AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಸೋಲಿಗೆ ಯುದ್ಧವೇ ಕಾರಣ ಎಂದ ಜೆಡಿ ವ್ಯಾನ್ಸ್; ಟ್ರಂಪ್ ಟೀಂ ಹೇಳಿಕೆಗೆ ಇರಾನ್ ವ್ಯಂಗ್ಯ

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಭಾರಿ ಹಿನ್ನಡೆಗೆ ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಗಾಲಿಬಾಫ್ ಅಮೆರಿಕದ ಉಪಾಧ್ಯಕ್ಷ ಹಾಗೂ ಟ್ರಂಪ್ ಆಡಳಿತವನ್ನು ವ್ಯಂಗ್ಯ ಮಾಡಿದ್ದಾರೆ. ಅಮೆರಿಕದ ನಾಯಕತ್ವವನ್ನು "ಸೋತ ಜೂಜುಕೋರನ ಮಾನಸಿಕತೆ" ಎಂದು ಕರೆದಿರುವ ಗಾಲಿಬಾಫ್, ಟ್ರಂಪ್ ಸರ್ಕಾರ ಸೋಲಿನ ಮೇಲೂ ತಪ್ಪು ನಿರ್ಧಾರಗಳನ್ನು ಮುಂದುವರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಚುನಾವಣಾ ಸೋಲಿಗೆ ಯುದ್ಧವೇ ಕಾರಣ ಎಂದ ಜೆಡಿ ವ್ಯಾನ್ಸ್; ಟ್ರಂಪ್ ಟೀಂ ಹೇಳಿಕೆಗೆ ಇರಾನ್ ವ್ಯಂಗ್ಯ
ಟ್ರಂಪ್- ಜೆಡಿ ವ್ಯಾನ್ಸ್ Image Credit source: AP
ಸುಷ್ಮಾ ಚಕ್ರೆ
|

Updated on:Nov 05, 2026 | 8:18 PM

Share

ಟೆಹ್ರಾನ್, ನವೆಂಬರ್ 5: ಅಮೆರಿಕದಲ್ಲಿ ನಡೆದ ಅತ್ಯಂತ ಮಹತ್ವದ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಭಾರಿ ಹಿನ್ನಡೆಗೆ ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಟ್ರಂಪ್ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಪೋಸ್ಟ್‌ಗೆ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಗಾಲಿಬಾಫ್, ಟ್ರಂಪ್ ತಂಡದ ನಡೆಯನ್ನು “ಸೋತ ಜೂಜುಕೋರನ ಮನಸ್ಥಿತಿಎಂದು ಕರೆದಿದ್ದಾರೆ.

ನವೆಂಬರ್ 3ರಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಭಾರಿ ಬಹುಮತ ಗಳಿಸಿ ಅಧಿಕಾರಕ್ಕೇರಿದೆ. ಈ ಭಾರಿ ಸೋಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಉಪಾಧ್ಯಕ್ಷ ವ್ಯಾನ್ಸ್, “ನಾವು ಸತ್ಯವನ್ನು ಒಪ್ಪಿಕೊಳ್ಳಬೇಕು. ಇರಾನ್ ವಿರುದ್ಧದ ಯುದ್ಧ ಮತ್ತು ದೇಶದಲ್ಲಿ ತೀವ್ರಗೊಂಡ ಬೆಲೆ ಏರಿಕೆಯೇ ಮತದಾರರು ನಮ್ಮ ಪಕ್ಷದಿಂದ ದೂರವಾಗಲು ಮುಖ್ಯ ಕಾರಣ. ಮುಂದಿನ 6 ವರ್ಷಗಳ ಕಾಲ ಸೆನೆಟ್‌ನಲ್ಲಿ ಅಧಿಕಾರ ಕಳೆದುಕೊಳ್ಳಲು ಈ ಯುದ್ಧ ಕಾರಣವಾಯಿತು. ಈ ಯುದ್ಧ ಅಗತ್ಯವಿತ್ತೇ? ಎಂದು ನಾವು ಆಲೋಚಿಸಬೇಕಿದೆ” ಎಂದು ಹೇಳಿದ್ದಾರೆ.

ಇರಾನ್ ಸ್ಪೀಕರ್ ಗಾಲಿಬಾಫ್ ವ್ಯಂಗ್ಯ:

ಜೆಡಿ ವ್ಯಾನ್ಸ್ ಅವರ ದೀರ್ಘ ಪೋಸ್ಟ್‌ಗೆ ವ್ಯಂಗ್ಯವಾಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಗಾಲಿಬಾಫ್, “ನಿಮ್ಮಲ್ಲಿ ಕಂಡುಬರುತ್ತಿರುವುದು ಸೋತ ಜೂಜುಕೋರನ ಮನಸ್ಥಿತಿ. ಜೂಜಿನ ಮೇಜಿನಿಂದ ಹೊರನಡೆಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಬಾಸ್ ಟ್ರಂಪ್ ಅಮೆರಿಕವನ್ನು ಇಸ್ರೇಲ್-ಪರ ಪ್ರಪಾತಕ್ಕೆ ತಳ್ಳುತ್ತಾ ಯುದ್ಧದ ಮುಂದಿನ ಹಂತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿ ವಿನಾಕಾರಣ ಭಾಷಣ ಮಾಡಿ ಕಾಲಹರಣ ಮಾಡುವ ಬದಲು, ಈ ಮಾತುಗಳನ್ನು ನಿಮ್ಮ ಬಾಸ್‌ಗೆ ಹೋಗಿ ಹೇಳಿ!” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಭಾರತ ಸೇರಿ 4 ದೇಶಗಳ ಹಡಗುಗಳಿಗೆ ಇರಾನ್ ಅನುಮತಿ

ಟ್ರಂಪ್ ಸಮರ್ಥನೆ:

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಯುದ್ಧದಿಂದ ಇಂಧನ ದರ ಏರಿಕೆಯಾಗಿ ಮತದಾರರ ಮೇಲೆ ಪರಿಣಾಮ ಬೀರಿದ್ದು ಹೌದು. ಆದರೆ ಜಗತ್ತಿನ ಪ್ರಮುಖ ಭಯೋತ್ಪಾದಕ ದೇಶವಾಗಿರುವ ಇರಾನ್ ಅಣುವಸ್ತ್ರ ಹೊಂದುವುದನ್ನು ತಡೆಯುವುದು ಈ ಸಣ್ಣ ಚುನಾವಣಾ ಸೋಲಿಗಿಂತ ಚಾರಿತ್ರಿಕವಾಗಿ ಅತ್ಯಂತ ಪ್ರಮುಖವಾಗಿದೆ” ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋಲಲು ಇರಾನ್ ಯುದ್ಧ ಕಾರಣವೇ? ಬಹುತೇಕ ನಿಜ ಎಂದ ಟ್ರಂಪ್

ಯುದ್ಧದ ಭೀಕರ ಪರಿಣಾಮ:

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಮೃತಪಟ್ಟ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದಿತ್ತು. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿ ಗಲ್ಫ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದ್ದರಿಂದ ಜಾಗತಿಕವಾಗಿ ಕಚ್ಚಾ ತೈಲದ ದರ ತೀವ್ರ ಏರಿಕೆಯಾಗಿತ್ತು. ಇದೇ ವೇಳೆ, ಇರಾನ್‌ನ ನೂತನ ಸುಪ್ರೀಂ ನಾಯಕ ಮೊಜ್ತಾಬಾ ಖಮೇನಿ ಪ್ರತಿಕ್ರಿಯಿಸಿ, “ಅಮೆರಿಕನ್ನರು ಯುದ್ಧ ಬೇಡ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಆದರೆ, ಅಮೆರಿಕ ಮತ್ತೆ ನಮ್ಮ ಮೇಲೆ ದಾಳಿ ಮುಂದುವರಿಸಿದರೆ ಯುದ್ಧದ ವ್ಯಾಪ್ತಿ ಇನ್ನಷ್ಟು ಭೀಕರವಾಗಲಿದೆ” ಎಂದು ಎಚ್ಚರಿಸಿದ್ದಾರೆ.

ಜೆಡಿ ವ್ಯಾನ್ಸ್ ಅವರ ಈ ಬಹಿರಂಗ ಹೇಳಿಕೆಗೆ ಅಧ್ಯಕ್ಷ ಟ್ರಂಪ್ ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಬೆಂಬಲ ಸೂಚಿಸಿದ್ದರೆ, ಅಮೆರಿಕದ ಮಾಧ್ಯಮಗಳು ಹಾಗೂ ರಿಪಬ್ಲಿಕನ್ ಬೆಂಬಲಿಗರ ವಲಯದಲ್ಲಿ ಆಡಳಿತದ ಯುದ್ಧ ನೀತಿಗಳ ಕುರಿತು ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:18 pm, Thu, 5 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!