AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಆಸ್ಪತ್ರೆಯ ಒಂದೇ ಫ್ಲೋರ್​ನಲ್ಲಿ ಕೆಲಸ ಮಾಡುವ 6 ನರ್ಸ್​ಗಳಿಗೆ ಬ್ರೈನ್ ಟ್ಯೂಮರ್

ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್​ಗಳಿಗೆ ಬ್ರೈನ್​ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್​ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಕಳೆದ ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು.

ಒಂದೇ ಆಸ್ಪತ್ರೆಯ ಒಂದೇ ಫ್ಲೋರ್​ನಲ್ಲಿ ಕೆಲಸ ಮಾಡುವ 6 ನರ್ಸ್​ಗಳಿಗೆ ಬ್ರೈನ್ ಟ್ಯೂಮರ್
ಆಸ್ಪತ್ರೆ Image Credit source: Gizmodo
ನಯನಾ ರಾಜೀವ್
|

Updated on:Apr 17, 2025 | 3:33 PM

Share

ಮ್ಯಾಸಚೂಸೆಟ್ಸ್​, ಏಪ್ರಿಲ್ 17: ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್​ಗಳಿಗೆ ಬ್ರೈನ್​ ಟ್ಯೂಮರ್(Brain Tumor) ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್​ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿತು ಮತ್ತು ಪ್ರಕರಣಗಳ ಹಿಂದೆ ಯಾವುದೇ ಆ ಫ್ಲೋರ್​ನಲ್ಲಿ ಯಾವುದೇ ರೀತಿಯ ಅಪಾಯವಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿತ್ತು. ಈ ಎಲ್ಲಾ ನರ್ಸ್​ಗಳು ಆಸ್ಪತ್ರೆಯ ಐದನೇ ಮಹಡಿಯ ಹೆರಿಗೆ ವಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ನರ್ಸ್​ಗಳ ಮೆದುಳಿನಲ್ಲಿ ಸಣ್ಣ ಪ್ರಮಾದ ಗಡ್ಡೆಗಳು ಕಾಣಿಸಿಕೊಂಡಿವೆ. ಐದನೇ ಮಹಡಿಯಲ್ಲಿ ವಿವಿಧ ಅವಧಿಗಳಿಗೆ ಕೆಲಸ ಮಾಡಿದ ಆರು ಸಿಬ್ಬಂದಿಯನ್ನು ಒಎಚ್​ಎಸ್(Occupational Health and Safety) ಗುರುತಿಸಿದೆ ಮತ್ತು ಅವರಿಗೆ ಹಾನಿಕರವಲ್ಲದ (ಕ್ಯಾನ್ಸರ್ ಅಲ್ಲದ) ಮೆದುಳಿನ ಗಡ್ಡೆಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ
Image
3 ದಿನ ಸ್ಮಾರ್ಟ್‌ಫೋನ್‌ನಿಂದ ದೂರವಿದ್ದರೆ ನಿಮ್ಮ ಮೆದುಳಿಗೆ ಹೀಗಾಗುತ್ತದೆ!
Image
ಪಾರ್ಶ್ವವಾಯು ತಡೆಗಟ್ಟಲು ವೈದ್ಯರು ನೀಡಿರುವ ಈ ಸಲಹೆಗಳನ್ನು ಅನುಸರಿಸಿ
Image
ಡೋಪಮೈನ್ ಹಾರ್ಮೋನ್ ಮೇಲೆ ಪ್ಲಸೀಬೊ ಪರಿಣಾಮವನ್ನು ಉಂಟು ಮಾಡುವುದಿಲ್ಲ
Image
Brain Tumor: ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಸುಳ್ಳು ವರದಿಗಳನ್ನು ನಂಬುವ ಮುನ್ನ ಸತ್ಯಾಸತ್ಯತೆ ಬಗ್ಗೆ ಅರಿಯುವುದು ಸೂಕ್ತ

ಸಾಮೂಹಿಕ ಗಡ್ಡೆಗಳ ಹಿಂದಿನ ಕಾರಣವೇನಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮ್ಯಾಸಚೂಸೆಟ್ಸ್ ನರ್ಸ್​ಗಳ ​ ಸಂಘ ಈ ವಿಷಯವನ್ನು ಪರಿಶೀಲಿಸುತ್ತಿದೆ.  ಗಡ್ಡೆಗಳ ನಡುವಿನ ಸಾಮಾನ್ಯ ಸಂಬಂಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು OHS ಹೇಳುತ್ತಿದೆ. ಈ ವೈದ್ಯಕೀಯ ಪರಿಸ್ಥಿತಿಗಳು ಕೆಲಸದ ವಾತಾವರಣದಿಂದ ಉಂಟಾಗಿವೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂಬುದು ವರದಿಯಲ್ಲಿ ತಿಳಿದುಬಂದಿದೆ.

ಪರಿಸರದಲ್ಲಿರುವ ಕ್ಯಾನ್ಸರ್ ಕಾರಕ ವಿಷಗಳು ಗಡ್ಡೆಗಳಿಗೆ ಕಾರಣವಾಗಬಹುದು. ಆಸ್ಪತ್ರೆ ಅಧಿಕಾರಿಗಳು ಸಾಮಾನ್ಯ ಕಾರಣವನ್ನು ಕಂಡುಕೊಳ್ಳದಿದ್ದರೂ, ಆಸ್ಪತ್ರೆ ಸಿಬ್ಬಂದಿ ಬೇರೆಯದೇ ರೀತಿ ಯೋಚಿಸುತ್ತಾರೆ. ಈ ಗೆಡ್ಡೆಗಳು ಮಾತ್ರವಲ್ಲದೆ, ಸಿಬ್ಬಂದಿ ಸದಸ್ಯರಲ್ಲಿರುವ ಇತರ ಕಾಯಿಲೆಗಳು ಸಹ ಇನ್ನೂ ರಹಸ್ಯವಾಗಿರುವ ಅಂಶಕ್ಕೆ ಕಾರಣವಾಗಿರಬಹುದು ಎಂದು ಭಾವಿಸಿದ್ದಾರೆ.

ಗಡ್ಡೆಗಳ ಮೂಲ ಕಾರಣವನ್ನು ತಲುಪಲು ಈ ವಿಷಯದ ತನಿಖೆಯನ್ನು ಮುಂದುವರಿಸುವುದಾಗಿ ಮ್ಯಾಸಚೂಸೆಟ್ಸ್ ನರ್ಸ್ ಅಸೋಸಿಯೇಷನ್ ​​ಹೆರಾಲ್ಡ್‌ಗೆ ತಿಳಿಸಿದೆ. ಆಸ್ಪತ್ರೆಯ ತನಿಖೆ ಸಮಗ್ರವಾಗಿಲ್ಲ ಮತ್ತು ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿ ಏನೋ ತಪ್ಪಾಗಿದೆ ಎಂದು ತೋರುತ್ತದೆ ಎಂದು ಅದು ಹೇಳಿದೆ. ಈ ತಿಂಗಳ ಅಂತ್ಯದವರೆಗೆ ತನಿಖೆ ಮುಂದುವರಿಯಲಿದ್ದು, ಅಂದು ಒಕ್ಕೂಟವು ತನ್ನ ಸಂಶೋಧನೆಗಳನ್ನು ಬಹಿರಂಗಪಡಿಸುತ್ತದೆ. ತನಿಖೆ ಇನ್ನೂ ನಡೆಯುತ್ತಿದ್ದು, ಸ್ಪಷ್ಟ ಕಾರಣ ಹೊರಬರಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:03 pm, Thu, 17 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು