Yamaha Aerox S: ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಯಮಹಾ ಏರೋಕ್ಸ್ ಎಸ್ ವರ್ಷನ್ ಬಿಡುಗಡೆ
ಯಮಹಾ ಕಂಪನಿ ತನ್ನ ನವೀಕೃತ ಏರೋಕ್ಸ್ ಎಸ್ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಪ್ರೀಮಿಯಂ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಯಮಹಾ ಕಂಪನಿಯು ತನ್ನ ನವೀಕೃತ ಏರೋಕ್ಸ್ ಎಸ್ ವರ್ಷನ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 1,50,600 ಬೆಲೆ ಹೊಂದಿದೆ. ಹೊಸ ಸ್ಕೂಟರ್ ಆವೃತ್ತಿಯಲ್ಲಿ ಈ ಬಾರಿ ಪ್ರಮುಖ ಪ್ರೀಮಿಯಂ ಫೀಚರ್ಸ್ ಅಳವಡಿಸಿರುವ ಯಮಹಾ ಕಂಪನಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಪ್ರೀಮಿಯಂ ಮ್ಯಾಕ್ಸಿ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿರುವ ಯಮಹಾ ಏರೋಕ್ಸ್ ಎಸ್ ಆವೃತ್ತಿಯು ಇದೀಗ ಮತ್ತಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಆವೃತ್ತಿಯಲ್ಲಿ ಕೀ ಲೆಸ್ ಇಗ್ನಿಷನ್ ಜೊತೆಗೆ ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಕೀ ಲೆಸ್ ಇಗ್ನಿಷನ್ ಸೌಲಭ್ಯ ವು ಇಮೊಬಿಲೈಸರ್ ಜೊತೆಗೆ ಕಾರ್ಯನಿರ್ವಹಿಸಲಿದ್ದು, ಕೀ ಸಾಮೀಪ್ಯದಲ್ಲಿ ಇಲ್ಲದಿರುವಾಗ ಎಂಜಿನ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಸ್ಕೂಟರ್ ಕಳ್ಳತನದಿಂದ ರಕ್ಷಣೆ ಮಾಡಸಿದೆಯ
ಈ ಮೂಲಕ ಹೊಸ ಬದಲಾವಣೆಯೊಂದಿಗೆ ಏರೋಕ್ಸ್ ಎಸ್ ಮಾದರಿಯು ಸ್ಟ್ಯಾಂಡರ್ಡ್ ಆವೃತ್ತಿಗಿಂತಲೂ ರೂ. 3 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಹೊಸ ಆವೃತ್ತಿಯನ್ನು ಗ್ರಾಹಕರು ರೇಸಿಂಗ್ ಬ್ಲ್ಯೂ ಮತ್ತು ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಹೊಸ ಸ್ಕೂಟರ್ ನಲ್ಲಿ ಇ20 ಇಂಧನ ಮಾನದಂಡಗಳನ್ನು ಹೊಂದಿರುವ ಹೊಸ ಎಂಜಿನ್ ಆಯ್ಕೆ ನೀಡಲಾಗಿದ್ದು, ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.
ಹೊಸ ಏರೋಕ್ಸ್ ಸ್ಕೂಟರ್ ನಲ್ಲಿ ಈ ಹಿಂದಿನ ಮಾದರಿಯಲ್ಲಿರುವಂತೆಯೇ 155 ಸಿಸಿ ಬ್ಲ್ಯೂ ಕೋರ್ ಎಂಜಿನ್ ಅಳವಡಿಸಲಾಗಿದ್ದು, ಇದು ವಿವಿಎ ತಂತ್ರಜ್ಞಾನದೊಂದಿಗೆ 15 ಹಾರ್ಸ್ ಪವರ್ ಮತ್ತು 13.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಪ್ರತಿ ಲೀಟರ್ ಗೆ 51 ರಿಂದ 57 ಕಿ.ಮೀ ಮೈಲೇಜ್ ಹಿಂದಿಸಲಿದ್ದು, ಹೊಸ ಸ್ಕೂಟರ್ 5.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೊಂದಿಗೆ 126 ಕೆ.ಜಿ ತೂಕ ಹೊಂದಿದೆ.
ಇದರೊಂದಿಗೆ ಹೊಸ ಸ್ಕೂಟರ್ ಹಲವಾರು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಇದು ವಿನೂತನ ಫೀಚರ್ಸ್ ಗಳೊಂದಿಗೆ ಅರಾಮದಾಯಕ ಸವಾರಿಯನ್ನು ಖಾತ್ರಿಪಡಿಸುತ್ತದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿ 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.