AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today Bangalore: ಚಿನ್ನದ ಬೆಲೆ 10 ದಿನದಲ್ಲಿ 220 ರೂ ಏರಿಕೆ

Bullion Market 2025 December 7th: ಮೊನ್ನೆ ಶುಕ್ರವಾರ 20 ರೂ ಏರಿದ್ದ ಚಿನ್ನದ ಬೆಲೆ ಭಾನುವಾರವೂ 20 ರೂ ಹೆಚ್ಚಿದೆ. ಹತ್ತು ದಿನದಲ್ಲಿ 220 ರೂ ಹೆಚ್ಚಿದಂತಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 11,910 ರೂನಿಂದ 11,930 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,000 ರೂ ದಾಟಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 190 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 199 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ 10 ದಿನದಲ್ಲಿ 220 ರೂ ಏರಿಕೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 07, 2025 | 12:42 PM

Share

ಬೆಂಗಳೂರು, ಡಿಸೆಂಬರ್ 7: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ 10 ದಿನಗಳಿಂದ ತಕ್ಕಮಟ್ಟಿಗೆ ಏರಿವೆ. ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ 20 ರೂ ಅಲ್ಪ ಹೆಚ್ಚಳ ಹೊಂದಿದೆ. ಹತ್ತು ದಿನದಲ್ಲಿ ಬೆಲೆ (gold rate) ಗ್ರಾಮ್​ಗೆ 220 ರೂ ಹೆಚ್ಚಿದೆ. ಬೆಳ್ಳಿ ಬೆಲೆಯಂತೂ ಹತ್ತು ದಿನದಲ್ಲಿ 17 ರೂ ಏರಿದೆ. ನವೆಂಬರ್ 27ರಂದು ಬೆಳ್ಳಿ ಬೆಲೆ 173 ರೂ ಇತ್ತು. ಇದೀಗ 190 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,19,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,30,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,19,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 19,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,900 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,015 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,930 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,761 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,015 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,930 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,930 ರೂ
  • ಚೆನ್ನೈ: 12,040 ರೂ
  • ಮುಂಬೈ: 11,930 ರೂ
  • ದೆಹಲಿ: 11,945 ರೂ
  • ಕೋಲ್ಕತಾ: 11,930 ರೂ
  • ಕೇರಳ: 11,930 ರೂ
  • ಅಹ್ಮದಾಬಾದ್: 11,935 ರೂ
  • ಜೈಪುರ್: 11,945 ರೂ
  • ಲಕ್ನೋ: 11,945 ರೂ
  • ಭುವನೇಶ್ವರ್: 11,930 ರೂ

ಇದನ್ನೂ ಓದಿ: ಎಲ್​ಐಸಿ ಎರಡು ಹೊಸ ಪ್ಲಾನ್​ಗಳು ಬಿಡುಗಡೆ; ಮಾರ್ಕೆಟ್ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 545 ರಿಂಗಿಟ್ (11,924 ರುಪಾಯಿ)
  • ದುಬೈ: 468.25 ಡಿರಾಮ್ (11,470 ರುಪಾಯಿ)
  • ಅಮೆರಿಕ: 130.50 ಡಾಲರ್ (11,738 ರುಪಾಯಿ)
  • ಸಿಂಗಾಪುರ: 169.50 ಸಿಂಗಾಪುರ್ ಡಾಲರ್ (11,764 ರುಪಾಯಿ)
  • ಕತಾರ್: 467.50 ಕತಾರಿ ರಿಯಾಲ್ (11,537 ರೂ)
  • ಸೌದಿ ಅರೇಬಿಯಾ: 476 ಸೌದಿ ರಿಯಾಲ್ (11,407 ರುಪಾಯಿ)
  • ಓಮನ್: 49.30 ಒಮಾನಿ ರಿಯಾಲ್ (11,517 ರುಪಾಯಿ)
  • ಕುವೇತ್: 38.34 ಕುವೇತಿ ದಿನಾರ್ (11,234 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 190 ರೂ
  • ಚೆನ್ನೈ: 199 ರೂ
  • ಮುಂಬೈ: 190 ರೂ
  • ದೆಹಲಿ: 190 ರೂ
  • ಕೋಲ್ಕತಾ: 190 ರೂ
  • ಕೇರಳ: 196 ರೂ
  • ಅಹ್ಮದಾಬಾದ್: 190 ರೂ
  • ಜೈಪುರ್: 190 ರೂ
  • ಲಕ್ನೋ: 190 ರೂ
  • ಭುವನೇಶ್ವರ್: 199 ರೂ
  • ಪುಣೆ: 190

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ