Kabosu: ಡಾಜ್ ಮೇಮ್‌ಗೆ ಸ್ಫೂರ್ತಿಯಾಗಿದ್ದ ಜಪಾನಿನ ನಾಯಿ ಕಬೋಸು ನಿಧನ; ಎಲಾನ್ ಮಸ್ಕ್ಗೂ ಈಕೆ ಫೇವರಿಟ್
ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಅದರಲ್ಲಿ ಪ್ರಾಣಿಪ್ರಿಯರನ್ನು ರಂಜಿಸುತ್ತಿದ್ದ ನಾಯಿಗಳ ಮೇಮ್ಸ್ ಒಂದು ರಾಶಿ ಕಾಣಿಸಿಕೊಳ್ಳುತ್ತಿದ್ದವು. ಅದರಲ್ಲಿ ಡಾಜ್ ಎಂಬ ಮೇಮ್ನ ಮೂಲಕ ಪ್ರಸಿದ್ಧಿ ಪಡೆದಿದ್ದ ಜಪಾನಿನ ಮುದ್ದಾದ ಕಬೋಸು ನಾಯಿಗೆ ಮರುಳಾಗದವರೇ ಇಲ್ಲ. ಇದೀಗ ಈ ಕಬೋಸು ಕೊನೆಯುಸಿರೆಳೆದಿದೆ. ಈ ಸುದ್ದಿಗೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿರುವುದು ವಿಶೇಷ.
ಜಪಾನಿನ ಕಬೋಸು (Kabosu) ಎಂಬ ನಾಯಿಯ ಫೋಟೋ ಮತ್ತು ವಿಡಿಯೋಗಳು ಒಂದು ಪೀಳಿಗೆಯ ವಿಚಿತ್ರವಾದ ಆನ್‌ಲೈನ್ ಜೋಕ್‌ಗಳನ್ನು ಸೃಷ್ಟಿಸಿತು. ಆ ನಾಯಿಯ ಮುಖವನ್ನೇ ಡಾಜ್ಕಾಯಿನ್ (Dogecoin) ಕ್ರಿಪ್ಟೋಕರೆನ್ಸಿಯಲ್ಲಿ ಮುದ್ರಿಸಲಾಗಿತ್ತು. ಈ ಕಬೋಸು ಎಂಬ ನಾಯಿ ಇಂದು ಸಾವನ್ನಪ್ಪಿದೆ ಎಂದು ಅದರ ಮಾಲೀಕರು ಹೇಳಿದ್ದಾರೆ. ಕಬೋಸು ಎಂಬ ಈ ಹೆಣ್ಣು ನಾಯಿಗೆ 19 ವರ್ಷವಾಗಿತ್ತು. ಆಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಳು. ಅವಳು ಒಂದು ಪೀಳಿಗೆಯನ್ನೇ ರಂಜಿಸಿದ್ದಳು.
“ನಾನು ಕಬೋಸುಳನ್ನು ಮುದ್ದಿಸುತ್ತಿದ್ದೆ. ಅವಳು ನಿದ್ರಿಸುತ್ತಿರುವಂತೆ ನನಗೆ ಅನಿಸಿತ್ತು. ಆದರೆ, ಅವಳು ಸದ್ದಿಲ್ಲದೆ ಸತ್ತುಹೋಗಿದ್ದಳು” ಎಂದು ಅಟ್ಸುಕೊ ಸಾಟೊ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಶಿಬಾ ಇನು ನಾಯಿ ಅಭಿಮಾನಿಗಳಿಗೆ ಕಬೋಸು ಎಂದು ಪರಿಚಿತಳಾಗಿದ್ದಳು ಎಂದು ಮಾಲೀಕರು ಹೇಳಿಕೊಂಡಿದ್ದಾರೆ. “ಡಾಜ್” ಮೇಮ್ ಮೂಲಕ ಆಕೆ ಜನಪ್ರಿಯಳಾಗಿದ್ದಳು. ಆಕೆ ವಿಶ್ವದ ಅತ್ಯಂತ ಸಂತೋಷದ ನಾಯಿ ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ಆ ಸಂತೋಷದ ಮಾಲೀಕಳಾಗಿದ್ದೆ ಎಂಬುದು ಹೆಮ್ಮೆಯ ಸಂಗತಿ ಎಂದು ಸಾಟೊ ಬರೆದುಕೊಂಡಿದ್ದಾರೆ.
This is Kabosu. She’s the shiba inu whose face became the internationally recognized Doge meme after a photoshoot went viral in 2010. Kabosu passed peacefully today, May 24, at 18, after a long battle with liver disease and leukemia.
Kabosu (which means Pumpkin in Japanese, so… pic.twitter.com/PrdvTXnGKW
— WeRateDogs (@dog_rates) May 24, 2024
ಇದನ್ನೂ ಓದಿ: ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ್ದ ವ್ಯಕ್ತಿಗೆ ಈಗ ಪಾಂಡ ಆಗುವ ಆಸೆಯಂತೆ!
ಶಿಬಾ ಇನು ಜಾತಿಯ ನಾಯಿಯಾದ ಕಬೋಸು 19 ವರ್ಷ ಬದುಕಿದ್ದಳು. ಇದು ಈ ಜಾತಿಯ ನಾಯಿಯ ಸರಾಸರಿ ಜೀವಿತಾವಧಿಯನ್ನು ಮೀರಿದೆ. ಆಕೆಯ ಜನ್ಮದಿನವನ್ನು ನವೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಮೇ 26ರಂದು ಅವಳಿಗೆ “ವಿದಾಯ ಪಾರ್ಟಿ” ನಡೆಯಲಿದೆ ಎಂದು ಆ ನಾಯಿಯ ಮಾಲೀಕರು ತಿಳಿಸಿದ್ದಾರೆ.
Rest in peace
— Elon Musk (@elonmusk) May 24, 2024
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕಳೆದ ವರ್ಷ ಸಂಕ್ಷಿಪ್ತ ಅವಧಿಗೆ ಎಕ್ಸ್ (ಹಿಂದೆ ಟ್ವಿಟರ್) ಲೋಗೋವನ್ನು ಕಬೋಸು ಚಿತ್ರಕ್ಕೆ ಬದಲಾಯಿಸಿದ್ದರು. ಅದು ಕ್ರಿಪ್ಟೋ ಬೆಲೆ ಗಗನಕ್ಕೇರಲು ಕಾರಣವಾಯಿತು. ಕಬೋಸು ನಿಧನಕ್ಕೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದಾರೆ.
kabosu will live on forever in our hearts ❤️ pic.twitter.com/TKKo5qqtVc
— Shibetoshi Nakamoto (@BillyM2k) May 24, 2024
ಇದನ್ನೂ ಓದಿ: ರೈತರ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿರುವ ‘ಎಕ್ಸ್’ ಖಾತೆಗಳ ಅಮಾನತು ಆದೇಶದ ಬಗ್ಗೆ ಎಲಾನ್ ಮಸ್ಕ್ ಅಸಮಾಧಾನ
2022ರಿಂದ ಕಬೋಸು ಕೋಲಾಂಜಿಯೋಹೆಪಟೈಟಿಸ್ ಮತ್ತು ದೀರ್ಘಕಾಲದ ಲಿಂಫೋಮಾ ಲ್ಯುಕೇಮಿಯಾದಿಂದ ಬಳಲುತ್ತಿತ್ತು. ಕಬೋಸು ಎಂಬ ಹೆಸರಿನ ಈ ಶಿಬಾ ಇನುವಿನ ಫೋಟೋಗಳು 2010ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಡಾಗೆ ಎಂಬ ಹೆಸರಿನಲ್ಲಿ ಇದು ಮೇಮ್ಗಳಿಗೆ ಕಾರಣವಾಗಿತ್ತು. ಇದು 2013ರಲ್ಲಿ Dogecoin ರಚನೆಯ ಹಿಂದೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸಿತು. ಈ ಕ್ರಿಪ್ಟೋಕರೆನ್ಸಿಯ ಲೋಗೋ ಆಗಿ ಕಬೋಸುವಿನ ಚಿತ್ರವನ್ನು ಬಳಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 pm, Fri, 24 May 24