AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೀ ಸಂಸ್ಥಾಪಕ ಸುಭಾಷ್ ಚಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ಎಸ್ಸೆಲ್ ಗ್ರೂಪ್ (Essel Group) ಮತ್ತು ಜೀ (Zee) ಸಂಸ್ಥಾಪಕ ಸುಭಾಷ್ ಚಂದ್ರ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಹೊಸ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗೆ ಸಾಲ ವಂಚನೆ ಎಸಗಿದ ಆರೋಪದ ಪ್ರಕರಣ ಇದಾಗಿದೆ. ಸಿಬಿಐ ಈ ಮೊದಲು ದಾಖಲಿಸಿದ ಕೇಸ್​ನ ಆಧಾರದ ಮೇಲೆ ಇಡಿ ಈ ಪ್ರಕರಣ ದಾಖಲಿಸಿದೆ.

ಝೀ ಸಂಸ್ಥಾಪಕ ಸುಭಾಷ್ ಚಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ
ಸುಭಾಷ್ ಚಂದ್ರImage Credit source: Vikas Khot/HT via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2026 | 5:19 PM

Share

ನವದೆಹಲಿ, ನವೆಂಬರ್ 2: ಎಸ್ಸೆಲ್ ಗ್ರೂಪ್‌ನ (Essel Group) ಮುಖ್ಯಸ್ಥ ಹಾಗೂ ಜೀ ಎಂಟರ್‌ಟೈನ್‌ಮೆಂಟ್‌ನ ಸ್ಥಾಪಕರಾದ ಸುಭಾಷ್ ಚಂದ್ರ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ED) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಹೊಸದಾಗಿ ಪ್ರಕರಣ ದಾಖಲಿಸಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗೆ 1,322 ಕೋಟಿ ರೂ ನಷ್ಟ ತಂದ ಸಾಲ ವಂಚನೆ ಆರೋಪ ಸಂಬಂಧದ ಪ್ರಕರಣ ಇದಾಗಿದೆ.

ಹಣಕಾಸು ವಹಿವಾಟುಗಳು ಮತ್ತು ಸಾಲ ಮರುಪಾವತಿ ವೈಫಲ್ಯಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ಇಡಿ, ಸುಭಾಷ್ ಚಂದ್ರ ಅವರ ವಿರುದ್ಧ ಪಿಎಂಎಲ್‌ಎ (PMLA) ಕಾಯ್ದೆಯ ಅಡಿಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಈ ಹಿಂದೆ, ಎಲ್​ಐಸಿ ಹೌಸಿಂಗ್ ಫಾನ್ಸ್ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲಿಸಿತ್ತು. ಇದರ ಆಧಾರದ ಮೇಲೆ ಇಡಿ ಕೇಸ್ ದಾಖಲಿಸಿಕೊಂಡಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಮೀರಿಸಿದ ಭಾರತದ ಷೇರುಬಜಾರು: ಗೋಲ್ಡ್​ಮನ್ ಸ್ಯಾಕ್ಸ್ ವರದಿ

ಕೃತಕವಾಗಿ ಆಸ್ತಿ ಮೌಲ್ಯ ಉಬ್ಬಿಸಿದ ಆರೋಪ ಸುಭಾಷ್ ಚಂದ್ರ ಮೇಲೆ

ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಪಡೆಯುವ ಸಲುವಾಗಿ ಸುಭಾಷ್ ಚಂದ್ರ ಅವರು ತಮ್ಮ ಆಸ್ತಿ ಮೌಲ್ಯವನ್ನು ಕೃತಕವಾಗಿ ಉಬ್ಬಿಸಿದ್ದರು. ಆ ಬಳಿಕ ಸಾಲ ಮರುಪಾವತಿ ಮಾಡದೆ ವಂಚನೆ ಎಸಗಿದರು ಎನ್ನುವ ಆರೋಪ ಇದು.

ಝೀ ಸಂಸ್ಥೆ ಸ್ಪಷ್ಟನೆ

ಸುಭಾಷ್ ಚಂದ್ರ ಅವರು ಸಂಸ್ಥಾಪಿಸಿದ ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಸಂಸ್ಥೆ ಇಡಿ ಕೇಸ್ ಬಗ್ಗೆ ಪ್ರತಿಕ್ರಿಯಿಸಿದೆ. ಜಾರಿ ನಿರ್ದೇಶನಾಲಯವು ಸುಭಾಷ್ ಚಂದ್ರ ವಿರುದ್ಧ ದಾಖಲಿಸಿರುವ ಪ್ರಕರಣವು ಅವರ ವೈಯಕ್ತಿಕವಾದುದು. ಝೀ ಸಂಸ್ಥೆಗೂ ಹಾಗೂ ಅದರ ವ್ಯವಹಾರಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ZEEL ತಿಳಿಸಿದೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ಹಿಂದಿನ ತನಿಖೆಗಳ ಮುಂದುವರಿಕೆ

ಕಂಪನಿಯ ಸಾಲ ವಿವಾದಗಳು ಮತ್ತು ವಿವಿಧ ಆರ್ಥಿಕ ಅನಿಯಮಿತತೆಗಳ ಆರೋಪಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸಲ್ಲಿಕೆಯಾದ ದೂರುಗಳು ಹಾಗೂ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇಡಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಮೂಲ ಮತ್ತು ಸಾಂಸ್ಥಿಕ ನಿಧಿಗಳ ತಿರುವುಗಳ ಕುರಿತು ಶೋಧ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More