AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕತೆ ಬೆಳವಣಿಗೆಗೆ ಧಕ್ಕೆಯಾಗದಂತೆ ಸಾಲವನ್ನು ಕಡಿಮೆ ಮಾಡಬೇಕು: ನಿರ್ಮಲಾ ಸೀತಾರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂದರ್ಶನವೊಂದರಲ್ಲಿ ಭಾರತದ ಮೇಲಿರುವ ಸಾಲವನ್ನು ಕಡಿಮೆ ಮಾಡುವ ಬಗ್ಗೆ ಹಾಗೂ ಆರ್ಥಿಕತೆ ಬೆಳವಣಿಗೆಗೆ ಧಕ್ಕೆಯಾಗದಂತೆ ಸಾಲ ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.

ಆರ್ಥಿಕತೆ ಬೆಳವಣಿಗೆಗೆ ಧಕ್ಕೆಯಾಗದಂತೆ ಸಾಲವನ್ನು ಕಡಿಮೆ ಮಾಡಬೇಕು: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ಅಕ್ಷಯ್​ ಪಲ್ಲಮಜಲು​​
|

Updated on: Jul 27, 2024 | 12:12 PM

Share

ಕೇಂದ್ರ ಬಜೆಟ್​​​ ಮಂಡನೆ ಮಾಡಿ, ಎಲ್ಲವನ್ನು ತೂಗಿ ಅಳೆದು ಎಲ್ಲ ಕ್ಷೇತ್ರಗಳಿಗೆ ಯೋಜನೆ ಹಾಗೂ ಅನುದಾನವನ್ನು ನೀಡಿದ್ದಾರೆ. ಬಜೆಟ್​​ ಮಂಡನೆ ಮಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ಕೇಂದ್ರದ ಸಾಲದ ಬಗ್ಗೆ ಮಾತನಾಡಿದ್ದಾರೆ. ಸತತ 7ನೇ ಬಾರಿ ಬಜೆಟ್​​​ ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ವಿತ್ತ ಸಚಿವೆ ಸೀತಾರಾಮನ್, ಪ್ರತಿ ಬಜೆಟ್​​​​ ಮಂಡನೆ ಮಾಡಲು ಸಾಲ ಪಡೆಯುವ ಬಗ್ಗೆ ಹೇಗೆ? ಹಾಗೂ ಭಾರತದ ಆರ್ಥಿಕತೆ ತೊಂದರೆಯಾಗದಂತೆ ಕಡಿಮೆ ಸಾಲ ಮಾಡುವುದು ಹೇಗೆ? ಎಂಬ ಬಗ್ಗೆ ಎನ್​​ಡಿಟಿವಿ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ದೇಶದ ಬೆಳೆಯುತ್ತಿರುವ ಆರ್ಥಿಕತೆಯು ಅದರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಾಲದ ಅಗತ್ಯ ಇದೆ. ಆದರೆ ಆ ಬೆಳವಣಿಗೆ ಪರಿಣಾಮ ಬೀರದಂತೆ ಸಾಲ ಪಡೆಯಬೇಕು ಹಾಗೂ ಸಾಲವನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಹಾಗೂ ಪ್ರತಿ ವರ್ಷ ತಾತ್ಕಾಲಿಕ ಪರಿಹಾರ ನಿಭಾಯಿಸಲು ಸರ್ಕಾರಕ್ಕೆ ಸಾಲ ಒಂದು ಮಾರ್ಗವಾಗಿದೆ. ಆದರೆ ಅದು ಅಲ್ಲ , ಸ್ಥೂಲ ಆರ್ಥಿಕ ದೃಷ್ಟಿಕೋನದಿಂದ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ವಿತ್ತೀಯ ಕೊರತೆಯನ್ನು ನಿಭಾಯಿಸಲು ನಮ್ಮ ಸರ್ಕಾರ ಆರೋಗ್ಯಕರ ಆಯ್ಕೆಯನ್ನು ಆರಿಸಿದ್ದೇವೆ. ವಿತ್ತೀಯ ಕೊರತೆ ಮಾತ್ರ ನೋಡುವ ಬದಲು, ಅದನ್ನು ಹೇಗೆ ನಿಭಾಯಿಸಿಕೊಂಡ ಸಾಲವನ್ನು ಕಡಿಮೆ ಮಾಡಬಹುದು ಎಂಬದನ್ನು ಮೊದಲು ತಿಳಿದುಕೊಳ್ಳಬೇಕು. ಆದರೆ ಬೆಳೆಯುತ್ತಿರುವ ಆರ್ಥಿಕತೆಗೆ ಸಾಲ ಪಡೆಯುವುದು ಅತ್ಯಗತ್ಯವಾಗಿರುತ್ತದೆ.

ಒಂದು ವೇಳೆ ಸ್ವತ್ತು ಸೃಷ್ಟಿಗೆ, ಸೇವೆ ಮಾಡಲು ಅಥವಾ ಪ್ರಸ್ತುತ ಸಾಲವನ್ನು ಕಡಿಮೆ ಮಾಡಲು ಬಳಸುತ್ತೀರಾ? ಎನ್ನುದ್ದಾರೆ ಈ ತಂತ್ರವನ್ನು ಬಳಸಿಕೊಳ್ಳುವುದು ಸರಿಯಲ್ಲ. ಸಾಲವನ್ನು ಬೆಳೆಸಿಕೊಂಡು ಹೋಗುವ ಬದಲು ಸಾಲವನ್ನು ಕಡಿಮೆ ಮಾಡುವುದು ಒಳ್ಳೆಯದ್ದು, ಆದರೆ ಸಾಲ ಕಡಿಮೆ ಮಾಡುವ ಭರದಲ್ಲಿ ಆರ್ಥಿಕತೆಯ ಬೆಳೆವಣಿಗೆ ಪರಿಣಾಮ ಉಂಟು ಮಾಡದ ರೀತಿಯಲ್ಲಿ ನೋಡಿಕೊಳ್ಳಬೇಕು. ಇನ್ನು ಸಾಲ ಪಡೆದು ಆಸ್ತಿ ಸಂಪಾದಿಸುವುದು ಕೂಡ ಸರಿಯಾದ ನಿಯಮವಲ್ಲ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಎನ್‌ಕೆ ಸಿಂಗ್ ಸಮಿತಿಯ ವರದಿ ಬಗ್ಗೆ ಚರ್ಚೆಯನ್ನು ನಡೆಸಿದ್ದು, ಆ ಮೂಲಕ ಸಾಲದ ಸಂಖ್ಯೆಯನ್ನು ನೋಡುವ ಬದಲು ಬೆಳವಣಿಗೆ, ಆಸೆಗಳು ಮತ್ತು ಆಕಾಂಕ್ಷೆಗಳಿಗೆ ಧಕ್ಕೆಯಾಗದಂತೆ ಸಾಲವನ್ನು ಕಡಿಮೆ ಮಾಡುತ್ತ ಬರುತ್ತೇವೆ ಎಂದು ಹೇಳಿದರು.

ಇನ್ನು ಈ ಸಂದರ್ಶನದಲ್ಲಿ ಒಟ್ಟು ಬಜೆಟ್​​​ ಬಗ್ಗೆ ಸಚಿವೆ ಸೀತಾರಾಮನ್ ಮಾತನಾಡಿದ್ದಾರೆ. ಈ ಬಜೆಟ್​​ ಬಗ್ಗೆ ಹೊಸ ಚರ್ಚೆ ಬೇಡ ಹಾಗೂ ಈ ಬಜೆಟ್​​​ ವಿವರಣೆ ಮಾಡಲು ತಜ್ಞರ ಅಗತ್ಯ ಇಲ್ಲ. ನಾನೇ ಇದನ್ನು ವಿವರಿಸುತ್ತೇನೆ ಎಂದರು. ಪ್ರತಿಯೊಂದು ಬಜೆಟ್​​ ವಿಷಯದಲ್ಲೂ ನಮಗೆ ಸವಾಲಾಗಿರುತ್ತದೆ. ಅದರ ಭಾಷೆ ಕೂಡ ಅಷ್ಟೆ ಗೊಂದಲವಾಗಿರುತ್ತದೆ. ಆದರೆ ಅದನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ನಾವು ತಿಳಿಸಿದ್ದೇವೆ. ಇದು ಪ್ರಧಾನಿ ಮೋದಿ ಅವರ ಬಯಕೆ ಕೂಡ ಹೌದು.

ಇದನ್ನೂ ಓದಿ: ಬದಲಾಗುತ್ತಿದೆ ಆರ್​​ಬಿಐ ನಿಯಮ… ಬ್ಯಾಂಕ್​ಗೆ ಹೋಗಿ ಕ್ಯಾಷ್ ವಿತ್​ಡ್ರಾ ಮಾಡುವ ಮುನ್ನ ಇದು ತಿಳಿದಿರಿ…

ಅದಕ್ಕಾಗಿ ಪ್ರತಿ ಬಜೆಟ್​​ ಮಂಡನೆ ಮೊದಲು ಬಜೆಟ್​​ ಸಭೆಯಲ್ಲಿ ಈ ಬಗ್ಗೆ ಫೈನ್-ಟ್ಯೂನ್ ಮಾಡಲು ಪ್ರಯತ್ನಿಸುತ್ತೇವೆ. ಆದ್ದರಿಂದ ಅಂತಿಮವಾಗಿ ಅದು ಸರಳವಾದ ದಾಖಲೆಯಾಗಬೇಕು. ನನ್ನ ಬಾಲ್ಯದಲ್ಲಿ, ಬಜೆಟ್ ಡಾಕ್ಯುಮೆಂಟ್ ತುಂಬಾ ಸಂಕೀರ್ಣವಾಗಿತ್ತು. ಅದನ್ನು ಜನ ಮೊದಲು ಅರ್ಥ ಮಾಡಿಕೊಂಡು, ಅದರ ಒಳಗೆ ಏನಿದೆ, ಏನಿಲ್ಲ ಎಂಬ ಬಗ್ಗೆ ಚರ್ಚೆ ಮಾಡುತ್ತಾರೆ. ಅದು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ ಬಜೆಟ್ ತನ್ನಷ್ಟಕ್ಕೆ ತಾನೇ ಮಾತನಾಡುತ್ತದೆ ಎಂದು ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ