ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳ ಕ್ಷಿಪಣಿ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ
ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ ತೀವ್ರಗೊಂಡಿದೆ. ಈ ದಾಳಿಯಿಂದ ಹಲವು ಸಾವುನೋವುಗಳು ಸಂಭವಿಸಿವೆ, ಭಾರತೀಯ ಪ್ರಜೆಯೂ ಮೃತಪಟ್ಟಿದ್ದಾರೆ. ಅಮೆರಿಕ ಸೇನೆ ಯುದ್ಧಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಸೌದಿ ವಾಯುಸಂಚಾರ ಸ್ಥಗಿತಗೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮನೆಮಾಡಿದೆ. ವಿಮಾನಯಾನ ಮತ್ತು ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

ರಿಯಾದ್, ಅಕ್ಟೋಬರ್ 12: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯ ಸರಣಿ ತೀವ್ರಗೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಶನಿವಾರ ನಡೆದ ಭೀಕರ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸೇರಿದಂತೆ 13 ಜನರು ಮೃತಪಟ್ಟ ಬೆನ್ನಲ್ಲೇ, ಭಾನುವಾರ ಟರ್ಮಿನಲ್ 4ಕ್ಕೆ ಮತ್ತೊಂದು ಸ್ಪೋಟಕ ಅಪ್ಪಳಿಸಿ ಮತ್ತೊಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಭೀಕರ ಸ್ಫೋಟ ಮತ್ತು ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯು ದಾಳಿಯ ತೀವ್ರತೆಯನ್ನು ಬಯಲುಮಾಡಿದೆ ಉಮ್ರಾ ಯಾತ್ರಿಕರು ಹಾಗೂ ಪ್ರಯಾಣಿಕರು ವಿಮಾನ ಹತ್ತಲು ಗೇಟ್ ಬಳಿ ಕಾಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಿತ್ತಳೆ ಬಣ್ಣದ ಬೆಂಕಿಯ ಜ್ವಾಲೆಯೊಂದಿಗೆ ಬೃಹತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಟರ್ಮಿನಲ್‌ನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ರಕ್ತಸಿಕ್ತಗೊಂಡ ಪ್ರಯಾಣಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಕಳೆದ ಐದು ದಿನಗಳಲ್ಲಿ ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದಮ್ಮಾಮ್ ವಿಮಾನ ನಿಲ್ದಾಣಕ್ಕೂ ಟಾರ್ಗೆಟ್: ಕಾರ್ಯಾಚರಣೆ ಸ್ಥಗಿತ ವಿಮಾನ ಸಂಚಾರ ರದ್ದು: ಸತತ ದಾಳಿಗಳ ಹಿನ್ನೆಲೆಯಲ್ಲಿ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ನಾಗರಿಕ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ರಿಯಾದ್ ಮಾತ್ರವಲ್ಲದೆ ಪೂರ್ವ ಪ್ರಾಂತ್ಯದ ದಮ್ಮಾಮ್‌ನಲ್ಲಿರುವ ಕಿಂಗ್ ಫಹ್ದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅರಾಮ್ಕೊ ತೈಲ ಸಂಸ್ಥೆಯ ಘಟಕಗಳನ್ನು ಗುರಿಯಾಗಿಸಿಕೊಂಡು ಹೌತಿಗಳು ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ.
ಮತ್ತಷ್ಟು ಓದಿ: ‘ಮನೆಯೊಳಗೇ ಇರಿ, ವಿಡಿಯೋ ಹಂಚಿಕೊಳ್ಳಬೇಡಿ’; ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆ
ಪ್ರಯಾಣಿಕರಿಗೆ ಎಚ್ಚರಿಕೆ: ಸೌದಿ ವಾಯುಪ್ರದೇಶವನ್ನು ಬಳಸದಂತೆ ಹೌತಿಗಳು ಎಚ್ಚರಿಕೆ ನೀಡಿದ್ದು, ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ ರಾಯಭಾರ ಕಚೇರಿಗಳು ತಮ್ಮ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿವೆ.
ವಿಡಿಯೋ
Dramatic footage of the moment yesterday’s Houthi attack struck King Khalid International Airport in Riyadh, including Umrah pilgrims preparing to board their flights before the strike. https://t.co/KWJ3fQiTpW
— Aditya Raj Kaul (@AdityaRajKaul) October 11, 2026
ಅಮೆರಿಕದ ಎಂಟ್ರಿ ಸಾಧ್ಯತೆ ಮತ್ತು ಯುದ್ಧದ ತೀವ್ರತೆ ಗರಿಕ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡ ಈ ಕೃತ್ಯವನ್ನು ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು “ಪೂರ್ಣ ಪ್ರಮಾಣದ ಯುದ್ಧ ಅಪರಾಧ” ಎಂದು ಕರೆದಿದ್ದು, ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸೌದಿ ಅರೇಬಿಯಾ ಮೇಲಿನ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದು, ಹೌತಿಗಳ ವಿರುದ್ಧದ ಸೇನಾ ಕಾರ್ಯಾಚರಣೆಗೆ ಅಮೆರಿಕ ಸೇನೆಯೂ ಕೈಜೋಡಿಸುವ ಬಗ್ಗೆ ಶೀಘ್ರವೇ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಭಾರತೀಯನ ಸಾವು ದೃಢ: ಶನಿವಾರದ ದಾಳಿಯಲ್ಲಿ ಹೈದರಾಬಾದ್ ಮೂಲದ ಮೊಹಮ್ಮದ್ ಯೂಸುಫ್ (46) ಎಂಬ ಭಾರತೀಯ ಪ್ರಜೆ ಮೃತಪಟ್ಟಿರುವುದನ್ನು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಮೃತರ ಪೈಕಿ ಅಮೆರಿಕ, ಬಾಂಗ್ಲಾದೇಶ, ಜೋರ್ಡಾನ್, ಸಿರಿಯಾ ಹಾಗೂ ಸೌದಿ ಪ್ರಜೆಗಳಿದ್ದಾರೆ.
ತೈಲ ಮಾರುಕಟ್ಟೆ ಮೇಲೆ ಕರಿನೆರಳು: ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಅಸ್ಥಿರತೆಯ ನಡುವೆಯೇ ಸೌದಿಯ ಸಾರಿಗೆ ಹಾಗೂ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಗೆ ಮತ್ತು ಜಾಗತಿಕ ವಿಮಾನಯಾನ ವ್ಯತ್ಯಯಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




