ಆರ್ಥಿಕ ಸುಧಾರಣೆಯೂ ಪಂಚವಾರ್ಷಿಕ ಯೋಜನೆಯಾಗಲಿದೆ!
ಕೊವಿಡ್-19 ಪ್ಯಾಂಡಮಿಕ್ನಿಂದಾಗಿ ಅಧೋಗತಿಗೆ ತಲುಪಿರುವ ವಿಶ್ವದ ಆರ್ಥಿಕ ಸ್ಥಿತಿ ಆದಷ್ಟು ಬೇಗ ಸುಧಾರಿಸಲಿದೆ ಅಂತ ನೀವೇನಾದರೂ ಅಂದಕೊಂಡಿದ್ದರೆ ಅಂಥ ಯೋಚನೆಯನ್ನು ಕೈಬಿಡಿ. ಯಾಕೆಂದರೆ ಖ್ಯಾತ ಆರ್ಥಿಕ ತಜ್ಞರ ಪ್ರಕಾರ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸುಧಾರಿಸಿಕೊಳ್ಳಲು ಕನಿಷ್ಠ 5 ವರ್ಷಗಳಾದರೂ ಬೇಕಂತೆ. ಮ್ಯಾಡ್ರಿಡ್ನ ಸಮ್ಮೇಳನವೊಂದರಲ್ಲಿ ಈ ಕುರಿತು ಮಾತಾಡಿದ ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞೆ ಕಾರ್ಮೆನ್ ರೀನ್ಹಾರ್ಟ್, ಲಾಕ್ಡೌನ್ಗಳನ್ನು ತೆರವುಗೊಳಿಸಿರುವ ಕಾರಣ ಆರ್ಥಿಕ ಚಟುವಟಿಕೆಗಳಲ್ಲಿ ದಿಢೀರನೇ ಲವಲವಿಕೆ ಗೋಚರಿಸುತ್ತಿರಬಹುದು, ಆದರೆ ಸ್ಥಿತಿ ಮೊದಲಿನಂತಾಗಲು ಕನಿಷ್ಠ 5 ವರ್ಷಗಳಾದರೂ ಬೇಕು, […]
ಕೊವಿಡ್-19 ಪ್ಯಾಂಡಮಿಕ್ನಿಂದಾಗಿ ಅಧೋಗತಿಗೆ ತಲುಪಿರುವ ವಿಶ್ವದ ಆರ್ಥಿಕ ಸ್ಥಿತಿ ಆದಷ್ಟು ಬೇಗ ಸುಧಾರಿಸಲಿದೆ ಅಂತ ನೀವೇನಾದರೂ ಅಂದಕೊಂಡಿದ್ದರೆ ಅಂಥ ಯೋಚನೆಯನ್ನು ಕೈಬಿಡಿ. ಯಾಕೆಂದರೆ ಖ್ಯಾತ ಆರ್ಥಿಕ ತಜ್ಞರ ಪ್ರಕಾರ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸುಧಾರಿಸಿಕೊಳ್ಳಲು ಕನಿಷ್ಠ 5 ವರ್ಷಗಳಾದರೂ ಬೇಕಂತೆ.
ಮ್ಯಾಡ್ರಿಡ್ನ ಸಮ್ಮೇಳನವೊಂದರಲ್ಲಿ ಈ ಕುರಿತು ಮಾತಾಡಿದ ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞೆ ಕಾರ್ಮೆನ್ ರೀನ್ಹಾರ್ಟ್, ಲಾಕ್ಡೌನ್ಗಳನ್ನು ತೆರವುಗೊಳಿಸಿರುವ ಕಾರಣ ಆರ್ಥಿಕ ಚಟುವಟಿಕೆಗಳಲ್ಲಿ ದಿಢೀರನೇ ಲವಲವಿಕೆ ಗೋಚರಿಸುತ್ತಿರಬಹುದು, ಆದರೆ ಸ್ಥಿತಿ ಮೊದಲಿನಂತಾಗಲು ಕನಿಷ್ಠ 5 ವರ್ಷಗಳಾದರೂ ಬೇಕು, ಎಂದಿದ್ದಾರೆ.
‘‘ಕೊವಿಡ್-19 ಪ್ಯಾಂಡೆಮಿಕ್ನಿಂದ ಉಂಟಾಗಿರುವ ಆರ್ಥಿಕ ಹಿನ್ನಡೆತ ಕೆಲವು ರಾಷ್ಟ್ರಗಳಲ್ಲಿ ಇತರ ದೇಶಗಳಿಗಿಂತ ಹೆಚ್ಚು ಸಮಯದವರೆಗೆ ಮಂದುವರಿಯಲಿದ್ದು ಒಂದು ಕೆಟ್ಟ ಮತ್ತು ಶೋಚನೀಯ ಸ್ಥಿತಿಯನ್ನು ನಿರ್ಮಾಣ ಮಾಡಲಿದೆ. ಬಡವರು ತೀವ್ರ ಸ್ವರೂಪದ ತೊಂದರೆಗಳಿಗೆ ಸಿಲುಕಲಿದ್ದಾರೆ. ಹಾಗೆಯೇ ಶ್ರೀಮಂತ ರಾಷ್ಟ್ರಗಳಿಗಿಂತ ಬಡ ರಾಷ್ಟ್ರಗಳ ಸ್ಥಿತಿ ದುಸ್ತರ ಮತ್ತು ಚಿಂತಾಜನಕವಾಗಲಿದೆ, ಎಂದು ರೀನಾಹಾರ್ಟ್ ಹೇಳಿದ್ದಾರೆ.
ಕೊವಿಡ್ ಸಂಕಷ್ಟದಿಂದ ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ ಜಾಗತಿಕ ಬಡತನದ ಪ್ರಮಾಣ ಹೆಚ್ಚಾಗಿದೆ ಅಂತಲೂ ಅವರು ಹೇಳಿದರು.