ಮರ್ಯಾದೆ ಕೊಡಿ; ಅಮೆರಿಕದೊಂದಿಗೆ ಮಾತುಕತೆಗೆ ಷರತ್ತು ವಿಧಿಸಿದ ಚೀನಾ
ಚೀನಾ ಮತ್ತು ಅಮೆರಿಕ ದೇಶಗಳ ನಡುವೆ ವ್ಯಾಪಾರ ಸಮರ ಹೆಚ್ಚುತ್ತಿದೆ. ಇದರ ನಡುವೆ ಅಮೆರಿಕದೊಂದಿಗೆ ಸುಖದ ಬಗ್ಗೆ ಮಾತುಕತೆ ಆರಂಭಿಸಲು ಚೀನಾ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಡೊನಾಲ್ಡ್ ಟ್ರಂಪ್ ನಮಗೆ ಗೌರವ ತೋರಿಸಬೇಕೆಂದು ಬಯಸುತ್ತೇವೆ. ನಮಗೆ ಮರ್ಯಾದೆ ಕೊಡುವುದಿದ್ದರೆ ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದು ಚೀನಾ ಅಮೆರಿಕಕ್ಕೆ ಹೇಳಿದೆ. ಹಾಗೇ, ಅಮೆರಿಕ ವಿನಾಕಾರಣ ಸುಂಕದ ಹೆಸರಿನಲ್ಲಿ "ಬೆದರಿಕೆ ಮತ್ತು ಬ್ಲ್ಯಾಕ್‌ಮೇಲಿಂಗ್ ನಿಲ್ಲಿಸಬೇಕು" ಎಂದು ಚೀನಾ ಹೇಳಿದೆ.

ಬೀಜಿಂಗ್, ಏಪ್ರಿಲ್ 16: ಅಮೆರಿಕ (United States) ಮತ್ತು ಚೀನಾ (China) ನಡುವೆ ಹೆಚ್ಚುತ್ತಿರುವ ವ್ಯಾಪಾರ ಸಮರದ ಮಧ್ಯೆ, ಎರಡೂ ರಾಷ್ಟ್ರಗಳು ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಆದರೆ, ಇದಕ್ಕೂ ಮೊದಲು ಚೀನಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೆಲವು ಷರತ್ತುಗಳನ್ನು ಹಾಕಿದ್ದು, ಟ್ರಂಪ್ ಈ ಕ್ರಮಗಳನ್ನು ಅನುಸರಿಸಬೇಕೆಂದು ಬೀಜಿಂಗ್ ಬಯಸುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಟ್ರಂಪ್ ಆಡಳಿತವು ಅವರ ಸಂಪುಟದ ಸದಸ್ಯರು ಚೀನಾ ಬಗ್ಗೆ ನೀಡುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ನಿಯಂತ್ರಿಸುವ ಮೂಲಕ ಚೀನಾ ದೇಶಕ್ಕೆ ಮರ್ಯಾದೆ ಕೊಡಬೇಕು ಎನ್ನುವುದು ಸೇರಿದಂತೆ ಕೆಲವು ಕಂಡೀಷನ್ಗಳನ್ನು ಚೀನಾ ಹಾಕಿದೆ ಎನ್ನಲಾಗಿದೆ.
ಅಧ್ಯಕ್ಷರ ಬೆಂಬಲವನ್ನು ಹೊಂದಿರುವ, ಟ್ರಂಪ್ ಮತ್ತು ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಭೇಟಿಯಾದಾಗ ಸಹಿ ಹಾಕಬಹುದಾದ ಒಪ್ಪಂದವನ್ನು ಸಿದ್ಧಪಡಿಸಲು ಸಹಾಯ ಮಾಡುವ ಪ್ರಮುಖ ವ್ಯಕ್ತಿಯನ್ನು ಎರಡೂ ದೇಶಗಳ ನಡುವಿನ ಮಾತುಕತೆಗೆ ನೇಮಿಸಬೇಕೆಂದು ಬೀಜಿಂಗ್ ಬಯಸುತ್ತಿದೆ. ಅಮೆರಿಕದ ನಿರ್ಬಂಧಗಳು ಮತ್ತು ತೈವಾನ್‌ಗೆ ಸಂಬಂಧಿಸಿದಂತೆ ಚೀನಾದ ಕಳವಳಗಳನ್ನು ಪರಿಹರಿಸುವ ಇಚ್ಛೆಯೊಂದಿಗೆ ಹೆಚ್ಚು ಸ್ಥಿರವಾದ ಯುಎಸ್ ನಿಲುವು ಚೀನಾ ಮುಂದಿಟ್ಟಿರುವ ಇತರ ಷರತ್ತುಗಳಲ್ಲಿ ಸೇರಿವೆ.
ಇದನ್ನೂ ಓದಿ: ನಿಲ್ಲದ ಹಗ್ಗಜಗ್ಗಾಟ; ಅಮೆರಿಕದ ಆಮದು ಮೇಲಿನ ಸುಂಕವನ್ನು ಶೇ. 84ರಿಂದ ಶೇ. 125ಕ್ಕೆ ಏರಿಸಿದ ಚೀನಾ
ಆಮದು ಮಾಡಿಕೊಂಡ ಸಂಸ್ಕರಿಸಿದ ನಿರ್ಣಾಯಕ ಖನಿಜಗಳು ಮತ್ತು ಅವುಗಳ ಉತ್ಪನ್ನಗಳ ಮೇಲೆ ಅಮೆರಿಕ ಅವಲಂಬಿಸಿರುವುದರಿಂದ ಉಂಟಾಗುವ ರಾಷ್ಟ್ರೀಯ ಭದ್ರತಾ ಅಪಾಯಗಳ ಕುರಿತು ತನಿಖೆಯನ್ನು ಪ್ರಾರಂಭಿಸುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಮಂಗಳವಾರ ಶ್ವೇತಭವನವು ಫ್ಯಾಕ್ಟ್ ಶೀಟ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?
“ಯುಎಸ್ ಸುಂಕ ಯುದ್ಧವನ್ನು ಪ್ರಾರಂಭಿಸಿತು. ಚೀನಾ ನಮ್ಮ ಸರಿಯಾದ ಹಿತಾಸಕ್ತಿಗಳು ಮತ್ತು ಅಂತಾರಾಷ್ಟ್ರೀಯ ನ್ಯಾಯವನ್ನು ರಕ್ಷಿಸಲು ಅಗತ್ಯ ಪ್ರತಿಕ್ರಮಗಳನ್ನು ತೆಗೆದುಕೊಂಡಿತು” ಎಂದು ಚೀನಾ ಹೇಳಿದೆ. “ಯುಎಸ್ ನಿಜವಾಗಿಯೂ ಮಾತುಕತೆಯ ಪರಿಹಾರವನ್ನು ಬಯಸಿದರೆ, ಅದು ವಿನಾಕಾರಣ ಒತ್ತಡವನ್ನು ಹೇರುವುದನ್ನು ನಿಲ್ಲಿಸಬೇಕು, ಚೀನಾವನ್ನು ಬೆದರಿಸುವುದು ಮತ್ತು ಬ್ಲ್ಯಾಕ್‌ಮೇಲ್ ಮಾಡುವುದನ್ನು ನಿಲ್ಲಿಸಬೇಕು. ಸಮಾನತೆ, ಗೌರವ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಂವಾದವನ್ನು ನಡೆಸಬೇಕು” ಎಂದು ಚೀನಾ ಸರ್ಕಾರದ ವಕ್ತಾರರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ