AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಟೀಚರ್ ಮಗ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯ; ಭಾರತದ ಮೊದಲ ಐಪಿಒದಿಂದ ಅತಿದೊಡ್ಡ ಐಪಿಒವರೆಗೆ ರೋಚಕ ಪ್ರಯಾಣ

ಉಳ್ಳವರು ಮಾತ್ರವೇ ದೊಡ್ಡ ಉದ್ಯಮ ಕಟ್ಟಲು ಸಾಧ್ಯವಿದ್ದ ಕಾಲ ಅದು. ಸಾಧಾರಣ ಟೀಚರ್ ಮಗನಾಗಿದ್ದ ಧೀರೂಭಾಯ್ ಅಂಬಾನಿ ರಿಲಯನ್ಸ್ ಉದ್ಯಮ ಕಟ್ಟಿದ ಕಥೆ ರೋಚಕ, ರೋಮಾಂಚಕ. 1977ರಲ್ಲಿ ಭಾರತದ ಮೊದಲ ಐಪಿಒ ಎನ್ನುವ ದಾಖಲೆ ಬರೆದಿತ್ತು ರಿಲಯನ್ಸ್ ಇಂಡಸ್ಟ್ರೀಸ್. ಇವತ್ತು ರಿಲಯನ್ಸ್​ಗೆ ಸೇರಿದ ಜಿಯೋ ಪ್ಲಾಟ್​ಫಾರ್ಮ್ಸ್ ಅತಿದೊಡ್ಡ ಐಪಿಒ ಎನಿಸುತ್ತಿದೆ.

ಶಾಲಾ ಟೀಚರ್ ಮಗ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯ; ಭಾರತದ ಮೊದಲ ಐಪಿಒದಿಂದ ಅತಿದೊಡ್ಡ ಐಪಿಒವರೆಗೆ ರೋಚಕ ಪ್ರಯಾಣ
ಮುಕೇಶ್ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 14, 2026 | 12:08 PM

Share

ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ದೊಡ್ಡ ಕನಸು ಕಾಣುವುದು ಮತ್ತು ಆ ಕನಸನ್ನು ನಡಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಧೀರೂಭಾಯಿ ಅಂಬಾನಿ ಅವರ ಜೀವನವೇ ಒಂದು ರೋಮಾಂಚಕ ಉತ್ತರವಾಗಿದೆ. ಗುಜರಾತ್‌ನ ಸಣ್ಣ ಹಳ್ಳಿಯಿಂದ ಮುಂಬೈಗೆ ಬಂದು, ವ್ಯಾಪಾರದಲ್ಲಿ ತೊಡಗಿ, ವಿಶ್ವದ ಬೆರಗುಗೊಳಿಸುವ ಬಹುಕೋಟಿ ಸಾಮ್ರಾಜ್ಯವನ್ನು ಕಟ್ಟಿದ ಅವರ ಹಾದಿ ಕೇವಲ ಒಂದು ಕಾರ್ಪೊರೇಟ್ ಯಶಸ್ಸಿನ ಕಥೆಯಲ್ಲ; ಅದು ಭಾರತೀಯರ ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ.

ಸಾಮಾನ್ಯವಾಗಿ ದೊಡ್ಡ ಕಂಪನಿಗಳನ್ನು ಕಟ್ಟುವುದು ಕೆಲವೇ ಕೆಲವು ಪ್ರಭಾವಿ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಕಾಲವಿತ್ತು. ಆದರೆ ಧೀರೂಭಾಯಿ ಅಂಬಾನಿ ಅವರು ಈ ನಂಬಿಕೆಯನ್ನು ಬದಲಾಯಿಸಿದರು. 17ರ ಹರೆಯದಲ್ಲಿ ಯೆಮೆನ್ ದೇಶದಲ್ಲಿ ಪೆಟ್ರೋಲ್ ಪಂಪ್​ನಲ್ಲಿ ಕೆಲಸ ಮಾಡುತ್ತಿದ್ದ ಧೀರೂಬಾಯ್, ಮುಂಬೈಗೆ ಬಂದು ಟ್ರೇಡಿಂಗ್ ಬ್ಯುಸಿನೆಸ್ ಮಾಡಿ, ಆ ಬಳಿಕ ನಡೆಸಿದ ಅವರ ಉದ್ಯಮ ಪ್ರಯಾಣ ನಿಜಕ್ಕೂ ಬೆರಗುಗೊಳಿಸುವಂತಹದ್ದು. ಅವರು ಸ್ಥಾಪಿಸಿದ ಉದ್ಯಮ ಸಾಮ್ರಾಜ್ಯ ಇವತ್ತು ಜಾಗತಿಕ ಮಟ್ಟದಲ್ಲಿ ಬೃಹತ್ತಾಗಿ ಬೆಳೆದಿದೆ. ರಿಲಯನ್ಸ್ ಸಾಮ್ರಾಜ್ಯದ ಚುಕ್ಕಾಣಿ ಹಿಡಿದವರ ಕನಸು, ಪರಿಶ್ರಮ, ಹಠ, ಉದ್ಯಮಶೀಲತಾ ಕೌಶಲ್ಯ ಇವೆಲ್ಲವೂ ಮೇಳೈಸಿದ್ದರಿಂದ ಇದು ಸಾಧ್ಯವಾಗಿದೆ.

ಭಾರತದ ಮೊದಲ ಐಪಿಒ ಎಂದು ದಾಖಲೆ ನಿರ್ಮಿಸಿದ ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್​ನ ಐಪಿಒ ಆಧುನಿಕ ಭಾರತದ ಷೇರು ಮಾರುಕಟ್ಟೆಯ ಮೊದಲ ಐಪಿಒ ಎನಿಸಿದೆ. ಇವತ್ತು ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ ಅಸ್ತಿತ್ವಕ್ಕೆ ಬರುವ ಮುನ್ನವೇ ಬಂದ ಐಪಿಒ. 1977ರಲ್ಲಿ ರಿಲಯನ್ಸ್ ಸಂಸ್ಥೆಯು ಸಾರ್ವಜನಿಕ ಶೇರುಗಳ ಬಿಡುಗಡೆ (IPO) ಮಾಡಿದಾಗ, ಸಾಮಾನ್ಯ ಭಾರತೀಯರನ್ನು ತಮ್ಮ ಆರ್ಥಿಕ ಪ್ರಗತಿಯಲ್ಲಿ ಪಾಲುದಾರರನ್ನಾಗಿ ಮಾಡಿಕೊಂಡರು. ಇದು ಕೇವಲ ಬಂಡವಾಳ ಸಂಗ್ರಹಣೆಯಾಗಿರಲಿಲ್ಲ; ಭಾರತದ ಪ್ರತಿಯೊಬ್ಬ ಸಾಮಾನ್ಯ ಕುಟುಂಬದ ಪ್ರಜೆಯೂ ದೇಶದ ಭವಿಷ್ಯದ ಆರ್ಥಿಕತೆಯಲ್ಲಿ ತಾನೂ ಒಬ್ಬ ಪಾಲುದಾರ ಎಂಬ ಹೆಮ್ಮೆಯನ್ನು ಹೊಂದುವಂತೆ ಮಾಡಿತು. ಅಂದು ಆರಂಭವಾದ ಈ ನಂಬಿಕೆ ಮತ್ತು ಹಂಚಿಕೆಯ ಸಮೃದ್ಧಿಯ ಸಂಸ್ಕೃತಿಯೇ ಇಂದಿನ ರಿಲಯನ್ಸ್‌ನ ಬಲಿಷ್ಠ ಬುನಾದಿಯಾಗಿದೆ.

ಇದನ್ನೂ ಓದಿ: 6G India: ಭಾರತದಲ್ಲಿ 6G ಸೇವೆ ಯಾವಾಗ ಆರಂಭ? ಶೀಘ್ರದಲ್ಲೇ ಜಿಯೋದಿಂದ ಬಿಡುಗಡೆ

1,000 ರೂನಿಂದ 52 ಲಕ್ಷ ರೂ; ಹೂಡಿಕೆದಾರರಿಗೆ ಹಣದ ಸುಗ್ಗಿ

1977ರ ರಿಲಯನ್ಸ್ ಐಪಿಒ ಭರ್ಜರಿ ಯಶಸ್ಸು ಪಡೆದಿತ್ತು. 10 ರೂ ಬೆಲೆಯ ಷೇರುಗಳು ಐಪಿಒದಲ್ಲಿ ಏಳು ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿತ್ತು. ಅಂದು ಯಾರಾದರೂ 1,000 ರೂ ಹೂಡಿಕೆ ಮಾಡಿ 100 ಷೇರು ಖರೀದಿಸಿದ್ದರೆ ಇವತ್ತು ಆ ಹೂಡಿಕೆ ಬರೋಬ್ಬರಿ 52 ಲಕ್ಷ ರೂ ಆಗಿರುತ್ತಿತ್ತು. ಹೂಡಿಕೆ ಒಂದು ಲಕ್ಷ ರೂ ಆಗಿದ್ದರೆ ಅದು ಇವತ್ತು 52 ಕೋಟಿ ರೂ ಆಗಿ ಬೆಳೆದಿರುತ್ತಿತ್ತು. ಹೆಚ್ಚೂಕಡಿಮೆ 50 ವರ್ಷಗಳಲ್ಲಿ ರಿಲಯನ್ಸ್ ತನ್ನ ಹೂಡಿಕೆದಾರರಿಗೆ ಕೊಟ್ಟಿರುವ ಪ್ರತಿಫಲದ ಮೌಲ್ಯ ಇದು.

ಒಬ್ಬ ಸಾಧಾರಣ ಶಾಲಾ ಶಿಕ್ಷಕನ ಮಗನಾಗಿ ಧೀರಾಭಾಯ್ ಅಂಬಾನಿ ಅವರು ಇಷ್ಟು ದೊಡ್ಡ ರಿಲಯನ್ಸ್ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಸಾಧಾರಣ ಸಂಗತಿಯಾಗಿರಲಿಲ್ಲ. ಆ ಉದ್ಯಮ ನಿಂತ ನೀರಾಗದೆ ವರ್ಷದಿಂದ ವರ್ಷಕ್ಕೆ ಆಯಾ ಕಾಲಕ್ಕೆ ಅನುಗುಣವಾದ ಹೊಸ ಹೊಸ ಉದ್ದಿಮೆಗಳನ್ನು ಒಳಗೊಳ್ಳುತ್ತಾ ಹೋಗಿತ್ತು. ಧೀರೂಭಾಯ್ ಅವರ ನಂತರವೂ ಆ ಪರಂಪರೆ ಮುಂದುವರಿದಿದೆ.

ಮುಖೇಶ್ ಅಂಬಾನಿ ಅವರ ನೇತೃತ್ವದಲ್ಲಿ ಜಾಮ್‌ನಗರದ ಬೃಹತ್ ತೈಲ ಶುದ್ಧೀಕರಣ ಘಟಕದ (Refinery) ನಿರ್ಮಾಣದೊಂದಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಿತು. ಕೇವಲ 36 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಂಡ ಈ ಯೋಜನೆ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿತು. ತಂದೆಯ ಕನಸನ್ನು ಮುಂದುವರಿಸುತ್ತಾ, ಮುಖೇಶ್ ಅಂಬಾನಿ ಅವರು ತಂತ್ರಜ್ಞಾನ ಮತ್ತು ಡಿಜಿಟಲ್ ಸಂಪರ್ಕದ ಮೂಲಕ ದೇಶದ ಮೂಲೆಮೂಲೆಗೂ ಕ್ರಾಂತಿಯನ್ನು ತಂದರು.

ಇದನ್ನೂ ಓದಿ: ಪಿಎಂ ಗತಿಶಕ್ತಿ ಯೋಜನೆಗೆ 5 ವರ್ಷ: 18 ಲಕ್ಷ ಕೋಟಿ ರೂಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳ ನಿರ್ವಹಣೆ

ರಿಲಯನ್ಸ್​ನ ಮೂರನೇ ತಲೆಮಾರು…

ಇಂದು ರಿಲಯನ್ಸ್‌ನ ಮೂರನೇ ತಲೆಮಾರಿನವರಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಅವರು ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ (Retail) ಹಾಗೂ ಹಸಿರು ಇಂಧನ (Clean Energy) ಕ್ಷೇತ್ರಗಳಲ್ಲಿ ಈ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ರಿಲಯನ್ಸ್ ಫೌಂಡೇಶನ್ ಮೂಲಕ ನೀತಾ ಅಂಬಾನಿ ಅವರ ನೇತೃತ್ವದಲ್ಲಿ ಕೋಟ್ಯಂತರ ಜನರ ಜೀವನದಲ್ಲಿ ಬೆಳಕು ಚೆಲ್ಲುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ. ಭಾರತದಲ್ಲಿ ಹುಟ್ಟುವ ಯಾವುದೇ ವ್ಯವಹಾರವು ಇಡೀ ದೇಶದ ಜನರನ್ನು ಮೇಲೆತ್ತುವ ಶಕ್ತಿಯನ್ನು ಹೊಂದಿರಬೇಕು ಎಂಬ ವಾಗ್ದಾನದೊಂದಿಗೆ ರಿಲಯನ್ಸ್ ಮುನ್ನಡೆಯುತ್ತಿದೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ

1977ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಐಪಿಒ ಹೊಸ ಇತಿಹಾಸ ನಿರ್ಮಿಸಿತ್ತು. 49 ವರ್ಷಗಳ ನಂತರ ಇವತ್ತು ಮೂರನೇ ತಲೆಮಾರಿನವರ ನಾಯಕತ್ವದಲ್ಲಿ ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒ ಬರುತ್ತಿದೆ. 2026ರ ಅಕ್ಟೋಬರ್ 21ರಿಂದ 23ರವರೆಗೆ ಇರುವ ಐಪಿಒದ ಗಾತ್ರ ಬರೋಬ್ಬರಿ 30,000 ಕೋಟಿ ರೂಗಿಂತಲೂ ಹೆಚ್ಚು. ಭಾರತದ ಇತಿಹಾಸದಲ್ಲೇ ಇದು ಅತಿದೊಡ್ಡ ಐಪಿಒ ಎನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ