AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

XUV700 ಎಸ್​ಯುವಿ ಖರೀದಿ ಮೇಲೆ ಮೊದಲ ಬಾರಿಗೆ ಸಖತ್ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ700 ಎಸ್​ಯುವಿ ಸೇರಿದಂತೆ ವಿವಿಧ ಆವೃತ್ತಿಗಳ ಖರೀದಿಯ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಎಸ್​ಯುವಿ ಖರೀದಿದಾರರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

XUV700 ಎಸ್​ಯುವಿ ಖರೀದಿ ಮೇಲೆ ಮೊದಲ ಬಾರಿಗೆ ಸಖತ್ ಆಫರ್ ಘೋಷಿಸಿದ ಮಹೀಂದ್ರಾ
ಮಹೀಂದ್ರಾ ಎಕ್ಸ್‌ಯುವಿ700
Praveen Sannamani
|

Updated on:Jun 04, 2024 | 8:45 PM

Share

ಮಧ್ಯಮ ಕ್ರಮಾಂಕದ ಎಸ್​ಯುವಿ ಕಾರುಗಳ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮಹೀಂದ್ರಾ (Mahindra) ಕಂಪನಿಯು ತನ್ನ ಜನಪ್ರಿಯ ಎಕ್ಸ್ ಯುವಿ700 (XUV700) ಸೇರಿದಂತೆ ವಿವಿಧ ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರವಿವೆ. ಎಕ್ಸ್ ಯುವಿ700 ಜೊತೆಗೆ ಎಕ್ಸ್‌ಯುವಿ400 ಇವಿ ಮತ್ತು ಸ್ಕಾರ್ಪಿಯೋ-ಎನ್ ಮಾದರಿಗಳ ಮೇಲೂ ಅತ್ಯತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ.

ಎಕ್ಸ್‌ಯುವಿ700

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಕಾರು ಖರೀದಿಯ ಮೇಲೆ ರೂ. 1.50 ಲಕ್ಷದ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 1.30 ಲಕ್ಷದ ತನಕ ಕ್ಯಾಶ್ ಬ್ಯಾಕ್ ಆಫರ್ ಲಭ್ಯವಿರವಿದೆ. ಹೊಸ ಆಫರ್ ಗಳನ್ನು ಕಂಪನಿಯು ಸ್ಟಾಕ್ ಲಭ್ಯವಿರುವ 2023ರ ಎಕ್ಸ್‌ಯುವಿ700 ಮಾದರಿಯ ಮೇಲೆ ಮಾತ್ರ ನೀಡಲಾಗುತ್ತಿದ್ದು, 2024ರ ಮಾದರಿಯ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ. ಹೀಗಾಗಿ ಗ್ರಾಹಕರು ಹೆಚ್ಚಿನ ಆಫರ್ ಬಯಸುವುದಾದರೇ 2023ರ ಸ್ಟಾಕ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ಎಲ್ಲಾ ವೆರಿಯೆಂಟ್ ಗಳ ಮೇಲೂ ಲಭ್ಯವಿರಲಿದೆ.

ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ

ಎಕ್ಸ್‌ಯುವಿ700 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 5 ಸೀಟರ್ 7 ಸೀಟರ್ ಆಸನಗಳ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಎಕ್ಸ್‌ಯುವಿ700 ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಪ್ರಮುಖವಾಗಿ ಹೊಸ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 13.99 ಲಕ್ಷದಿಂದ ರೂ. 26.99 ಲಕ್ಷ ಬೆಲೆ ಹೊಂದಿದೆ.

ಸ್ಕಾರ್ಪಿಯೋ-ಎನ್

ಮಹೀಂದ್ರಾ ಕಂಪನಿಯು ಮತ್ತೊಂದು ಜನಪ್ರಿಯ ಕಾರು ಮಾದರಿಯಾಗಿರುವ ಸ್ಕಾರ್ಪಿಯೋ-ಎನ್ ಖರೀದಿಯ ಮೇಲೆ ರೂ. 1 ಲಕ್ಷ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಸ್ಕಾರ್ಪಿಯೋ-ಎನ್ ಕಾರಿನ ಆಲ್ ವ್ಹೀಲ್ ಡ್ರೈವ್ ಮಾದರಿಗಳ ಮೇಲೆ ರೂ. 1 ಲಕ್ಷ ಕ್ಯಾಶ್ ಡಿಸ್ಕೌಂಟ್ ಮತ್ತು ಫ್ರಂಟ್ ವ್ಹೀಲ್ ಡ್ರೈವ್ ಮಾದರಿಗಳ ಮೇಲೆ ರೂ. 60 ಸಾವಿರದಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.

ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಕಾರ್ಪಿಯೋ-ಎನ್ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಪವರ್ ಫುಲ್ ಎಂಜಿನ್ ಆಯ್ಕೆ ಹೊಂದಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ. ಸ್ಕಾರ್ಪಿಯೋ ಎನ್ ನಲ್ಲಿ 2.0 ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 13.60 ಲಕ್ಷದಿಂದ ರೂ. 24.54 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!

ಎಕ್ಸ್‌ಯುವಿ400 ಎಲೆಕ್ಟ್ರಿಕ್

ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಗಮನಸೆಳೆಯುತ್ತಿರುವ ಎಕ್ಸ್‌ಯುವಿ400 ಇವಿ ಮೇಲೆ ಮಹೀಂದ್ರಾ ಕಂಪನಿಯು ಬರೋಬ್ಬರಿ ರೂ. 4.40 ಲಕ್ಷ ಮೌಲ್ಯದ ಆಫರ್ ನೀಡುತ್ತಿದೆ. ಎಕ್ಸ್ ಶೋರೂಂ ಪ್ರಕಾರ ರೂ. 15.49 ಲಕ್ಷದಿಂದ ರೂ. 17.49 ಲಕ್ಷ ಬೆಲೆ ಹೊಂದಿರುವ ಎಕ್ಸ್‌ಯುವಿ400 ಇವಿ ಕಾರು ಇಸಿ ಮತ್ತು ಇಎಲ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.

Published On - 8:44 pm, Tue, 4 June 24