AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಇಂಧನವಾಗಿ ಎಥನಾಲ್; ಎಲ್​ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ?

Govt thinks of using ethanol as cooking gas: ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸುವಂತೆ ಮಾಡಲು ಸರ್ಕಾರ ಯೋಚಿಸುತ್ತಿದೆ. ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಎಥನಾಲ್ ಅನ್ನು ಬಳಸಲು ಸರ್ಕಾರ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿರಬಹುದು. ಎಥನಾಲ್ ಅನ್ನು ಎಲ್​ಪಿಜಿ ರೀತಿಯಲ್ಲಿ ಅಡುಗೆ ಇಂಧನವಾಗಿ ಬಳಸಬಹುದು. ಆದರೆ, ಅದಕ್ಕೆ ಅದರದ್ದೇ ವಿಶೇಷ ಸ್ಟೌವ್ ಬೇಕಾಗುತ್ತದೆ.

ಅಡುಗೆ ಇಂಧನವಾಗಿ ಎಥನಾಲ್; ಎಲ್​ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ?
ಕೆಲ ತಿಂಗಳ ಹಿಂದೆ ಅಸ್ಸಾಮ್​ನಲ್ಲಿ ಎಥನಾಲ್ ಫ್ಯಾಕ್ಟರಿ ಉದ್ಘಾಟನೆ ವೇಳೆ ನರೇಂದ್ರ ಮೋದಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 20, 2026 | 7:19 PM

Share

ಬೆಂಗಳೂರು, ಜುಲೈ 20: ಜೈವಿಕ ಇಂಧನವೆನಿಸಿರುವ (Bio-fuel) ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (EBP- Ethanol blended Petrol) ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಈಗ ಈ ಬೆಳವಣಿಗೆ ನಡೆದಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಎಥನಾಲ್ ಅನ್ನು ಅಡುಗೆ ಅನಿಲವಾಗಿ ಬಳಸಲು ಸಾಧ್ಯವಾಗುವಂತೆ ಪಾಲಿಸಿ ಫ್ರೇಮ್​ವರ್ಕ್​ವೊಂದನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಸರ್ಕಾರ ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಲು ಯೋಚಿಸಲು ಹಲವು ಕಾರಣಗಳಿವೆ. ಭಾರತದಲ್ಲಿ ಎಥನಾಲ್ ಬಹಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದು ಒಂದು ಕಾರಣ. ಎಥನಾಲ್ ಶುದ್ಧ ಇಂಧನ ಎನ್ನುವುದು ಎರಡನೇ ಕಾರಣ. ಹಾಗೆಯೇ, ಎಥನಾಲ್ ಬಳಕೆಯಿಂದ ತೈಲ ಆಮದು ತಗ್ಗಿಸಬಹುದು. ಮತ್ತು ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೂ ಲಾಭ ಆಗುತ್ತದೆ. ಹೀಗಾಗಿ, ಹೆಚ್ಚುವರಿ ಎಥನಾಲ್ ಅನ್ನು ಸಮರ್ಪಕವಾಗಿ ವಿನಿಯೋಗಿಸಲು ಸರ್ಕಾರ ವಾಹನಗಳಾಚೆ ಅಡುಗೆ ಮನೆಗಳತ್ತ ಚಿತ್ತ ಇಟ್ಟಿದೆ.

ಇದನ್ನೂ ಓದಿ: ಗುರಿಗಿಂತ 5 ವರ್ಷ ಮುಂಚೆಯೇ ಇ20 ಅಳವಡಿಕೆ: ಸಚಿವ ಸುರೇಶ್ ಗೋಪಿ

ಸಕ್ಕರೆ ಬಳಕೆ ಮಾಡಿ ಎಂದು ಮೋದಿ ಕರೆ ಕೊಟ್ಟಿದ್ದು ನೆನಪಿದೆಯಾ?

ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳಲ್ಲಿ ಆಡುವ ಕೆಲ ನುಡಿಗಳು ಯಾವುದನ್ನೋ ಸೂಚಿಸುತ್ತದೆ ಎಂದು ಹೇಳುವವರಿದ್ದಾರೆ. ಕೆಲ ತಿಂಗಳ ಹಿಂದೆ ಮೋದಿ ಅವರು ರೇಡಿಯೋ ಭಾಷಣದಲ್ಲಿ ಮಾತನಾಡುತ್ತಾ, ಜನರು ತಮ್ಮ ಸಕ್ಕರೆ ಮತ್ತು ಎಣ್ಣೆ ಸೇವನೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಅದಕ್ಕೆ ಓಗೊಟ್ಟು ಜನರು ಸಕ್ಕರೆ ಸೇವನೆ ಕಡಿಮೆ ಮಾಡಿದರೆ, ಅವರ ಆರೋಗ್ಯ ಸುಧಾರಿಸುವುದು ಹೌದು. ಹಾಗೆಯೇ, ಸಕ್ಕರೆಗೆ ಬೇಡಿಕೆ ತಗ್ಗುತ್ತದೆ. ಆಗ ಸಕ್ಕರೆ ಕಾರ್ಖಾನೆಗಳು ಎಥನಾಲ್ ಅನ್ನು ಹೆಚ್ಚೆಚ್ಚು ಉತ್ಪತ್ತಿ ಮಾಡಲು ಅವಕಾಶ ಇರುತ್ತದೆ. ಅಂದರೆ, ಜನರು ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಎಥನಾಲ್ ಉತ್ಪಾದನೆ ಹೆಚ್ಚುತ್ತದೆ. ಇದು ನರೇಂದ್ರ ಮೋದಿ ಅವರ ಸಂದೇಶದ ಹಿಂದಿನ ಆಶಯವಾಗಿತ್ತಾ?

ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಲು ಸಾಧ್ಯವಾ?

ಹೌದು, ಎಥನಾಲ್ ಅನ್ನು ಅಡುಗೆ ಇಂಧನವಾಗಿ ಬಳಸಬಹುದು. ಈಗಾಗಲೇ ಹಲವು ಸಂಶೋಧನೆಗಳು ಇದನ್ನು ಖಚಿತಪಡಿಸಿವೆ. ಆದರೆ, ಎಲ್​ಪಿಜಿಗೆ ಅದರದ್ದೇ ಸ್ಟೋವ್ ಬೇಕಿರುವಂತೆ, ಎಥನಾಲ್ ಇಂಧನಕ್ಕೂ ಅದರದ್ದೇ ಸ್ಟೌವ್ ಬೇಕಾಗುತ್ತದೆ. ಎಲ್​ಪಿಜಿ ಸ್ಟೌವ್ ಅನ್ನು ಎಥನಾಲ್ ಇಂಧನಕ್ಕೆ ಬಳಸಲು ಆಗುವುದಿಲ್ಲ.

ಇದನ್ನೂ ಓದಿ: ಸಕ್ಕರೆ ಕಡಿಮೆ ತಿನ್ನಿ, ದಿನವೂ ಯೋಗ ಮಾಡಿ; ಆರೋಗ್ಯದ ರಹಸ್ಯ ಹೇಳಿದ ಪ್ರಧಾನಿ ಮೋದಿ

ಈ ಹಿನ್ನೆಲೆಯಲ್ಲಿ ಸರ್ಕಾರವು ಎಥನಾಲ್ ಬಳಕೆಯನ್ನು ಉತ್ತೇಜಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಗಮನಾರ್ಹ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಹಂತ ಹಂತವಾಗಿ ಜಾರಿ ಮಾಡಲು ಮುಂದಾಗಬಹುದು. ಎಥನಾಲ್ ಅನ್ನು ವಿವಿಧ ಮೂಲಗಳಿದ ಉತ್ಪಾದಿಸುವತ್ತಲೂ ಸರ್ಕಾರ ಗಮನ ಹರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Mon, 20 July 26

Follow Us