AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chabahar Port: ಭಾರತ- ಇರಾನ್ ಚಬಹಾರ್ ಬಂದರು ಒಪ್ಪಂದ; ನಿರ್ಬಂಧದ ಎಚ್ಚರಿಕೆ ನೀಡಿದ ಅಮೆರಿಕಾ

ಭಾರತವು 10 ವರ್ಷಗಳ ಕಾಲ ಇರಾನ್‌ನಲ್ಲಿ ಚಬಹಾರ್ ಬಂದರನ್ನು ನಿರ್ವಹಿಸುವ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳ ನಂತರ ಟೆಹ್ರಾನ್‌ನೊಂದಿಗೆ ವ್ಯಾಪಾರ ವ್ಯವಹಾರಗಳನ್ನು ಪರಿಗಣಿಸುವ ಯಾರೇ ಆದರೂ ನಿರ್ಬಂಧಗಳ ಸಂಭಾವ್ಯ ಅಪಾಯದ ಬಗ್ಗೆಯೂ ತಿಳಿದಿರುವುದು ಉತ್ತಮ ಎಂದು ಯುನೈಟೆಡ್ ಸ್ಟೇಟ್ಸ್ ಎಚ್ಚರಿಸಿದೆ.

Chabahar Port: ಭಾರತ- ಇರಾನ್ ಚಬಹಾರ್ ಬಂದರು ಒಪ್ಪಂದ; ನಿರ್ಬಂಧದ ಎಚ್ಚರಿಕೆ ನೀಡಿದ ಅಮೆರಿಕಾ
ಅಮೆರಿಕಾ ಅಧ್ಯಕ್ಷ ಜೋ ಬಿಡೆನ್
ಸುಷ್ಮಾ ಚಕ್ರೆ
|

Updated on: May 14, 2024 | 7:41 PM

Share

ವಾಷಿಂಗ್ಟನ್: ಇರಾನ್​ನ (Iran) ಆಗ್ನೇಯ ಕರಾವಳಿ ಪ್ರದೇಶದ ಚಬಹಾರ್ ಬಂದರು (Chabahar Port) ನಿರ್ವಹಿಸಲು ಭಾರತವು 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಇರಾನ್‌ನೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮುಂದುವರೆಸಿದರೆ ಆ ದೇಶಕ್ಕೆ ಸಂಭಾವ್ಯ ನಿರ್ಬಂಧಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಎಚ್ಚರಿಕೆ ನೀಡಿದೆ. ಭಾರತವು 2016ರಲ್ಲಿ ಇರಾನ್‌ನ ಗಡಿಗೆ ಸಮೀಪವಿರುವ ಆಯಕಟ್ಟಿನ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಒಪ್ಪಂದವನ್ನು ಮಾಡಿಕೊಂಡಿತ್ತು. ಸೋಮವಾರ, ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಇರಾನ್‌ನೊಂದಿಗೆ ದೀರ್ಘಾವಧಿಯ ಅಂದರೆ 10 ವರ್ಷದ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.

ಭಾರತ ಇದನ್ನು “ಭಾರತ-ಇರಾನ್ ಬಾಂಧವ್ಯದಲ್ಲಿ ಐತಿಹಾಸಿಕ ಕ್ಷಣ” ಎಂದು ಕರೆದಿದೆ. ಆದರೆ, ಕಳೆದ 3 ವರ್ಷಗಳಲ್ಲಿ ಇರಾನ್‌ಗೆ ಸಂಬಂಧಿಸಿದ ಘಟಕಗಳ ಮೇಲೆ 600ಕ್ಕೂ ಹೆಚ್ಚು ನಿರ್ಬಂಧಗಳನ್ನು ವಿಧಿಸಿರುವ ಅಮೆರಿಕಾ (ಯುಎಸ್) ಈ ಬೆಳವಣಿಗೆಯ ಬಗ್ಗೆ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಭಾರತದ ವಶವಾಗುತ್ತಿರುವ ಇರಾನ್​ನ ಚಾಬಹಾರ್ ಪೋರ್ಟ್; ಪಾಕಿಸ್ತಾನ್, ಚೀನಾ ಅಸ್ತ್ರಕ್ಕೆ ಭಾರತದ ಪ್ರತ್ಯಸ್ತ್ರ

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕಾ ದೇಶದ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಈ ಒಪ್ಪಂದದ ಬಗ್ಗೆ ಮಾತನಾಡಿದ್ದು, ಇರಾನ್ ಮೇಲೆ ಯುಎಸ್ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ. ವಾಷಿಂಗ್ಟನ್ ಅವುಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಯಾವುದೇ ಘಟಕ, ಇರಾನ್‌ನೊಂದಿಗೆ ವ್ಯಾಪಾರ ವ್ಯವಹಾರಗಳನ್ನು ಪರಿಗಣಿಸುವವರು ನಿರ್ಬಂಧವನ್ನು ಕೂಡ ಎದುರಿಸಬೇಕಾದೀತು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಭಾರತ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇಲ್ಲಿಯವರೆಗೆ, 2.5 ಮಿಲಿಯನ್ ಟನ್ ಗೋಧಿ ಮತ್ತು 2,000 ಟನ್ ಬೇಳೆಕಾಳುಗಳನ್ನು ಭಾರತದಿಂದ ಚಬಹಾರ್ ಬಂದರಿನ ಮೂಲಕ ಆಫ್ಘಾನಿಸ್ತಾನಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಈ ಒಪ್ಪಂದವು “ಬಂದರಿನಲ್ಲಿ ಮಾಡಬೇಕಾದ ದೊಡ್ಡ ಹೂಡಿಕೆಗಳಿಗೆ ಮಾರ್ಗವನ್ನು ತೆರವುಗೊಳಿಸುತ್ತದೆ” ಎಂದು ಹೇಳಿದ್ದಾರೆ.

ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಭಾರತ ಸರ್ಕಾರವು ತನ್ನ ವಿದೇಶಾಂಗ ನೀತಿ ಗುರಿಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಮುಖ ವೈಮಾನಿಕ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ

ಚಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತ ಮತ್ತು ಇರಾನ್ ಸೋಮವಾರ ಸಹಿ ಮಾಡಿದ 10 ವರ್ಷಗಳ ಒಪ್ಪಂದವು ಅಮೆರಿಕದ ನಿರ್ಬಂಧಗಳ ಅಡಿಯಲ್ಲಿ ಬರಬಹುದು. ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಇದ್ದಂತೆ ಮೊದಲಿನಂತೆ ವಿನಾಯಿತಿ ನೀಡಲಾಗುವುದಿಲ್ಲ. ಏಕೆಂದರೆ ಯುನೈಟೆಡ್ ಸ್ಟೇಟ್ಸ್ ಈ ಒಪ್ಪಂದವನ್ನು “ಹೊಸ ಒಪ್ಪಂದ” ಎಂದು ಪರಿಗಣಿಸುತ್ತಿದೆ ಅನೇಕ ಮೂಲಗಳು ತಿಳಿಸಿವೆ.

ಭಾರತದ ಇಂಡಿಯನ್ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (IPGL) ಮತ್ತು ಇರಾನ್‌ನ ಪೋರ್ಟ್ ಮತ್ತು ಮ್ಯಾರಿಟೈಮ್ ಆರ್ಗನೈಸೇಶನ್ (PMO) ನಡುವೆ ಚಬಹಾರ್ ಬಂದರು ಕಾರ್ಯಾಚರಣೆಯ ದೀರ್ಘಾವಧಿಯ ದ್ವಿಪಕ್ಷೀಯ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ