AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಡಿಪಿ ದತ್ತಾಂಶದ ಬಗ್ಗೆ ಎದ್ದ ಗೊಂದಲಗಳಿಗೆ ಕೇಂದ್ರದಿಂದ ಸ್ಪಷ್ಟನೆ; ವಿವಿಧ ಪ್ರಶ್ನೆಗಳಿಗೆ ಸಮಾಧಾನ

ಭಾರತದ ಆರ್ಥಿಕತೆಯು ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ನಿರೀಕ್ಷೆಮೀರಿದ ಶೇ. 7.8ರಷ್ಟು ಬೆಳವಣಿಗೆ ಹೊಂದಿದೆ. ಈ ಜಿಡಿಪಿ ದತ್ತಾಂಶದ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ಸಮಾಧಾನ ನೀಡಲು ಕೇಂದ್ರ ಸಾಂಖ್ಯಿಕ ಸಚಿವಾಲಯವು ಇಂದು ಸ್ಪಷ್ಟೀಕರಣ ನೀಡಿದೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ನಕಾರಾತ್ಮಕ ಡೀಫ್ಲೇಟರ್, ಜಿಡಿಪಿ ಪರಿಷ್ಕರಣೆ, ಸಿಪಿಐ ಡಬ್ಲ್ಯುಪಿಐ ವ್ಯತ್ಯಾಸಗಳು ಇತ್ಯಾದಿ ವಿಚಾರದ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

ಜಿಡಿಪಿ ದತ್ತಾಂಶದ ಬಗ್ಗೆ ಎದ್ದ ಗೊಂದಲಗಳಿಗೆ ಕೇಂದ್ರದಿಂದ ಸ್ಪಷ್ಟನೆ; ವಿವಿಧ ಪ್ರಶ್ನೆಗಳಿಗೆ ಸಮಾಧಾನ
ಜಿಡಿಪಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 02, 2026 | 7:05 PM

Share

ನವದೆಹಲಿ, ಸೆಪ್ಟೆಂಬರ್ 2: ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳೆದಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿಯಲ್ಲಿನ ಕೆಲ ದತ್ತಾಂಶದ ಕುರಿತು ಉದ್ಭವಿಸಿರುವ ವಿವಿಧ ಪ್ರಶ್ನೆಗಳಿಗೆ ಸಚಿವಾಲಯವು ಸ್ಪಷ್ಟೀಕರಣ ನೀಡಿದೆ. 2022-23ರ ಹೊಸ ಆಧಾರ ವರ್ಷದೊಂದಿಗೆ ಬಿಡುಗಡೆಯಾಗಿರುವ ಆ ವರದಿಯಲ್ಲಿ, ಉತ್ಪಾದನಾ ವಲಯದ ಡಿಫ್ಲೇಟರ್, ಜಿಡಿಪಿ ಪರಿಷ್ಕರಣೆ ಹಾಗೂ ಸಿಪಿಐ – ಡಬ್ಲ್ಯೂಪಿಐ ವ್ಯತ್ಯಾಸಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ.

ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಮುಖ್ಯಾಂಶಗಳು

ಉತ್ಪಾದನಾ ವಲಯದಲ್ಲಿ ನಕಾರಾತ್ಮಕ ಡಿಫ್ಲೇಟರ್ (-1.5%): ‘ಡಬಲ್-ಡಿಫ್ಲೇಶನ್’ ವಿಧಾನವನ್ನು ಬಳಸುತ್ತಿರುವುದರಿಂದ, ಕಚ್ಚಾ ವಸ್ತುಗಳ (ಇನ್‌ಪುಟ್) ಬೆಲೆಗಳು ಸಿದ್ಧ ಉಡುಪು/ಸರಕುಗಳ (ಔಟ್‌ಪುಟ್) ಬೆಲೆಗಳಿಗಿಂತ ವೇಗವಾಗಿ ಹೆಚ್ಚಾದಾಗ ನಕಾರಾತ್ಮಕ ಜಿವಿಎ (GVA) ಡಿಫ್ಲೇಟರ್ ಕಂಡುಬರುತ್ತದೆ. ಇದರರ್ಥ ಸರಕುಗಳ ಬೆಲೆ ಕುಸಿದಿದೆ ಎಂದಲ್ಲ, ಬದಲಾಗಿ ಇನ್‌ಪುಟ್ ಮತ್ತು ಔಟ್‌ಪುಟ್ ವೆಚ್ಚಗಳ ವ್ಯತ್ಯಾಸವನ್ನು ಇದು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಜಾಗತಿಕ ರಂಗದಲ್ಲಿ ಭಾರತದ ಹೊಳಪು: ಶೇ. 7.8 ಜಿಡಿಪಿ ವೃದ್ಧಿಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್

ಜಿಡಿಪಿ ಲೆಕ್ಕಾಚಾರದ ಪರಿಷ್ಕರಣೆ: ಕಳೆದ ವರ್ಷದ ಜಿಡಿಪಿ ಸಂಖ್ಯೆಯನ್ನು ₹86 ಲಕ್ಷ ಕೋಟಿಯಿಂದ ₹80 ಲಕ್ಷ ಕೋಟಿಗೆ ಕೃತಕವಾಗಿ ತಗ್ಗಿಸಲಾಗಿದೆ ಎಂಬ ಆರೋಪವನ್ನು ಸಚಿವಾಲಯ ತಳ್ಳಿಹಾಕಿದೆ. 2011-12ರ ಹಳೆಯ ಆಧಾರ ವರ್ಷದಿಂದ 2022-23ರ ಹೊಸ ಆಧಾರ ವರ್ಷಕ್ಕೆ ಬದಲಾದಾಗ ಹಾಗೂ ಹೊಸ ಪಿಪಿಐ (PPI) ಮತ್ತು ಐಐಪಿ (IIP) ಡೇಟಾ ಸೇರ್ಪಡೆಯಾದಾಗ ಈ ತಾಂತ್ರಿಕ ಬದಲಾವಣೆ ಸಹಜವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದೆ.

ಜಿಡಿಪಿ, ಸಿಪಿಐ ಮತ್ತು ಡಬ್ಲ್ಯೂಪಿಐ ನಡುವಿನ ವ್ಯತ್ಯಾಸ: ಸಿಪಿಐ ಗ್ರಾಹಕರ ಹಂತದ ಬೆಲೆಗಳನ್ನು ಮತ್ತು ಡಬ್ಲ್ಯೂಪಿಐ ಸಗಟು ಬೆಲೆಗಳನ್ನು ಅಳೆಯುತ್ತದೆ. ಆದರೆ ಜಿಡಿಪಿ ಡಿಫ್ಲೇಟರ್ ಇಡೀ ಆರ್ಥಿಕತೆಯ (ಸರ್ಕಾರಿ ವೆಚ್ಚ, ಸೇವಾ ವಲಯ, ಹೂಡಿಕೆ) ಮೌಲ್ಯವರ್ಧನೆಯನ್ನು ಪ್ರತಿನಿಧಿಸುವುದರಿಂದ, ಇವುಗಳ ಹಣದುಬ್ಬರ ದರಗಳಲ್ಲಿ ವ್ಯತ್ಯಾಸವಿರುವುದು ಸಹಜ.

ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?

ಗಣಿಗಾರಿಕೆ ವಲಯದ ಪ್ರಗತಿ: ಗಣಿಗಾರಿಕೆ ವಲಯದ ನೈಜ ಜಿವಿಎ ಪ್ರಗತಿ -2.4% ಇದ್ದರೆ, ನಾಮಿನಲ್ ಜಿವಿಎ ಪ್ರಗತಿ 22.3% ತಲುಪಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (69%+ ಬೆಲೆ ಏರಿಕೆ) ಹಾಗೂ ಲೋಹದ ಅದಿರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದೇ ಈ ದೊಡ್ಡ ವ್ಯತ್ಯಾಸಕ್ಕೆ ಕಾರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Wed, 2 September 26

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ