ಟಾಟಾ ನೆಕ್ಸಾನ್ ಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿ

ಭಾರತದಲ್ಲಿ ಸದ್ಯ ಸಬ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಗಳ ಬೇಡಿಕೆ ಹೆಚ್ಚುತ್ತಿದ್ದು, ಸ್ಕೋಡಾ ಕಂಪನಿಯು ತನ್ನ ಹೊಸ ಯೋಜನೆಯಡಿ ಶೀಘ್ರದಲ್ಲಿಯೇ ಹೊಚ್ಚ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡುತ್ತಿದೆ.

ಟಾಟಾ ನೆಕ್ಸಾನ್ ಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಸ್ಕೋಡಾ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿ
ಸ್ಕೋಡಾ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿ
Follow us
Praveen Sannamani
|

Updated on: Feb 28, 2024 | 10:25 PM

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಇದೀಗ ಸ್ಕೋಡಾ (Skoda) ಕಂಪನಿಯು ಸಹ ಹೊಚ್ಚ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕುಶಾಕ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿಗಿಂತಲೂ ಬಜೆಟ್ ಬೆಲೆಯಲ್ಲಿ ಇದು ಬಿಡುಗಡೆಯಾಗಲಿದ್ದು, ಇದು ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಕಾರುಗಳು ಉತ್ತಮ ಪೈಪೋಟಿ ನೀಡಲಿದೆ.

ಸ್ಕೋಡಾ ಕಂಪನಿಯು ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿಯನ್ನು MQB AO IN ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಾಣ ಮಾಡಿದ್ದು, ಇದೇ ಪ್ಲ್ಯಾಟ್ ಫಾರ್ಮ್ ನಲ್ಲಿಯೇ ಕುಶಾಕ್ ಮತ್ತು ಸ್ಲಾವಿಯಾ ಕೂಡಾ ನಿರ್ಮಾಣವಾಗಿವೆ. ಹೀಗಾಗಿ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿಯು ಕೂಡಾ ಉತ್ತಮ ನಿರ್ಮಾಣ ಗುಣಮಟ್ಟ ಮತ್ತು ಫೀಚರ್ಸ್ ಹೊಂದಿರಲಿದ್ದು, ಇದು ಪ್ರತಿಸ್ಪರ್ಧಿ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?

ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿಯನ್ನು ಕಂಪನಿಯು ಕುಶಾಕ್ ಕಾರಿನಲ್ಲಿರುವಂತೆ ಎಂಜಿನ್ ಆಯ್ಕೆ ಜೊತೆಗೆ ಹಲವಾರು ಫೀಚರ್ಸ್ ನೀಡುವ ಸಾಧ್ಯತೆಗಳಿದ್ದು, ಇದು ಪ್ರೀಮಿಯಂ ಫೀಚರ್ಸ್ ಕಾರುಗಳನ್ನು ಬಜೆಟ್ ಬಜೆಟ್ ಬೆಲೆಯಲ್ಲಿ ಖರೀದಿಸುವ ಗ್ರಾಹಕರಿಗೆ ಸಹಕಾರಿಯಾಗಲಿದೆ. ಜೊತೆಗೆ ಹೊಸ ಕಾರು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಕುಶಾಕ್ ಕಾರಿನಂತೆಯೇ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ನೊಂದಿಗೆ ಗುಣಮಟ್ಟದ ಉತ್ಪಾದನೆ ಹೊಂದಿರಲಿದೆ.

ಮಾಹಿತಿಗಳ ಪ್ರಕಾರ ಹೊಸ ಸಬ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಸ್ಕೋಡಾ ಕಂಪನಿಯು 1.0 ಲೀಟರ್, 3-ಸಿಲಿಂಡರ್ ಪ್ರೇರಿತ ಟರ್ಬೊ ಪೆಟ್ರೋಲ್ ಎಂಜಿನ್‌ ನೀಡುವ ಸಾಧ್ಯತೆಗಳಿದ್ದು, ಇದು ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ. ಈ ಮೂಲಕ ಇದು ಉತ್ತಮ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್ ನಲ್ಲಿ ಗಮನಸೆಳೆಯಲಿದ್ದು, ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮಾರ್ಚ್ ನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರುಗಳಿವು!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 11.89 ಲಕ್ಷದಿಂದ ರೂ. 20.49 ಲಕ್ಷ ಬೆಲೆ ಹೊಂದಿದೆ. ಆದರೆ ಹೊಸ ಕಾರು ಕುಶಾಕ್ ಕಾರಿಗಿಂತಲೂ ಕಡಿಮೆ ಉದ್ದಳತೆ ಮತ್ತು ಕೆಲವು ಪ್ರೀಮಿಯಂ ಫೀಚರ್ಸ್ ಕಡಿತದೊಂದಿಗೆ ಅಭಿವೃದ್ದಿಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ