರ ಸಂಭವನೀಯ ಹಿಂಸಾಚಾರದ ಬಗ್ಗೆ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.

“ಪ್ರತಿಭಟನಕಾರರು ಅಜ್ಞಾತ ಸೈನಿಕರ ಸಮಾಧಿಯ ಮೇಲೆ ನೃತ್ಯ ಮಾಡುವುದನ್ನು ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಅಪವಿತ್ರಗೊಳಿಸುವುದನ್ನು ನೋಡಿ ನಾನು ಅಸ್ವಸ್ಥನಾಗಿದ್ದೇನೆ. ಕೆನಡಿಯನ್ನರ ತಲೆಮಾರುಗಳು ಸ್ವಾತಂತ್ರ್ಯ ಸೇರಿದಂತೆ ನಮ್ಮ ಹಕ್ಕುಗಳಿಗಾಗಿ ಹೋರಾಡಿದ್ದಾರೆ ಮತ್ತು ಸತ್ತಿದ್ದಾರೆ, ಆದರೆ ಇದು ಅಲ್ಲ. ಇದರಲ್ಲಿ ಭಾಗಿಯಾಗಿರುವವರು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಜನರಲ್ ವೇಯ್ನ್ ಐರ್ ಟ್ವೀಟ್ ಮಾಡಿದ್ದಾರೆ. ಅನಿತಾ ಆನಂದ್ ಅವರು ಈ ಘಟನೆಯನ್ನು ಖಂಡಿಸಿದ್ದು, “ನಾವು ಇಂದು ನೋಡುತ್ತಿರುವ ನಡವಳಿಕೆಯು ಖಂಡನೀಯವಾಗಿದೆ” ಎಂದು ಹೇಳಿದರು.

“ಅಜ್ಞಾತ ಸೈನಿಕನ ಸಮಾಧಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳು ನಮ್ಮ ದೇಶಕ್ಕೆ ಪವಿತ್ರ ಸ್ಥಳಗಳಾಗಿವೆ. ಕೆನಡಾಕ್ಕಾಗಿ ಹೋರಾಡಿದ ಮತ್ತು ಮಡಿದವರಿಗೆ ಗೌರವದಿಂದ ಅವರನ್ನು ಗಂಭೀರವಾಗಿ ಪರಿಗಣಿಸಲು ನಾನು ಎಲ್ಲಾ ಕೆನಡಿಯನ್ನರನ್ನು ಕೋರುತ್ತೇನೆ” ಎಂದು ಅವರು ಹೇಳಿದರು.

ದಿನದ ಅಂತ್ಯದ ವೇಳೆಗೆ ಸುಮಾರು 10,000 ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಧ್ಯಮ ವರದಿಗಳು ಶನಿವಾರ ಸಂಜೆಯ ವೇಳೆಗೆ ಜನಸಂದಣಿಯ ಗಾತ್ರದ ಅಧಿಕೃತ ಅಂದಾಜನ್ನು ಪಡೆಯಲಿಲ್ಲ.

ಶುಕ್ರವಾರ  ಟ್ರುಡೊ ಅವರು ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು, ಆದರೆ ಅಲ್ಪ ಸಂಖ್ಯಾತ ಗುಂಪು “ಕೆನಡಿಯನ್ನರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.

ಯುಎಸ್ ಗಡಿಯನ್ನು ದಾಟಿ ಬರುವವರಿಗೆ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರತಿಭಟಿಸಲು ನೂರಾರು ಟ್ರಕ್‌ಗಳು ಮತ್ತು ಸಾವಿರಾರು ಜನರು ಶನಿವಾರದಂದು ಸೆಂಟ್ರಲ್ ಒಟ್ಟಾವಾದ ಬೀದಿಗಳಲ್ಲಿ “ಫ್ರೀಡಮ್ ಕಾನ್ವಾಯ್” ನ ಭಾಗವಾಗಿ ನಿರ್ಬಂಧಿಸಿದರು.

ಕೆನಡಾದ ಧ್ವಜವನ್ನು ಹಾರಿಸುತ್ತಾ, “ಸ್ವಾತಂತ್ರ್ಯ ಬೇಕು” ಎನ್ನುವ ಬ್ಯಾನರ್‌ಗಳನ್ನು ಬೀಸುತ್ತಾ ಮತ್ತು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಟ್ರಕ್ಕರ್‌ಗಳನ್ನು ಸಾವಿರಾರು ಇತರ ಪ್ರತಿಭಟನಾಕಾರರು ಸೇರಿಕೊಂಡರು. ಕೊವಿಡ್ -19 ನಿರ್ಬಂಧಗಳಿಂದ ಮಾತ್ರವಲ್ಲದೆ ಸರ್ಕಾರದೊಂದಿಗಿನ ವ್ಯಾಪಕ ಅಸಮಾಧಾನವೂ ಇಲ್ಲಿ ವ್ಯಕ್ತವಾಗಿತ್ತು.

ನೂರಾರು ದೊಡ್ಡ ಟ್ರಕ್‌ಗಳು, ಅವುಗಳ ಇಂಜಿನ್‌ಗಳು ಸದ್ದು ಮಾಡುತ್ತಾ, ತಮ್ಮ ಏರ್ ಹಾರ್ನ್‌ಗಳನ್ನು ತಡೆರಹಿತವಾಗಿ ಸದ್ದು ಮಾಡುತ್ತಿದ್ದಂತೆ ಅಗಾಧವಾದ ಕೂಗು ಮೊಳಗಿತು.  ಸಂಸತ್​​ನ ಹತ್ತಿರ, ಕುಟುಂಬಗಳು ತೀವ್ರವಾದ ಚಳಿಯಲ್ಲೇ ಶಾಂತವಾಗಿ ಮೆರವಣಿಗೆ ನಡೆಸಿದರು, ಆದರೆ ಯುವಕರು ಪ್ರತಿಭಟನೆ ಕೂಗಿದ್ದು ಗುಂಪಿನಲ್ಲಿದ್ದ ಹಿರಿಯರು ಟ್ರಡೊ ಅವರ ಕಚೇರಿಯ ಕಿಟಕಿಗಳ ಕೆಳಗೆ ಪ್ರತಿಭಟಿಸಲು ಪಾತ್ರೆಗಳನ್ನು ಬಡಿದರು.

ಎಲ್ಲವನ್ನೂ ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಈ ಕ್ರಮಗಳು ನ್ಯಾಯಸಮ್ಮತವಲ್ಲ ಎಂದು ಪಾರ್ಲಿಮೆಂಟ್ ಕಟ್ಟಡದ ಹೊರಗೆ ಪ್ರತಿಭಟಿಸುತ್ತಿದ್ದ , 31 ವರ್ಷದ ಉದ್ಯಮಿ ಫಿಲಿಪ್ ಕ್ಯಾಸ್ಟೊಂಗ್ವೆ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಅವರು ತಮ್ಮ ಭಾವನೆಗಳನ್ನು ತಿಳಿಸಲು ಉತ್ತರ ಕ್ವಿಬೆಕ್ ಪ್ರಾಂತ್ಯದಿಂದ ಏಳು ಗಂಟೆಗಳ ಕಾಲ ಪ್ರಯಾಣಿಸಿ ಬಂದಿದ್ದರು “ವ್ಯಾಕ್ಸಿನೇಷನ್ ಅವಶ್ಯಕತೆಗಳು ನಾವು ಎಂದಿಗೂ ಮತ ಚಲಾಯಿಸದ ಹೊಸ ಸಮಾಜದ ಕಡೆಗೆ ನಮ್ಮನ್ನು ಕರೆದೊಯ್ಯುತ್ತಿವೆ” ಎಂದು ಅವರು ಹೇಳಿದರು.

ಪ್ರತಿಭಟನೆಯು ಕಳೆದ ವಾರ ಪಶ್ಚಿಮ ಕೆನಡಾದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಡಜನ್ ಗಟ್ಟಲೆ ಟ್ರಕ್ಕರ್‌ಗಳು ಕೊವಿಡ್-ಸಂಬಂಧಿತ ನಿರ್ಬಂಧಗಳ ವಿರುದ್ಧ ಪ್ರದರ್ಶಿಸಲು ವ್ಯಾಂಕೋವರ್‌ನಿಂದ ಒಟ್ಟಾವಾಗೆ ಟ್ರಕ್ ಓಡಿಸಿ ಸಾಲು ಸಾಲಾಗಿ ಬಂದರು. ವಿಶೇಷವಾಗಿ ಟ್ರಕ್ ಡ್ರೈವರ್‌ಗಳಿಗೆ ವ್ಯಾಕ್ಸಿನೇಷನ್ ಅವಶ್ಯಕತೆ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ.

ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ಜನವರಿ ಮಧ್ಯದಲ್ಲಿ ಲಸಿಕೆ ಅಗತ್ಯವನ್ನು ವಿಧಿಸಿದವು, ಇದು 5,500-ಮೈಲಿ (9,000-ಕಿಲೋಮೀಟರ್) ಗಡಿಯನ್ನು ದಾಟುವ ಚಾಲಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಟ್ರಕ್ ಚಾಲಕರು ಹೇಳಿತ್ತಾರೆ. ಫೆಡರಲ್ ರಾಜಧಾನಿಗೆ ಹೋಗುವ ಮಾರ್ಗದಲ್ಲಿ ಮೂಲ ಕ್ರಾಸ್-ಕಂಟ್ರಿ ಬೆಂಗಾವಲು ಪಡೆ ಇತರರು ಸೇರಿಕೊಂಡಿದ್ದರಿಂದ ಚಳುವಳಿಯು ವೇಗವಾಗಿ ಹಬ್ಬಿತು. ಒಟ್ಟಾವಾದ ಹೃದಯಭಾಗದಲ್ಲಿರುವ ಪಾರ್ಲಿಮೆಂಟ್ ಹಿಲ್ ಅವರ ರ್ಯಾಲಿ ಪಾಯಿಂಟ್ ಆಗಿತ್ತು.

ಇದನ್ನೂ ಓದಿ: K rail ಕೇರಳ ಸರ್ಕಾರದ ಸಿಲ್ವರ್‌ಲೈನ್ ಯೋಜನೆ ವಿರುದ್ಧ ಹೆಚ್ಚಿದ ಪ್ರತಿಭಟನೆ; ಗ್ರಾಮಗಳಲ್ಲಿಯೂ ವಿರೋಧದ ಕೂಗು

Follow us on

Related Stories

Most Read Stories

Click on your DTH Provider to Add TV9 Kannada