ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ; 7.5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ
Auto Sector: ಆಟೋಮೊಬೈಲ್ ವಿಭಾಗಕ್ಕೆ ಘೋಷಿಸಲಾಗಿರುವ ಈ ಪಿಎಲ್ಐ ಯೋಜನೆಯು, 2021- 22ನೇ ಸಾಲಿನಲ್ಲಿ ಘೋಷಿಸಲಾಗಿರುವ ಒಟ್ಟಾರೆ ಬಜೆಟ್ನ ಉತ್ಪಾದನಾ ಪ್ರೋತ್ಸಾಹ ಧನದ ಒಂದು ಭಾಗವಾಗಿದೆ.
ದೆಹಲಿ: ಆಟೋಮೊಬೈಲ್ ಕ್ಷೇತ್ರಕ್ಕೆ ಭಾರತ ಸರ್ಕಾರ ಸುಮಾರು 26,000 ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (ಪಿಎಲ್ಐ) ಘೋಷಿಸಿದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಸುಮಾರು 7.5 ಲಕ್ಷ ಉದ್ಯೋಗಗಳು ಆಟೋ ಸೆಕ್ಟರ್ನಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಕಳೆದ ಬಾರಿ, ಸರ್ಕಾರ ಆಟೋಮೊಬೈಲ್ ಹಾಗೂ ಆಟೋ ಕಾಂಪೊನೆಂಟ್ಸ್ ವಲಯದಲ್ಲಿ 57,043 ಕೋಟಿಯ ಯೋಜನೆಯನ್ನು ಐದು ವರ್ಷಗಳ ಅವಧಿಗೆ ಘೋಷಣೆ ಮಾಡಿತ್ತು. ಈ ಬಾರಿ 25,938 ಕೋಟಿ ರೂಪಾಯಿಗೆ ಯೋಜನೆ ಘೋಷಿಸಲಾಗಿದೆ. ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಚಾಲಿತ ವಾಹನಗಳ ಮೇಲೆ ಕೇಂದ್ರಿಸಿ ಈ ಯೋಜನೆ ಹಾಕಲಾಗಿದೆ.
ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ವ್ಯವಸ್ಥೆ, ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಅಸೆಂಬ್ಲಿ, ಸೆನ್ಸಾರ್ಗಳು, ಸನ್ರೂಫ್ಗಳು, ಸೂಪರ್ ಕೆಪಾಸಿಟರ್ಸ್, ಅಡಾಪ್ಟೀವ್ ಫ್ರಂಟ್ ಲೈಟಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಟೊಮ್ಯಾಟಿಕ್ ಬ್ರೇಕಿಂಗ್, ಟೈರ್ ಪ್ರೆಶ್ಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಕೊಲಿಶನ್ ವಾರ್ನಿಂಗ್ ಸಿಸ್ಟಮ್ ಇಷ್ಟು ಉಪಕರಣಗಳು ಪಿಎಲ್ಐ ಯೋಜನೆಯಡಿ ಒಳಗೊಳ್ಳಲಿದೆ.
ಆಟೋಮೊಬೈಲ್ ವಿಭಾಗಕ್ಕೆ ಘೋಷಿಸಲಾಗಿರುವ ಈ ಪಿಎಲ್ಐ ಯೋಜನೆಯು, 2021- 22ನೇ ಸಾಲಿನಲ್ಲಿ ಘೋಷಿಸಲಾಗಿರುವ ಒಟ್ಟಾರೆ ಬಜೆಟ್ನ ಉತ್ಪಾದನಾ ಪ್ರೋತ್ಸಾಹ ಧನದ ಒಂದು ಭಾಗವಾಗಿದೆ. ಬಜೆಟ್ನಲ್ಲಿ 13 ವಿಭಾಗಗಳಿಗೆ ಒಟ್ಟು 1.97 ಲಕ್ಷ ಕೋಟಿ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ.
ಪಿಎಲ್ಐ ಯೋಜನೆಯಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ 42,500 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆಯಿದೆ. ಡ್ರೋನ್ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಣೆಯ ಗುರಿಯಿದೆ. ಡ್ರೋನ್ ಉತ್ಪಾದನೆಗೆ ಉತ್ಪಾದನೆ ಆಧರಿತ ಪೋತ್ಸಾಹಧನ ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಳಿಸಲಾಗಿದೆ.
ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್ ಹೊಸ ಸಿಮ್ ಕಾರ್ಡ್ ಪಡೆಯಲು ಯಾವುದೇ ಫಾರಂ ಭರ್ತಿ ಮಾಡುವ ಅಗತ್ಯವಿಲ್ಲ. ಹೊಸ ಸಿಮ್ ಕಾರ್ಡ್ ಕೊಳ್ಳುವ ಪ್ರಕ್ರಿಯೆ ಇನ್ನುಮುಂದೆ ಸಂಪೂರ್ಣ ಡಿಜಿಟಲೈಸ್ ಆಗಿರುತ್ತದೆ ಎಂದು (ಸೆಪ್ಟೆಂಬರ್ 15) ನಡೆದ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರದ ಟೆಲಿಕಾಂ ಖಾತೆ ಸಚಿವ ಅಶ್ವಿನ್ ವೈಷ್ಣವ್ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಮೊಬೈಲ್ ಸಿಮ್ ಕಾರ್ಡ್ ದಾಖಲೆಗಳು, ಕೆವೈಸಿ ಎಲ್ಲವೂ ಡಿಜಿಟಲೈಜ್ ಆಗಿರಲಿದೆ. ಮೊಬೈಲ್ ನಂಬರ್ ಕೆವೈಸಿ ಪ್ರಕ್ರಿಯೆ ಸರಳೀಕರಣ ಮಾಡಲಿದ್ದೇವೆ. ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಬದಲಾದಾಗ ಕೆವೈಸಿ ಹೆಚ್ಚುವರಿ ದಾಖಲೆ ಬೇಕಿಲ್ಲ. 4G, 5G ಟೆಕ್ನಾಲಜಿಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟೆಲಿಕಾಂ ಕಂಪನಿಗಳಿಗೆ 4 ವರ್ಷ ಮೋರಾಟೋರಿಯಂ ಘೋಷಣೆ: ವೊಡಾಫೋನ್ ಐಡಿಯಾಗೆ ತುಸು ನೆಮ್ಮದಿ
ಇದನ್ನೂ ಓದಿ: ಹೊಸ ಸಿಮ್ ಖರೀದಿ ಸಂಪೂರ್ಣ ಡಿಜಿಟಲೈಸ್, ಫಾರಂ ಭರ್ತಿ ಬೇಕಿಲ್ಲ: ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಘೋಷಣೆ
Published On - 5:26 pm, Wed, 15 September 21