Tata Punch: ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಟಾಟಾ ಪಂಚ್ ಮೈಕ್ರೊ ಎಸ್ ಯುವಿ ಬಿಡುಗಡೆ

Tata Punch: ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಈ ಬಾರಿ ಹಲವು ಸ್ಟ್ಯಾಂಡರ್ಡ್ ಫೀಚರ್ಸ್ ಗಳ ಜೊತೆಗೆ ಸಿಎನ್ ಜಿ ಮಾದರಿಯ ವೆರಿಯೆಂಟ್ ಗಳನ್ನು ಹೆಚ್ಚಿಸಲಾಗಿದೆ.

Tata Punch: ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಟಾಟಾ ಪಂಚ್ ಮೈಕ್ರೊ ಎಸ್ ಯುವಿ ಬಿಡುಗಡೆ
ಟಾಟಾ ಪಂಚ್ ಮೈಕ್ರೊ ಎಸ್ ಯುವಿ ಬಿಡುಗಡೆ
Follow us
Praveen Sannamani
|

Updated on: Sep 17, 2024 | 4:52 PM

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ನವೀಕೃತ ಪಂಚ್ ಮೈಕ್ರೊ ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಈ ಹಿಂದಿನಂತೆಯೇ ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ಪ್ರಮುಖ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 6.13 ಲಕ್ಷದಿಂದ ರೂ. 10.20 ಲಕ್ಷ ಬೆಲೆ ಹೊಂದಿದೆ.

ಹೊಸ ಪಂಚ್ ಕಾರು ಪ್ರಮುಖ ವೆರಿಯೆಂಟ್ ಗಳೊಂದಿಗೆ 32 ಸಬ್ ವೆರಿಯೆಂಟ್ ಗಳನ್ನು ಸಹ ಹೊಂದಿದ್ದು, ಹೊಸ ವೆರಿಯೆಂಟ್ ಗಳ ಆರಂಭಿಕ ಬೆಲೆಯನ್ನು ಈ ಹಿಂದಿನಂತೆಯೇ ರೂ. 613 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಟಾಪ್ ಎಂಡ್ ವೆರಿಯೆಂಟ್ ಗಳ ಬೆಲೆಯು ರೂ. 20 ಸಾವಿರದಷ್ಟು ದುಬಾರಿಯಾಗಿದ್ದು, ಈ ಬಾರಿ ಸಿಎನ್ ಜಿ ವೆರಿಯೆಂಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಪಂಚ್ ಸಿಎನ್ ಜಿ ಆವೃತ್ತಿಯು ಈ ಬಾರಿ ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಪ್ರಮುಖ ವೆರಿಯೆಂಟ್ ಗಳೊಂದಿಗೆ 9 ಸಬ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 7.23 ಲಕ್ಷದಿಂದ ರೂ. 9.90 ಲಕ್ಷ ಬೆಲೆ ಹೊಂದಿವೆ. ಹೊಸ ಆವೃತ್ತಿಯೊಂದಿಗೆ ಪಂಚ್ ಕಾರಿನಲ್ಲಿ ಈ ಬಾರಿ ಪ್ಯೂರ್ ರಿದಮ್, ಸ್ಟ್ಯಾಂಡರ್ಡ್ ಅಕಂಪ್ಲಿಶೇಡ್, ಅಕಂಪ್ಲಿಶೇಡ್ ಎಸ್ಆರ್ ಮತ್ತು ಕ್ರಿಯೆಟಿವ್ ಫ್ಲ್ಯಾಗ್ ಶಿಫ್ ಸಬ್ ವೆರಿಯೆಂಟ್ ಗಳನ್ನು ಮಾರಾಟದಿಂದ ಕೈಬಿಡಲಾಗಿದ್ದು, ಇವುಗಳ ಬದಲಾಗಿ ಹೊಸ ಪ್ಯೂರ್ ಆಪ್ಷನಲ್, ಅಡ್ವೆಂಚರ್ ಎಸ್, ಅಡ್ವೆಂಚರ್ ಪ್ಲಸ್ ಎಸ್ ಮತ್ತು ಅಕಂಪ್ಲಿಶೇಡ್ ಡ್ಯಾಜಲ್ ಸಬ್ ವೆರಿಯೆಂಟ್ ಗಳನ್ನು ಪರಿಚಯಿಸಲಾಗಿದೆ.

ನವೀಕೃತ ಮಾದರಿಯಲ್ಲಿನ ಹೊಸ ಬದಲಾವಣೆಗಳೇನು?

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಪಂಚ್ ಕಾರಿನ ಮಧ್ಯಮ ಕ್ರಮಾಂಕದಲ್ಲಿರುವ ಅಕಂಪ್ಲಿಶೇಡ್ ಪ್ಲಸ್ ನಂತರದ ಎಲ್ಲಾ ಸಬ್ ವೆರಿಯೆಂಟ್ ಗಳಿಗೂ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಕೆಲವೇ ಕೆಲವು ಬದಲಾವಣೆಗಳನ್ನು ತರಲಾಗಿದೆ. ಆದರೆ ಹೊಸ ಕಾರಿನ ಹೊರ ಮತ್ತು ವಿನ್ಯಾಸ, ವೈಶಿಷ್ಟ್ಯತೆಗಳು ಈ ಪಂಚ್ ಮಾದರಿಯಲ್ಲಿರುವಂತೆಯೇ ಮುಂದುವರೆದಿದ್ದು, ಪ್ಯೂರ್ ಆಪ್ಷನಲ್ ನಲ್ಲಿ ಸೆಂಟರ್ ಲಾಕಿಂಗ್, ಪವರ್ಡ್ ವಿಂಡೋ, ಪವರ್ಡ್ ರಿಯರ್ ವ್ಯೂ ಕ್ಯಾಮೆರಾ, ವ್ಹೀಲ್ ಕ್ಯಾಪ್ ಹೊಂದಿದೆ. ಹಾಗೆಯೇ ಅಡ್ವೆಂಚರ್ ಎಸ್ ನಲ್ಲಿ ಹೆಚ್ಚುವರಿಯಾಗಿ ಸನ್ ರೂಫ್‌, ರಿಯರ್ ಎಸಿ ವೆಂಟ್ಸ್ ನೀಡಲಾಗಿದ್ದು, ಅಕಂಪ್ಲಿಶೇಡ್ ಡ್ಯಾಜಲ್ ಸಬ್ ವೆರಿಯೆಂಟ್ ನಲ್ಲಿ ವೈರ್ ಚಾರ್ಜರ್ ಸೌಲಭ್ಯಗಳಿವೆ.

ಹಾಗೆಯೇ ಪಂಚ್ ಕಾರಿನ ಸಿಎನ್ ಜಿ ಮಾದರಿಯು ಸಹ ಹಲವು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಹೆಚ್ಚುವರಿ ವೆರಿಯೊಂಟ್ ಗಳನ್ನು ಹೊಂದಿದ್ದು, ಹೊಸ ಕಾರು ಮಾದರಿಯು ಗ್ರಾಹಕರ ಬೇಡಿಕೆಯಂತೆ ಐದು ಹೊಸ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ. ಈ ಮೂಲಕ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಎಕ್ಸ್ ಟರ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿಯಾಗಿ ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ಪಂಚ್ ಕಾರಿನಲ್ಲಿ ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳ ಆಯ್ಕೆ ಹೊಂದಿದ್ದು, ಸಿಎನ್ ಜಿ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತವೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ